ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಟೆಸ್ಟ್: ವಿಂಡೀಸ್ ಪರ ವಿಶೇಷ ಸಾಧನೆ ಮಾಡಲು ನಾಯಕ ಜೇಸನ್ ಹೋಲ್ಡರ್ ಸಿದ್ಧ

Jason Holder Eyes Entry Into Elite Group Ahead Of Manchester Test

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇಂಗ್ಲೆಂಡ್‌ಗೆ ಅದರ ತವರು ನೆಲದಲ್ಲೇ ಸೋಲುಣಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಲಯದಲ್ಲಿದೆ. ಗುರುವಾರದಿಂದ ಎರಡನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು 32 ವರ್ಷಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ವಶಪಡಿಸಿ

ವೆಸ್ಟ್ ಇಂಡೀಸ್ ತಂಡ ಕಳೆದ ವಾರ ನಡೆದ ಪಂದ್ಯದಲ್ಲಿ ಸಂಪೂರ್ಣ ಸಾಮರ್ಥ್ಯದ ಇಂಗ್ಲೆಂಡ್‌ ತಂಡವನ್ನು ತನ್ನ ಸರ್ವಾಂಗೀಣ ಪ್ರದರ್ಶನದ ಮೂಲಕ ಸೋಲಿಸಿತ್ತು. ನಾಳೆಯಿಂದ ಓಲ್ಡ್‌ ಟ್ರಾಫರ್ಡ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಗೆದ್ದರೆ ವೆಸ್ಟ್ ಇಂಡೀಸ್ ವಿಸ್ಡೆನ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಳ್ಳಲಿದೆ.

ಇಂಗ್ಲೆಂಡ್‌ಗೆ ಬಲ ನೀಡಿದ ನಾಯಕನ ಆಗಮನ: ತಂಡಕ್ಕೆ ಮರಳಿದ ಜೋ ರೂಟ್ಇಂಗ್ಲೆಂಡ್‌ಗೆ ಬಲ ನೀಡಿದ ನಾಯಕನ ಆಗಮನ: ತಂಡಕ್ಕೆ ಮರಳಿದ ಜೋ ರೂಟ್

ಏಜಸ್‌ಬೌಲ್‌ನಲ್ಲಿ ವೆಸ್ಟ್‌ ಇಂಡೀಸ್ ತಂಡವನ್ನು ಮುನ್ನಡೆಸಿದ ನಾಯಕ ಜೇಸನ್ ಹೋಲ್ಡರ್ ಇಂಗ್ಲೆಂಡ್ ವಿರುದ್ಧದ ಕಳೆದ ಆರು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನು ಗೆದ್ದರೂ 1988ರ ಬಳಿಕ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಗೆದ್ದ ಮೊದಲ ನಾಯಕನೆನಿಸಿಕೊಳ್ಳುವ ಅವಕಾಶವಿದೆ. ಇಂಗ್ಲೆಂಡ್‌ ತಂಡವನ್ನು ಅದರ ನೆಲದಲ್ಲಿ ವೆಸ್ಟ್ ಇಂಡೀಸ್ ತಂಡ ಕೊನೆಯ ಬಾರಿ ಸರಣಿ ಗೆದ್ದಾಗ 4-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧನೆಯನ್ನು ಮಾಡಿತ್ತು.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಆಫರ್ ತಿರಸ್ಕರಿಸಿದ ಬಾಂಗ್ಲಾ ಕ್ರಿಕೆಟಿಗರುಕೆರಿಬಿಯನ್ ಪ್ರೀಮಿಯರ್ ಲೀಗ್‌ನ ಆಫರ್ ತಿರಸ್ಕರಿಸಿದ ಬಾಂಗ್ಲಾ ಕ್ರಿಕೆಟಿಗರು

ನಾಯಕನಾಗಿ ಜೇಸನ್ ಹೋಲ್ಡರ್‌ಗೆ ಮತ್ತೊಂದು ವಿಶೇಷ ಸಾಧನೆ ಮಾಡಲು ಎದುರು ನೋಡುತ್ತಿದ್ದಾರೆ. ಟೆಸ್ಟ್ ಮಾದರಿಯಲ್ಲಿ ನಂಬರ್ 1 ಆಲ್‌ರೌಂಡರ್ ಆಗಿರುವ ಜೋಲ್ಡರ್ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ನಾಯಕಾಗಿ ಅತಿ ಹೆಚ್ಚು ಗೆಲುವು ದಾಖಲಿಸಿದ 3ನೇ ನಾಯಕನೆಂಬ ಸಾಧನೆಗೆ ಒಂದೇ ಗೆಲುವಿನ ಅವಶ್ಯಕತೆಯಿದೆ.

ಕಳೆದ ಪಂದ್ಯದ ಗೆಲುವಿನೊಂದಿಗೆ ಹೋಲ್ಡರ್ ರಿಚಿ ರಿಚರ್ಡ್ಸನ್ ಅವರ 11 ಪಂದ್ಯಗಳ ಗೆಲುವಿನ ದಾಖಲೆಯನ್ನು ಸರಿದೂಗಿಸಿದ್ದಾರೆ. ನಾಯಕನಾಗಿ ಕ್ಲೈವ್ ಲಾಯ್ಡ್ 36 ಟೆಸ್ಟ್ ಗೆಲುವುಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು ವಿವ್ ರಿಚರ್ಡ್ಸ್ 24 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 33 ಪಂದ್ಯಗಳಲ್ಲಿ ಮುನ್ನಡೆಸಿರುವ ಜೇಸನ್ ಹೋಲ್ಡರ್ 11 ಗೆಲುವು ದಾಖಲಿಸಿದ್ದಾರೆ.

Story first published: Thursday, July 16, 2020, 9:47 [IST]
Other articles published on Jul 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X