ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಸ್ಪ್ರೀತ್ ಬುಮ್ರಾ ಬೌಲಿಂಗ್‌ಗೂ, ಟಾಮ್ & ಜೆರ್ರಿಗೂ ಏನು ಸಂಬಂಧ?

Jasprit bumrah

ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದ ನಾಯಕ ಜಸ್ಪ್ರೀತ್ ಬುಮ್ರಾ, ಎರಡೂ ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ ಮಿಂಚಿದರೂ ಸಹ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಇಂಗ್ಲೆಂಡ್ ವಿರುದ್ಧ ಡ್ರಾಗಷ್ಟೇ ತೃಪ್ತಿಪಡಲಾಯಿತು.

ಆದ್ರೆ ಹೊಸ ವಿಚಾರ ಅಂದ್ರೆ ಭಾರತೀಯ ಬೌಲಿಂಗ್‌ನ ಟ್ರಂಪ್ ಕಾರ್ಡ್ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ಟಾಮ್ ಮತ್ತು ಜೆರ್ರಿಯ ಪ್ರಸಿದ್ಧ ಕಾರ್ಟೂನ್ ಪಾತ್ರವಾದ ಟಾಮ್ ನಡುವಿನ ಸಂಬಂಧವೇನು? ಅನೇಕರು ಸಂಬಂಧ ಏನು ಎಂದು ಯೋಚಿಸುತ್ತಿದ್ದಾರೆ. ಆದರೆ ಟ್ವಿಟ್ಟರ್ ಬಳಕೆದಾರರು ಇವೆರಡರ ನಡುವೆ ಕೆಲವು ಆಶ್ಚರ್ಯಕರ ಹೋಲಿಕೆಗಳನ್ನು ಕಂಡುಹಿಡಿದಿದ್ದಾರೆ.

ಬುಮ್ರಾ ತನ್ನ ಫೇವರಿಟ್ ಟಾಮ್ ಅವರ ಕ್ರಿಯೆಯನ್ನು ಅನುಕರಿಸುತ್ತಾರೆ ಮತ್ತು ಅದೇ ರೀತಿಯಲ್ಲಿ ಸೆಲೆಬ್ರೇಷನ್ ಕೂಡ ಮಾಡುತ್ತಾರೆ ಎಂದು ಟ್ವಿಟ್ಟರ್ ಬಳಕೆದಾರರು ಸಾಕ್ಷಿಯೊಂದಿಗೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಬಹುಬೇಗ ವೈರಲ್ ಆಗಿದ್ದು, ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಕಪಿಲ್ ದೇವ್ ದಾಖಲೆ ಮುರಿದ ಬುಮ್ರಾ

ಇತ್ತೀಚೆಗಷ್ಟೇ ಕಪಿಲ್ ದೇವ್ ದಾಖಲೆ ಮುರಿದ ಬುಮ್ರಾ

ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ನಡೆದ ಸರಣಿಯಲ್ಲಿನ ನಾಲ್ಕು ಪಂದ್ಯಗಳು ಸೇರಿದಂತೆ ಪ್ರಸ್ತುತ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಒಟ್ಟಾರೆ 23 ವಿಕೆಟ್‌ಗಳನ್ನ ಪಡೆದಿದ್ದು, ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಸೀಮರ್ ಎಂಬ ಸಾಧನೆ ಮಾಡಿದ್ದಾರೆ.

ಈ ಮೂಲಕ ಲೆಜೆಂಡರಿ ಕಪಿಲ್ ದೇವ್ ಹೆಸರಲ್ಲಿನ 40 ವರ್ಷಗಳ ಹಳೆಯ ದಾಖಲೆಯನ್ನ ವೇಗಿ ಜಸ್ಪ್ರೀತ್ ಬುಮ್ರಾ ಮುರಿದಿದ್ದಾರೆ. ಕಪಿಲ್ ದೇವ್ 1981-82ರ ಅವಧಿಯಲ್ಲಿ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 22 ವಿಕೆಟ್‌ಗಳನ್ನ ಕಬಳಿಸಿದ್ದರು. ಆದ್ರೀಗ 40 ವರ್ಷಗಳ ಬಳಿಕ ಜಸ್ಪ್ರೀತ್ ಬುಮ್ರಾ 2021-22ರ ಸರಣಿಯಲ್ಲಿ 23 ವಿಕೆಟ್ ಉರುಳಿಸಿದ ದಾಖಲೆ ಮಾಡಿದರು.

ವಿಭಿನ್ನ ಬೌಲಿಂಗ್ ಶೈಲಿ ಮೂಲಕ ಮಿಂಚುವ ಬುಮ್ರಾ

ವಿಭಿನ್ನ ಬೌಲಿಂಗ್ ಶೈಲಿ ಮೂಲಕ ಮಿಂಚುವ ಬುಮ್ರಾ

ಜಸ್ಪ್ರೀತ್ ಬುಮ್ರಾ ವಿಶ್ವ ಕ್ರಿಕೆಟ್‌ನಲ್ಲಿ ವಿಭಿನ್ನ ಬೌಲಿಂಗ್ ಕ್ರಮದ ಮೂಲಕ ಹೆಸರು ಮಾಡಿದ್ದಾರೆ. ಈ ವಿಚಿತ್ರ ಬೌಲಿಂಗ್‌ ಕ್ರಮಕ್ಕಾಗಿ ಅವರು ಮೊದಲು ಗಮನ ಸೆಳೆದರು. ಬುಮ್ರಾ ತನ್ನ ಬೌಲಿಂಗ್ ಶೈಲಿಯನ್ನ ಚೆನ್ನಾಗಿ ಬಳಸಿಕೊಂಡು, ಯಾರ್ಕರ್‌ಗಳನ್ನು ಉತ್ತಮವಾಗಿ ಬೌಲ್ ಮಾಡುವಲ್ಲಿ ಯಶಸ್ವಿಯಾದರು.

ಅವರ ಬೌಲಿಂಗ್ ಆಕ್ಷನ್ ಕೂಡ ಕ್ರೀಸ್‌ನಲ್ಲಿರುವ ಬ್ಯಾಟ್ಸ್‌ಮನ್‌ಗೆ ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಇದೇ ಕಾರಣಕ್ಕೆ ಬುಮ್ರಾ ಅಪಾಯಕಾರಿ ಬೌಲರ್ ಎನಿಸಿಕೊಂಡಿದ್ದಾರೆ.

ಭಾರತ vs ಇಂಗ್ಲೆಂಡ್: ಟಿ20 ಸರಣಿಯ ಮೊದಲ ಪಂದ್ಯ: ಪ್ರಿವ್ಯೂ, ಸ್ಕ್ವಾಡ್‌ಗಳು ಹಾಗೂ ಪಂದ್ಯದ ಸಮಯ

ಬುಮ್ರಾ ಆಕ್ಷನ್‌ ಹಾಗೂ ಟಾಮ್ ಅಂಡ್ ಜೆರ್ರಿ

ರುಶಿಲ್ ಎಂಬ ಟ್ವಿಟ್ಟರ್ ಬಳಕೆದಾರರು ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ ಆಕ್ಷನ್ ಮತ್ತು ಟಾಮ್ ಮತ್ತು ಜೆರ್ರಿಯಲ್ಲಿ ಬರುವ ಪಾತ್ರ ಟಾಮ್ಗೂ ಇರುವ ಹೋಲಿಕೆಯನ್ನು ಪ್ರಕಟಿಸಿದ್ದಾರೆ.

ಅಷ್ಟೇ ಅಲ್ಲ ವಿಕೆಟ್ ಪಡೆದ ನಂತರ ಬುಮ್ರಾ ಅವರ ಲವಲವಿಕೆಯಿಂದ ಕೂಡಿದ ಸೆಲೆಬ್ರೆಷನ್ ಕೂಡ ನಿಜಕ್ಕೂ ಒಂದೇ ರೀತಿಯಲ್ಲಿದೆ. ಬುಮ್ರಾ ವಿಕೆಟ್ ಪಡೆದಾಗ ಆಗಾಗ್ಗೆ ಎರಡೂ ಕೈಗಳನ್ನು ತನ್ನ ಬದಿಗಳಿಂದ ಹಿಡಿದುಕೊಂಡು ಮತ್ತು ತನ್ನ ಅಂಗೈಗಳನ್ನು ಮೇಲಕ್ಕೆ ಎದುರಿಸುತ್ತಿರುವ ನಗುವಿನೊಂದಿಗೆ ವಿಕೆಟ್ ಪಡೆದ ಸಂಭ್ರಮಾಚರಣೆ ಇರುತ್ತದೆ. ಟಾಮ್ ಈ ಹಿಂದೆ ಕೆಲವು ಕಾರ್ಟೂನ್‌ಗಳಲ್ಲಿ ಅದೇ ಆಕ್ಷನ್ ತೋರಿಸಿರುವುದು ನಗು ತರಿಸಿದೆ.

17,000ಕ್ಕೂ ಹೆಚ್ಚು ಲೈಕ್‌

17,000ಕ್ಕೂ ಹೆಚ್ಚು ಲೈಕ್‌

ಟ್ವಿಟರ್ ಬಳಕೆದಾರರ ಈ ಪೋಸ್ಟ್‌ ಸಾಕಷ್ಟು ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳು ಶೇರ್ ಮಾಡಿದ್ದಾರೆ. ರುಶಿಲ್ ಬಳಕೆದಾರರ ಈ ಪೋಸ್ಟ್‌ ಈಗಾಗಲೇ 17,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

ಜಸ್ಪ್ರೀತ್ ಬುಮ್ರಾ ಮತ್ತು ಟಾಮ್ ನಡುವಿನ ಆಸಕ್ತಿದಾಯಕ ಹೋಲಿಕೆಯ ಬಗ್ಗೆ ಅನೇಕ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಬಳಕೆದಾರರ ಈ ಆಸಕ್ತಿದಾಯಕ ವಿಚಾರವನ್ನು ಅನೇಕ ಜನರು ಶ್ಲಾಘಿಸಿದ್ದಾರೆ.

6 ವರ್ಷಗಳ ಬಳಿಕ ಟೆಸ್ಟ್ ರ್‍ಯಾಂಕಿಂಗ್‌ನ ಟಾಪ್ 10 ಪಟ್ಟಿಯಿಂದ ಹೊರಬಿದ್ದ ಕೊಹ್ಲಿ! ದೊಡ್ಡ ಏರಿಕೆ ಕಂಡ ಪಂತ್

ಬುಮ್ರಾ ಟಾಮ್ ಅಂಡ್ ಜೆರ್ರಿಯ ಅಭಿಮಾನಿಯೇ?

ಬುಮ್ರಾ ಟಾಮ್ ಅಂಡ್ ಜೆರ್ರಿಯ ಅಭಿಮಾನಿಯೇ?

ಜಸ್ಪ್ರೀತ್ ಬುಮ್ರಾ ಟಾಮ್ ಅಂಡ್ ಜೆರ್ರಿಯ ದೊಡ್ಡ ಅಭಿಮಾನಿ ಎಂದು ತೋರುತ್ತಿದೆ ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ. ನಿಮ್ಮ ಅವಲೋಕನವು ತುಂಬಾ ನಿಖರವಾಗಿದೆ," ಎಂದು ಇನ್ನೊಬ್ಬ ಬಳಕೆದಾರರು ಬರ್ಸ್ಟ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. "ಎಪಿಕ್," ಎಂದು ಮತ್ತೊಬ್ಬ ಬಳಕೆದಾರರು ಎಮೋಜಿಯೊಂದಿಗೆ ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು ಇದನ್ನು ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಟ್ವೀಟ್‌ಗಳಲ್ಲಿ ಒಂದಾಗಿದೆ ಎಂದು ಶ್ಲಾಘಿಸಿದ್ದಾರೆ.


ಏತನ್ಮಧ್ಯೆ, ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಭಾರತವನ್ನು ಮುನ್ನಡೆಸಿದರು. ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಸರಣಿಗೆ ಮಿಸ್ ಆದ ಪರಿಣಾಮ, ಬುಮ್ರಾ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿ ಮುನ್ನಡೆಸಿದ ಪಂದ್ಯದ ನಾಯಕತ್ವವನ್ನ ಡ್ರಾ ಮಾಡಿಕೊಂಡಿದ್ದಾರೆ. ಆದರೆ ಟೆಸ್ಟ್ ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ ಏಳು ವಿಕೆಟ್‌ಗಳಿಂದ ಭಾರತವನ್ನು ಸೋಲಿಸಿತು.

378 ರನ್‌ಗಳ ಗುರಿಯನ್ನು ಇಂಗ್ಲೆಂಡ್ ಅತ್ಯಂತ ಸುಲಭವಾಗಿ ಬೆನ್ನತ್ತಿತು. ಗೆಲ್ಲುವ ಅವಕಾಶ ಕಳೆದುಕೊಂಡ ಟೀಂ ಇಂಡಿಯಾ 2-2ರ ಸರಣಿ ಸಮಬಲಕ್ಕೆ ತೃಪ್ತಿಪಟ್ಟಿತು. ನಾಲ್ಕನೇ ವಿಕೆಟ್‌ಗೆ ಜಾನಿ ಬೈಸ್ಟ್ರೋವ್ ಮತ್ತು ಜೋ ರೂಟ್ ಅಜೇಯ 269 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಆಧಾರವಾದ್ರು.

Story first published: Thursday, July 7, 2022, 8:27 [IST]
Other articles published on Jul 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X