ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

21 ದಿನ 48 ಓವರ್ 293 ಎಸೆತ: ಒಂದು ವಿಕೆಟ್‌ಗೆ ಬೂಮ್ರಾ ಪರದಾಟ!

Jasprit Bumrah Get 1st wicket in test

ಕ್ರಿಕೆಟ್‌ನಲ್ಲಿ ಅಂದ್ರೆನೇ ಹಾಗೆ. ಅಭಿಮಾನಿಗಳಿಗೆ ಒಂದೇ ಒಂದು ಪ್ರದರ್ಶನ ಸಾಕು ಹೀರೋ ಮಾಡಲು. ಹಾಗೆಯೇ ಪ್ರದರ್ಶನದಲ್ಲಿ ಸ್ವಲ್ಪ ಏರುಪೇರಾದರೂ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಆತ ವಿಲನ್ ಆಗಿ ಬಿಡುತ್ತಾನೆ. ಟೀಮ್ ಇಂಡಿಯಾ ಆಟಗಾರ ಬೂಮ್ರಾ ಕಥೆಯೂ ಈಗ ಹೀಗೆಯೇ ಆಗಿದೆ.

ಎದುರಾಳಿ ಬ್ಯಾಟ್ಸಮನ್‌ಗಳನ್ನು ತನ್ನ ನಿಖರ ಬೌಲಿಂಗ್‌ನಿಂದ ಕಂಗೆಡುವಂತೆ ಮಾಡಿ ವಿಕೆಟ್ ಕೀಳುತ್ತಿದ್ದ ಜಸ್ಪ್ರೀತ್ ಬೂಮ್ರಾ ಈಗ ವಿಕೆಟ್ ಪಡೆಯಲು ಪರದಾಡುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಜಸ್ಪ್ರೀತ್ ಬೂಮ್ರಾ ಅವರನ್ನು ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ಎದುರಿಸುತ್ತಿದ್ದಾರೆ.

ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬೂಮ್ರಾ ಕಥೆ ಹೀಗ್ಯಾಕಾಯ್ತು?ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬೂಮ್ರಾ ಕಥೆ ಹೀಗ್ಯಾಕಾಯ್ತು?

ಒಂದು ವಿಕೆಟ್‌ ಪಡೆಯಲೂ ತಿಣುಕಾಡುತ್ತಿರುವ ಬೂಮ್ರಾ ಕಡೆಗೂ ಒಂದು ಯಶಸ್ಸನ್ನು ಪಡೆದಿದ್ದಾರೆ. ಅದಕ್ಕಾಗಿ ಶ್ರಮಿಸಿದ್ದು ಎಷ್ಟು ಅಂತೀರಾ ಮುಂದೆ ಓದಿ..

ಕಡೆಗೂ ಬಿತ್ತು ಬೂಮ್ರಾಗೆ ವಿಕೆಟ್

ಕಡೆಗೂ ಬಿತ್ತು ಬೂಮ್ರಾಗೆ ವಿಕೆಟ್

ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನ ಮೂರನೇ ದಿನ ಕಡೆಗೂ ಬೂಮ್ರಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ದಿನದಾಟದಲ್ಲಿ ಒಂದೂ ವಿಕೆಟ್ ಪಡೆಯಲು ವಿಫಲರಾಗಿದ್ದ ಬೂಮ್ರಾ ಮೂರನೇ ದಿನದಾಟದಲ್ಲಿ ವಿಕೆಟ್ ಕೀಪರ್ ವಾಟ್ಲಿಂಗ್ ವಿಕೆಟ್ ಪಡೆಯಲು ಸಫಲರಾಗಿದ್ದರು.

ಏಕದಿನದಲ್ಲಿ ಶೂನ್ಯ ಸಂಪಾದನೆ

ಏಕದಿನದಲ್ಲಿ ಶೂನ್ಯ ಸಂಪಾದನೆ

ಟೀಮ್ ಇಂಡಿಯಾದ ಪ್ರಮುಖ ಬೌಲೆರ್ ಆಗಿರುವ ಜಸ್ಪ್ರೀತ್ ಬೂಮ್ರಾ ಕೀವಿಸ್ ನೆಲದಲ್ಲಿ ಸಂಪೂರ್ಣ ಮಂಕಾಗಿದ್ದಾರೆ. ಆಡಿದ ಮೂರು ಏಕದಿನದಲ್ಲಿ ಜಸ್ಪ್ರೀತ್ ಬೂಮ್ರಾ 30 ಓವರ್‌ಗಳನ್ನು ಬಾಲ್ ಮಾಡಿದ್ದರು. ಆದರೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ.

ಒಂದು ವಿಕೆಟ್‌ಗೆ 293 ಎಸೆತ

ಒಂದು ವಿಕೆಟ್‌ಗೆ 293 ಎಸೆತ

ಬೂಮ್ರಾ ತಮ್ಮ ಖಾತೆಗೆ ಒಂದು ವಿಕೆಟ್ ಗಳಿಸಿಕೊಳ್ಳಲು ಬರೊಬ್ಬರಿ 293 ಎಸೆತಗಳನ್ನು ಹಾಕಿದ್ದಾರೆ. ಕಳೆದ 21 ದಿನಗಳಲ್ಲಿ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್ ಬೂಮ್ರಾ ಅಕ್ಷರಶಃ ಪರದಾಟವನ್ನು ನಡೆಸಿದಂತೆ ಕಂಡುಬಂತು. ಕಡೆಗೂ ಬೂಮ್ರಾ ವಿಕೆಟ್ ಪಡೆದುಕೊಂಡಿದ್ದಾರೆ.

5 ಸರಣಿಯಲ್ಲಿ 7 ವಿಕೆಟ್

5 ಸರಣಿಯಲ್ಲಿ 7 ವಿಕೆಟ್

ಜಸ್ಪ್ರೀತ್ ಬೂಮ್ರಾ ಕಮ್‌ಬ್ಯಾಕ್‌ ಬಳಿಕ 5 ಸರಣಿಯಲ್ಲಿ ಪಾಲ್ಕೊಂಡಿದ್ದಾರೆ. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಮತ್ತು ಏಕದಿನ ಸರಣಿಯಲ್ಲಿ ಆಟವಾಡಿದ್ದಾರೆ. ಆದರೆ ಇದರಲ್ಲಿ ಕೇವಲ 7 ವಿಕೆಟ್ ಪಡೆಯುವಲ್ಲಿ ಮಾತ್ರವೇ ಯಶಸ್ವಿಯಾಗಿದ್ದಾರೆ. ಪ್ರಮುಖ ಬೌಲರ್ ಆಗಿರುವ ಬೂಮ್ರಾ ಅವರ ಮೇಲೆ ನಿರೀಕ್ಷೆ ಹೆಚ್ಚಿರುವುದರಿಂದ ತಂಡಕ್ಕೆ ಅವರ ಕೊಡುಗೆ ಅತ್ಯಗತ್ಯವಿದೆ.

Story first published: Sunday, February 23, 2020, 17:43 [IST]
Other articles published on Feb 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X