40 ವರ್ಷಗಳ ಹಳೆಯ ಕಪಿಲ್ ದೇವ್ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ!

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ ಟೀಂ ಇಂಡಿಯಾ 378ರನ್‌ಗಳ ಟಾರ್ಗೆಟ್ ನೀಡಿದ್ದು, ಇಂಗ್ಲೆಂಡ್ ಉತ್ತಮ ಆರಂಭ ಪಡೆಯಿತು. ಆದ್ರೆ ಟೀ ವಿರಾಮದ ಬಳಿಕ ಎರಡು ಸತತ ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಸ್ವಲ್ಪ ಒತ್ತಡಕ್ಕೆ ಒಳಗಾಗಿದೆ.

ಇದೇ ವೇಳೆಯಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ಮೂರು ವಿಕೆಟ್ ಪಡೆದಿದ್ದ ನಾಯಕ ಜಸ್ಪ್ರೀತ್ ಬುಮ್ರಾ, ಎರಡನೇ ಇನ್ನಿಂಗ್ಸ್‌ನಲ್ಲೂ ಮೊದಲೆರಡು ವಿಕೆಟ್ ಉರುಳಿಸಿದ್ರು. ಅದ್ರಲ್ಲೂ ಚಹಾ ವಿರಾಮದ ಬಳಿಕ ಮೊದಲ ಎಸೆತದಲ್ಲೇ ಒಲ್ಲಿ ಪೋಪ್‌ ಶೂನ್ಯಕ್ಕೆ ರಿಷಭ್ ಪಂತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಇದಾದ ನಂತರದ ಓವರನಲ್ಲಿಯೇ ಅರ್ಧಶತಕ ದಾಖಲಿಸಿ ಉತ್ತಮವಾಗಿ ಆಡುತ್ತಿದ್ದ ಓಪನರ್ ಅಲೆಕ್ಸ್ ಲೀಸ್‌ ರನೌಟ್‌ ಆಗಿದ್ದು ತಂಡಕ್ಕೆ ಹಿನ್ನಡೆಯಾಯಿತು.

ಮೊದಲೆರಡು ವಿಕೆಟ್ ಪಡೆದಿರುವ ಬುಮ್ರಾ ತಂಡಕ್ಕೆ ಆಧಾರವಾಗಿರುವುದಲ್ಲದೆ ದಾಖಲೆ ಕೂಡ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್

ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್

ಹೌದು, ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ನಡೆದ ಸರಣಿಯಲ್ಲಿನ ನಾಲ್ಕು ಪಂದ್ಯಗಳು ಸೇರಿದಂತೆ ಪ್ರಸ್ತುತ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಒಟ್ಟಾರೆ ಇದುವರೆಗೂ ಬುಮ್ರಾ 21 ವಿಕೆಟ್‌ಗಳನ್ನ ಪಡೆದಿದ್ದು, ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಸೀಮರ್ ಎಂಬ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ ರಿಷಭ್ ಪಂತ್, 72 ವರ್ಷಗಳ ಹಳೆಯ ದಾಖಲೆ ನೆಲಸಮ

40 ವರ್ಷಗಳ ಹಳೆಯ ಕಪಿಲ್ ದೇವ್ ದಾಖಲೆ ಬ್ರೇಕ್

40 ವರ್ಷಗಳ ಹಳೆಯ ಕಪಿಲ್ ದೇವ್ ದಾಖಲೆ ಬ್ರೇಕ್

ಭಾರತದ ಮಾಜಿ ನಾಯಕ ಲೆಜೆಂಡರಿ ಕಪಿಲ್ ದೇವ್ ಹೆಸರಲ್ಲಿನ 40 ವರ್ಷಗಳ ಹಳೆಯ ದಾಖಲೆಯನ್ನ ವೇಗಿ ಜಸ್ಪ್ರೀತ್ ಬುಮ್ರಾ ಮುರಿದಿದ್ದಾರೆ. ಕಪಿಲ್ ದೇವ್ 1981-82ರ ಅವಧಿಯಲ್ಲಿ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 22 ವಿಕೆಟ್‌ಗಳನ್ನ ಕಬಳಿಸಿದ್ದರು. ಆದ್ರೀಗ 40 ವರ್ಷಗಳ ಬಳಿಕ ಜಸ್ಪ್ರೀತ್ ಬುಮ್ರಾ 2021-22ರ ಸರಣಿಯಲ್ಲಿ 23 ವಿಕೆಟ್ ಉರುಳಿಸಿದ್ದು, ಇನ್ನೂ ವಿಕೆಟ್ ಪಡೆಯುವ ಅವಕಾಶವಿದೆ. ಅದ್ರಲ್ಲೂ ಬುಮ್ರಾ ಈ ಸಾಧನೆಯನ್ನ ಇಂಗ್ಲೆಂಡ್‌ನಲ್ಲಿ ಮಾಡಿರುವುದು ಆತನ ಸಾಮರ್ಥ್ಯಕ್ಕೆ ಕನ್ನಡಿಯಾಗಿದೆ.

4ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಗರಿಷ್ಠ ಎಷ್ಟು ರನ್‌ಗಳನ್ನ ಚೇಸ್ ಮಾಡಿದೆ?

India ಎರಡನೇ ಇನ್ನಿಂಗ್ಸ್ ನಲ್ಲಿ ಠುಸ್, ವನಿತೆಯರೇ ಸೂಪರ್ Reverse swing 02 | *CricketWrap | OneIndia Kannada
377ರನ್‌ ಲೀಡ್ ಪಡೆದಿರುವ ಟೀಂ ಇಂಡಿಯಾ

377ರನ್‌ ಲೀಡ್ ಪಡೆದಿರುವ ಟೀಂ ಇಂಡಿಯಾ

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 132ರನ್‌ಗಳ ಉತ್ತಮ ಲೀಡ್ ಪಡೆದ ಪರಿಣಾಮ ಎದುರಾಳಿ ತಂಡಕ್ಕೆ 350ಕ್ಕೂ ಹೆಚ್ಚು ರನ್‌ಗಳ ಟಾರ್ಗೆಟ್ ನೀಡಲು ಸಾಧ್ಯವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪರ ಪೂಜಾರ 66, ರಿಷಭ್ ಪಂತ್ 57 ಹಾಗೂ ರವೀಂದ್ರ ಜಡೇಜಾ 23ರನ್ ಗಳಿಸಿದ್ದು ಬಿಟ್ಟರೆ ಬೇರೆ ಎಲ್ಲಾ ಬ್ಯಾಟರ್‌ಗಳು ನೆಲಕಚ್ಚಿದರು. ಪರಿಣಾಮ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 245ರನ್‌ಗಳಿಗೆ ಸರ್ವಪತನಗೊಂಡಿದೆ.

ಪರಿಣಾಮ ಮೊದಲ ಇನ್ನಿಂಗ್ಸ್‌ ಲೀಡ್ ಸೇರಿದಂತೆ ಒಟ್ಟಾರೆ 377ರನ್‌ಗಳ ಟೀಂ ಇಂಡಿಯಾ ಸ್ಕೋರ್ ಬೋರ್ಡ್‌ನಲ್ಲಿದ್ದು ಇಂಗ್ಲೆಂಡ್ ಗೆಲ್ಲಲು 378ರನ್‌ ಕಲೆಹಾಕಬೇಕು. ಈಗಾಗಲೇ ಇಂಗ್ಲೆಂಡ್ ಆರಂಭಿಕ ಶತಕದ ಜೊತೆಯಾಟ ಪಡೆದರೂ ಸಹ 109ರನ್‌ಗೆ ಮೂರು ವಿಕೆಟ್ ಕಳೆದುಕೊಂಡು ಹಿನ್ನಡೆ ಕಂಡಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, July 4, 2022, 21:38 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X