ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್

Jasprit bumrah

ಐಪಿಎಲ್ 2022 ರ 65 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲರ್ ಜಸ್ಪ್ರೀತ್ ಬುಮ್ರಾ ವಿಶೇಷ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬುಮ್ರಾ 250 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ, ಎಸ್‌ಆರ್‌ಎಚ್‌ ತಂಡವನ್ನ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ವಿಫಲಗೊಂಡಿತು. ಆದ್ರೆ ಮುಂಬೈ ಪರ ಉತ್ತಮ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ 4 ಓವರ್ ಬೌಲಿಂಗ್‌ ಮಾಡಿ 32 ರನ್‌ಗಳನ್ನ ನೀಡಿ 1 ವಿಕೆಟ್ ಸಂಪಾದಿಸಿದರು. ಅದ್ರಲ್ಲೂ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದ ಬುಮ್ರಾ ಕೇವಲ ಏಳು ರನ್‌ಗಳನ್ನಷ್ಟೇ ನೀಡಿದ್ರು. ಫುಲ್ ಟಾಸ್ ಎಸೆತದ ಮೂಲಕ ವಾಷಿಂಗ್ಟನ್ ಸುಂದರ್‌ ಅನ್ನು ಕ್ಲೀನ್ ಬೌಲ್ಡ್‌ ಮಾಡುವ ಮೂಲಕ 250 ವಿಕೆಟ್‌ಗಳ ಗಡಿ ಮುಟ್ಟಿದ್ರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ 199 ರನ್‌ಗೆ ಔಟ್ ಆಗಿ ದ್ವಿಶತಕ ಮಿಸ್ ಮಾಡಿಕೊಂಡ 12 ನತದೃಷ್ಟ ಆಟಗಾರರು ಇವರೇಟೆಸ್ಟ್‌ ಕ್ರಿಕೆಟ್‌ನಲ್ಲಿ 199 ರನ್‌ಗೆ ಔಟ್ ಆಗಿ ದ್ವಿಶತಕ ಮಿಸ್ ಮಾಡಿಕೊಂಡ 12 ನತದೃಷ್ಟ ಆಟಗಾರರು ಇವರೇ

ಈ ವಿಶೇಷ ಮೈಲಿಗಲ್ಲಿನ ಜೊತೆಗೆ ಟಿ20 ಕ್ರಿಕೆಟ್‌ನಲ್ಲಿ 250 ವಿಕೆಟ್‌ ಪಡೆದ ಭಾರತದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 28ರ ಹರೆಯದ ಬುಮ್ರಾ 2013ರಲ್ಲಿ ಗುಜರಾತ್‌ ಪರ ಮೊದಲ ಟಿ20 ಪಂದ್ಯವನ್ನು ಮಹಾರಾಷ್ಟ್ರ ವಿರುದ್ಧ ಆಡಿದ್ದರು. ಅವರು 205 ಪಂದ್ಯಗಳಲ್ಲಿ 250 ವಿಕೆಟ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರ ಎಕಾನಮಿಯು 7.04 ಮತ್ತು ಸರಾಸರಿ 21.60 ಆಗಿದೆ. ವೇಗದ ಬೌಲರ್‌ಗಳಲ್ಲಿ ಬುಮ್ರಾ ನಂತರ ಭುವನೇಶ್ವರ್ ಕುಮಾರ್ ಸ್ಥಾನ ಪಡೆದಿದ್ದು, ಭೂವಿ 223 ವಿಕೆಟ್‌ ಪಡೆದಿದ್ದಾರೆ.

Mumbai Indians ಗೆಲ್ಲುವಂತಹ ಪಂದ್ಯದಲ್ಲಿ ಸೋತಿದ್ದು ಹೀಗೆ | Oneindia Kannada

ಭಾರತದ ನಾಲ್ವರು ಸ್ಪಿನ್ನರ್ಸ್ 250ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ!
ಜಸ್ಪ್ರೀತ್ ಬುಮ್ರಾಗೂ ಮೊದಲು, ನಾಲ್ವರು ಭಾರತೀಯ ಸ್ಪಿನ್ನರ್‌ಗಳು ಟಿ20 ಕ್ರಿಕೆಟ್‌ನಲ್ಲಿ 250 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ಅತಿ ಹೆಚ್ಚು ವಿಕೆಟ್ ಪಡೆದಿದ್ದು, 274 ವಿಕೆಟ್ ಸಂಪಾದಿಸಿದ್ದಾರೆ. ಇನ್ನು ಪ್ರಸ್ತುತ ಐಪಿಎಲ್‌ನಲ್ಲಿ ಅಶ್ವಿನ್ ಜೊತೆಗೆ ರಾಜಸ್ತಾನ್ ರಾಯಲ್ಸ್‌ ಪರ ಆಡುತ್ತಿರುವ ಯುಜವೇಂದ್ರ ಚಹಾಲ್ 271 ವಿಕೆಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಮಾಜಿ ಐಪಿಎಲ್ ಸ್ಪಿನ್ನರ್ ಪಿಯೂಷ್ ಚಾವ್ಲಾ 270 ವಿಕೆಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಅಮಿತ್ ಮಿಶ್ರಾ ಅವರ ಹೆಸರಲ್ಲಿ 262 ವಿಕೆಟ್‌ಗಳಿವೆ.

Story first published: Wednesday, May 18, 2022, 10:26 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X