ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಇಂಗ್ಲೆಂಡ್‌ ತಂಡದಿಂದ ಓಪನರ್‌ ಜೇಸನ್‌ ರಾಯ್‌ ಔಟ್‌!

Jason Roy to miss next two games with hamstring tear

ಲಂಡನ್‌, ಜೂನ್‌ 17: ಇಂಗ್ಲೆಂಡ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಜೇಸನ್‌ ರಾಯ್‌ ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾಗಿದ್ದು, ಮುಂದಿನ ಎರಡು ಪಂದ್ಯಗಳಲ್ಲಿ ಆತಿಥೇಯ ತಂಡದಿಂದ ಹೊರಗುಳಿಯಲಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ಜೇಸನ್‌ ರಾಯ್‌ ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾದರು. ಕ್ಷೇತ್ರ ರಕ್ಷಣೆ ವೇಳೆ ಈ ಸಮಸ್ಯೆ ಎದುರಿಸಿರುವ ರಾಯ್‌, ವಿಶ್ರಾಂತಿ ಪಡೆಯುವ ಅಗತ್ಯವಿದ್ದು ಮುಂದಿನ ಎರಡು ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ವಿಂಡೀಸ್‌ ವಿರುದ್ಧ ಇಂಗ್ಲೆಂಡ್‌ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು.

ಚೆಂಡನ್ನು ತಡೆದು ನಿಲ್ಲಿಸುವ ಪ್ರಯತ್ನದಲ್ಲಿ ಗಾಯಕ್ಕೆ ತುತ್ತಾದ ರಾಯ್‌ ಪಂದ್ಯದಲ್ಲಿ ಮುಂದುವರಿಯಲು ಸಾಧ್ಯವಾಗದೆ ಕೂಡಲೇ ವೈದ್ಯರಿಂದ ತಪಾಸಣೆಗೆ ಒಳಪಟ್ಟು ಸ್ಕ್ಯಾನಿಂಗ್‌ಗೆ ತೆರಳಿದ್ದರು. ಹೀಗಾಗಿ ಕ್ರಿಸ್‌ ವೂಕ್ಸ್‌ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಡ್ತಿ ಪಡೆದು ಇಂಗ್ಲೆಂಡ್‌ ಪರ ಬ್ಯಾಟ್‌ ಬೀಸಿದ್ದರು.

ಕಿಂಗ್‌ ಕೊಹ್ಲಿ ಕ್ರೀಡಾ ಸ್ಫೂರ್ತಿಗೆ ಪಾಕಿಸ್ತಾನದ ಅಭಿಮಾನಿಗಳೂ ಫಿದಾ!ಕಿಂಗ್‌ ಕೊಹ್ಲಿ ಕ್ರೀಡಾ ಸ್ಫೂರ್ತಿಗೆ ಪಾಕಿಸ್ತಾನದ ಅಭಿಮಾನಿಗಳೂ ಫಿದಾ!

"ರಾಯ್‌ ತೊಡೆಯ ಹಿಂಭಾಗದಲ್ಲಿನ ಸ್ನಾಯು ಕೊಂಚ ಹರಿದಿರುವುದು ಎಂಆರ್‌ಐ ಸ್ಕ್ಯಾನಿಂಗ್‌ನಲ್ಲಿ ಪತ್ತೆಯಾಗಿದೆ. ಹೀಗಾಗಿ ಇಂಗ್ಲೆಂಡ್‌ ತಂಡದ ಮುಂದಿನ ಪಂದ್ಯಗಳಲ್ಲಿ ಅಫಘಾನಿಸ್ತಾನ (ಜೂನ್‌ 18) ಮತ್ತು ಶ್ರೀಲಂಕಾ (ಜೂನ್‌ 21) ವಿರುದ್ಧ ರಾಯ್‌ ಕಣಕ್ಕಿಳಿಯುವುದಿಲ್ಲ,'' ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ವೇಳೆ ಇಂಗ್ಲೆಂಡ್‌ ತಂಡದ ನಾಯಕ ಐಯಾನ್‌ ಮಾರ್ಗನ್‌ ಕೂಡ ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದು, ಅವರ ಸ್ಥಿತಿಗತಿಗಳ ಕುರಿತಾಗಿ 24 ಗಂಟೆಗಳ ಕಾಲ ಕಣ್ಣಿಡಲಿದ್ದು, ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾರ್ಗನ್‌ ಆಡಲಿದ್ದಾರೆಯೇ ಎಂಬುದರ ಕುರಿತಾಗಿ ಮಂಗಳವಾರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಇಸಿಬಿ ಹೇಳಿದೆ. ಇದಕ್ಕೂ ಮುನ್ನ ಜೋಸ್‌ ಬಟ್ಲರ್‌ ಕೂಡ ಗಾಯದ ಸಮಸ್ಯೆ ಎದುರಿಸಿದ್ದರು.

ಆಕಳಿಸಿ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡ ಪಾಕ್‌ ನಾಯಕ!ಆಕಳಿಸಿ ಅಭಿಮಾನಿಗಳಿಂದ ಮಂಗಳಾರತಿ ಮಾಡಿಸಿಕೊಂಡ ಪಾಕ್‌ ನಾಯಕ!

ಟೂರ್ನಿಯಲ್ಲಿ ಇಂಗ್ಲೆಂಡ್‌ ತಂಡ ಈವರೆಗೆ ನಾಲ್ಕು ಪಂದ್ಯಗಳನ್ನು ಆಡಿದ್ದು 6 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Story first published: Tuesday, June 18, 2019, 0:07 [IST]
Other articles published on Jun 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X