ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ 'ಬಿಎಲ್‌ಎಂ' ಮೂಲೆಗುಂಪಾಗಿದ್ದಕ್ಕೆ ಹೋಲ್ಡರ್‌ ಬೇಸರ

Jason Holder disappointed that Black Lives Matter movement not part of IPL

ದುಬೈ: ಆಫ್ರಿಕನ್ ಅಮೆರಿಕನ್ ಹಿಪ್‌-ಹಾಪ್ ಕಲಾವಿದ ಜಾರ್ಜ್ ಫ್ಲಾಯ್ಡ್ ಅವರ ಸಾವಿನ ಬಳಿಕ ವಿಶ್ವದಾದ್ಯಂತ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಚಳುವಳಿ ಜೋರಾಗಿತ್ತು. ಕರಿಯರ ಮೇಲಿನ ದೌರ್ಜನ್ಯ, ವರ್ಣಬೇಧ, ಜನಾಂಗೀಯ ಬೇಧದ ಬಗ್ಗೆ ವಿಶ್ವದೆಲ್ಲೆಡೆ ವಿರೋಧ ಕೇಳಿಬಂದಿತ್ತು.

ಕ್ರಿಕೆಟ್ ಮೈದಾನದಲ್ಲಿ ಕೆಲ ಆಟಗಾರರು 2 ಕ್ಯಾಪ್ ಧರಿಸುವುದು ಏಕೆ?ಕ್ರಿಕೆಟ್ ಮೈದಾನದಲ್ಲಿ ಕೆಲ ಆಟಗಾರರು 2 ಕ್ಯಾಪ್ ಧರಿಸುವುದು ಏಕೆ?

ವಿಶ್ವದಲ್ಲಿ ನಡೆದ ಎಲ್ಲಾ ಪ್ರಮುಖ ಕ್ರೀಡಾಕೂಟಗಳ ವೇಳೆಯೂ 'ಬ್ಲ್ಯಾಕ್ಸ್ ಲೈವ್ಸ್ ಮ್ಯಾಟರ್‌'ಗೆ ಬೆಂಬಲ ಸೂಚಿಸುವ ಮೂಲಕ ಅಲ್ಲಿನ ಆಯೋಚಕರು, ಕ್ರೀಡಾಪಟುಗಳು ಮಾನವೀಯತೆಯ ಕಡೆಗೆ ನಾವಿದ್ದೀವಿ ಅಂತ ಸಾರಿ ಹೇಳಿದ್ದು ಕಂಡುಬಂದಿತ್ತು. ಆದರೆ ಐಪಿಎಲ್‌ನಲ್ಲಿ ಬ್ಲ್ಯಾಕ್ಸ್ ಲೈವ್ಸ್ ಮ್ಯಾಟರ್‌ಗೆ ಸಂಬಂಧಿಸಿ ಯಾವೊಂದು ವಿಚಾರವೂ ಕಾಣಿಸಿಲ್ಲ.

ವಿಶ್ವದ ಅತೀ ಶ್ರೀಮಂತ ಕ್ರಿಕೆಟ್ ಟೂರ್ನಿ ಅನ್ನಿಸಿರುವ ಐಪಿಎಲ್‌ನಲ್ಲಿ ಜನಾಂಗೀಯ ಬೇಧ, ವರ್ಣಬೇಧ ವಿರೋಧಿ ಚಳುವಳಿಗೆ, ಜನ ಜಾಗೃತಿಗೆ ಭಾರತೀಯ ಆಯೋಜಕರಿಂದ ಬೆಂಬಲವೇ ಸಿಗದಿರುವ ಬಗ್ಗೆ ವೆಸ್ಟ್ ಇಂಡೀಸ್ ನಾಯಕ, ಸನ್ ರೈಸರ್ಸ್ ಹೈದರಾಬಾದ್‌ನ ಆಲ್ ರೌಂಡರ್ ಜೇಸನ್ ಹೋಲ್ಡರ್ ಬೇಸರ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಗೆಲುವಿಗಾಗಿ ಧಾರವಾಡದಲ್ಲಿ ಅಭಿಮಾನಿಯಿಂದ ವಿಶೇಷ ಪೂಜೆ!ಆರ್‌ಸಿಬಿ ಗೆಲುವಿಗಾಗಿ ಧಾರವಾಡದಲ್ಲಿ ಅಭಿಮಾನಿಯಿಂದ ವಿಶೇಷ ಪೂಜೆ!

'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬ್ಲ್ಯಾಕ್ ಲೈವ್ಸ್ ಮ್ಯಾಟರ್‌ಗೆ ಸಂಬಂಧಿಸಿ ಇಲ್ಲಿ ಒಂದೇ ಒಂದು ಸಂಭಾಷಣೆಯಾಗಲಿ, ವಿಚಾರವಾಗಲಿ ನಾನು ನೋಡಿಲ್ಲ. ಇದು ಬೇಸರದ ಸಂಗತಿ. ವೆಸ್ಟ್ ಇಂಡೀಸ್ ಕ್ರಿಕೆಟ್ ಈ ಬಗ್ಗೆ ಜಾಗೃತಿ ಮೂಡಿಸುವಲ್ಲ ಒಳ್ಳೆಯ ಹೆಜ್ಜೆಯಿಟ್ಟಿತ್ತು. ಇಂಗ್ಲೆಂಡ್‌ನಲ್ಲೂ ಮಹಿಳಾ ಕ್ರಿಕೆಟ್ ಸರಣಿ ವೇಳೆ ಆಟಗಾರ್ತಿಯರು ಬಿಎಲ್‌ಎಂ ಲೋಗೋ ಧರಿಸಿದ್ದರು' ಎಂದು ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ್ದ ಹೋಲ್ಡರ್ ಹೇಳಿದ್ದಾರೆ.

Story first published: Wednesday, October 21, 2020, 16:36 [IST]
Other articles published on Oct 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X