ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ರ‍್ಯಾಂಕಿಂಗ್: ವಿಂಡೀಸ್ ಪರ 20 ವರ್ಷಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ಜೇಸನ್ ಹೋಲ್ಡರ್

Jason Holder Moves Up To Career-best Second Spot In Icc Test Rankings

ಕೊರೊನಾ ವೈರಸ್ ಬಳಿಕ ಕ್ರಿಕೆಟ್ ಪುನಾರಂಭಗೊಂಡಿದ್ದು ಮೊದಲ ಪಂದ್ಯ ಯಶಸ್ವಿಯಾಗಿ ಮುಕ್ತಾಯವಾಗಿದೆ. ಇಂಗ್ಲಂಡ್ ತಂಡವನ್ನು ಮಣಿಸಿದ ವೆಸ್ಟ್ ಇಂಡೀಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿಸಿದೆ. ಈ ಸಂದರ್ಭದಲ್ಲಿ ವೆಸ್ಟ್ ತಂಡದ ನಾಯಕ ಜೇಸನ್ ಹೋಲ್ಡರ್ ಟೆಸ್ಟ್ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಶ್ರೇಷ್ಠ ಸಾಧನೆಯೊಂದನ್ನು ಮಾಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯದ ನಂತರ ನೂತನ ಟೆಸ್ಟ್ ರ‍್ಯಾಂಕಿಂಗ್ ಬಿಡುಗಡೆಯಾಗಿದ್ದು ಬೌಲಿಂಗ್ ವಿಭಾಗದಲ್ಲಿ ಜೇಸನ್ ಹೋಲ್ಡರ್ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಕಳೆದ 20 ವರ್ಷಗಳಲ್ಲಿ ವೆಸ್ಟ್ ಇಂಡೀಸ್‌ನ ಯಾವ ಬೌಲರ್‌ಗಳು ಗಳಿಸದ ಅಂಕವನ್ನು ಗಳಿಸಿ ಸಾಧನೆ ಮಾಡಿದ್ದಾರೆ.

'2019ರ ವಿಶ್ವಕಪ್‌ ಸೂಪರ್ ಓವರ್‌ಗೂ ಮುನ್ನ ಸ್ಟೋಕ್ಸ್ ಸಿಗರೇಟ್ ಸುಟ್ಟಿದ್ದರು''2019ರ ವಿಶ್ವಕಪ್‌ ಸೂಪರ್ ಓವರ್‌ಗೂ ಮುನ್ನ ಸ್ಟೋಕ್ಸ್ ಸಿಗರೇಟ್ ಸುಟ್ಟಿದ್ದರು'

ಮೊದಲ ಟೆಸ್ಟ್‌ನಲ್ಲಿ ಜೇಸನ್ ಹೋಲ್ಡರ್ 7 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 42 ರನ್‌ಗೆ 6 ವಿಕೆಟ್ ಕಿತ್ತಿದ್ದರು. ಈ ಮೂಲಕ ಜೇಸನ್ ಹೋಲ್ಡರ್ ಈಗ ತನ್ನ ವೃತ್ತಿ ಜೀವನ ಶ್ರೇಷ್ಠ 862 ಅಂಕಗಳನ್ನು ಗಳಿಸಿದ್ದಾರೆ. 2000ನೇ ಇಸವಿಯಲ್ಲಿ ಕಾರ್ಟ್ನಿ ವಾಲ್ಶ್ 866 ಅಂಕವನ್ನಿ ಸಂಪಾದಿಸಿದ್ದು ವೆಸ್ಟ್ ಇಂಡೀಸ್ ಬೌಲರ್ ಓರ್ವನ ಶ್ರೇಷ್ಠ ಸಾಧನೆಯಾಗಿದೆ.

ಕಳೆದ ಮಾರ್ಚ್‌ನಿಂದ ಯಾವುದೇ ಪಮದ್ಯಗಳಲ್ಲಿ ಪಾಲ್ಗೊಳ್ಳದ ಟೀಮ್ ಇಂಡಿಯಾ ಆಟಗಾರು ಟಾಪ್ 10ರಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಸ್ಟೀವ್ ಸ್ಮಿತ್ ಮುಂದುವರಿದಿದ್ದಾರೆ. ಟಾಪ್ 10ನಲ್ಲಿ ಇನ್ನಿಬ್ಬರು ಆಟಗಾರರಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಕ್ರಮವಾಗಿ 7 ಮತ್ತು 9ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಯಾರು ಶ್ರೇಷ್ಠ ನಾಯಕ : ಸಮೀಕ್ಷೆಯಲ್ಲಿ ಧೋನಿ ಮತ್ತು ಗಂಗೂಲಿ ಮಧ್ಯೆ ಮೇಲುಗೈ ಯಾರಿಗೆ?ಯಾರು ಶ್ರೇಷ್ಠ ನಾಯಕ : ಸಮೀಕ್ಷೆಯಲ್ಲಿ ಧೋನಿ ಮತ್ತು ಗಂಗೂಲಿ ಮಧ್ಯೆ ಮೇಲುಗೈ ಯಾರಿಗೆ?

ಬೌಲರ್‌ಗಳ ಪಟ್ಟಿಯಲ್ಲಿ ಜಸ್ಪ್ರಿತ್ ಬೂಮ್ರಾ ಮಾತ್ರವೇ ಟಾಪ್ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. 7 ಸ್ಥಾನವನ್ನು ಬೂಮ್ರಾ ಪಡೆದುಕೊಂಡಿದ್ದಾರೆ. ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜೇಸನ್ ಹೋಲ್ಡರ್ 35ನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲೂ ವೃತ್ತಿ ಜೀವನದ ಅತ್ಯುತ್ತಮ ಅಂಕವನ್ನು ಗಳಿಸಿಕೊಂಡಿದ್ದು 485 ಅಂಕಗಳೊಂದಿಗೆ ಮೊದಲನೇ ಸ್ಥಾನದಲ್ಲಿ ಮುಂದುವರಿಸಿದ್ದಾರೆ.

Story first published: Wednesday, July 15, 2020, 10:04 [IST]
Other articles published on Jul 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X