ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಈ ಸ್ಟಾರ್ ಆಟಗಾರನಿಗೆ ನಾಯಕನಾಗಲು ಬೇಕಾದ ಪ್ರಮುಖ ಗುಣವೇ ಇಲ್ಲ ಎಂದ ರವಿಶಾಸ್ತ್ರಿ

Jasprit Bumrah isnt the right candidate to team India test captaincy says Ravi Shastri

ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಗಿಸಿರುವ ಟೀಮ್ ಇಂಡಿಯಾ ಸದ್ಯ ಫೆಬ್ರವರಿ 6ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಲ್ಲಿ ಭಾಗವಹಿಸಲಿದೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಈ 3 ಪಂದ್ಯಗಳ ಏಕದಿನ ಸರಣಿಯ ಮೂಲಕ ರೋಹಿತ್ ಶರ್ಮಾ ಭಾರತ ಏಕದಿನ ತಂಡದ ಪೂರ್ಣಾವಧಿ ನಾಯಕನಾಗಿ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.

ಕೊಹ್ಲಿ ಕ್ರಿಕೆಟ್‌ನಿಂದ ದೂರ ಉಳಿದರೆ ಒಳ್ಳೆಯದು ಎಂದ ರವಿ ಶಾಸ್ತ್ರಿ! ಇದರ ಹಿಂದಿನ ಉದ್ದೇಶವೇನು?ಕೊಹ್ಲಿ ಕ್ರಿಕೆಟ್‌ನಿಂದ ದೂರ ಉಳಿದರೆ ಒಳ್ಳೆಯದು ಎಂದ ರವಿ ಶಾಸ್ತ್ರಿ! ಇದರ ಹಿಂದಿನ ಉದ್ದೇಶವೇನು?

ಹೌದು, ಕಳೆದ ವರ್ಷ ನಡೆದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಬಳಿಕ ಭಾರತ ಟಿ ಟ್ವೆಂಟಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜೀನಾಮೆಯನ್ನು ಸಲ್ಲಿಸಿದ ನಂತರ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಭಾರತ ಟಿ ಟ್ವೆಂಟಿ ತಂಡದ ನೂತನ ನಾಯಕ ಎಂದು ನೇಮಿಸಿತ್ತು. ನಂತರ ಬಿಸಿಸಿಐ ವಿರಾಟ್ ಕೊಹ್ಲಿ ಅವರನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ ರೋಹಿತ್ ಶರ್ಮಾ ಅವರನ್ನೇ ಭಾರತ ಏಕದಿನ ತಂಡದ ನೂತನ ನಾಯಕ ಎಂದು ಘೋಷಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಸರಣಿಗೆ ರೋಹಿತ್ ಶರ್ಮಾ ಗಾಯದ ಸಮಸ್ಯೆಯಿಂದಾಗಿ ಅಲಭ್ಯರಾಗಿದ್ದ ಕಾರಣ ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಅತ್ತ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಮುಗಿದ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ರಾಜಿನಾಮೆ ನೀಡಿದರು.

ಏನು ನೋಡಿ ಈತನಿಗೆ ಟೀಮ್ ಇಂಡಿಯಾ ನಾಯಕತ್ವ ನೀಡಿದ್ದೀರ ಎಂದು ಕಿಡಿಕಾರಿದ ಭಾರತದ ಹಾಲಿ ಕ್ರಿಕೆಟಿಗ!ಏನು ನೋಡಿ ಈತನಿಗೆ ಟೀಮ್ ಇಂಡಿಯಾ ನಾಯಕತ್ವ ನೀಡಿದ್ದೀರ ಎಂದು ಕಿಡಿಕಾರಿದ ಭಾರತದ ಹಾಲಿ ಕ್ರಿಕೆಟಿಗ!

ಹೀಗೆ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬ ಚರ್ಚೆಗಳು ಹೆಚ್ಚಾದವು. ಸದ್ಯ ಭಾರತ ಏಕದಿನ ಹಾಗೂ ಟಿ ಟ್ವೆಂಟಿ ತಂಡಗಳಿಗೆ ನೂತನ ನಾಯಕನಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ ಅವರೇ ಭಾರತ ಟೆಸ್ಟ್ ತಂಡದ ನಾಯಕನಾಗುತ್ತಾರೆ ಎಂಬ ಸುದ್ದಿಗಳು ಹೆಚ್ಚಾಗಿ ಹರಿದಾಡುತ್ತಿದ್ದರೆ, ಕೆಎಲ್ ರಾಹುಲ್ ಹೆಸರು ಕೂಡ ಹೆಚ್ಚಾಗಿ ಕೇಳಿ ಬಂದಿತ್ತು. ಇದರ ಜತೆಗೆ ಜಸ್ಪ್ರೀತ್ ಬುಮ್ರಾ ಕೂಡ ಈ ಕುರಿತಾಗಿ ಮಾತನಾಡಿ ತನಗೆ ಭಾರತ ಟೆಸ್ಟ್ ತಂಡದ ನಾಯಕತ್ವ ನಿರ್ವಹಿಸುವ ಜವಾಬ್ದಾರಿಯನ್ನು ನೀಡಿದರೆ ನಿರ್ವಹಿಸಲು ಸಿದ್ಧ ಎಂದು ಹೇಳಿಕೆಯನ್ನು ನೀಡಿದ್ದರು. ಹೀಗೆ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಯಾವ ಆಟಗಾರನಿಗೆ ಬಿಸಿಸಿಐ ನೀಡುತ್ತೆ ಎಂಬ ಕುತೂಹಲಗಳು ಹೆಚ್ಚಾಗಿದ್ದು, ವಿವಿಧ ಮಾಜಿ ಕ್ರಿಕೆಟಿಗರು ಯಾವ ಆಟಗಾರನಿಗೆ ನಾಯಕತ್ವ ನೀಡಿದರೆ ಉತ್ತಮ ಮತ್ತು ಯಾರಿಗೆ ನೀಡಬಾರದು ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದು, ಭಾರತದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಕೂಡಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

Sachin ಪ್ರಕಾರ Rohit Sharma ಮತ್ತು Dravid ಮಾಡ್ಬೇಕಾಗಿರೋದೇನು? | Oneindia Kannada
ಈ ಆಟಗಾರ ಟೆಸ್ಟ್ ನಾಯಕತ್ವ ಸ್ವೀಕರಿಸಲು ಅರ್ಹನಲ್ಲ ಎಂದ ರವಿಶಾಸ್ತ್ರಿ

ಈ ಆಟಗಾರ ಟೆಸ್ಟ್ ನಾಯಕತ್ವ ಸ್ವೀಕರಿಸಲು ಅರ್ಹನಲ್ಲ ಎಂದ ರವಿಶಾಸ್ತ್ರಿ

ಜಸ್ಪ್ರೀತ್ ಬೂಮ್ರಾ ಟೆಸ್ಟ್ ನಾಯಕನಾಗುವ ಕುರಿತು ಪ್ರತಿಕ್ರಿಯಿಸಿರುವ ಭಾರತದ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ ಇಂಥ ನಿರ್ಧಾರದ ಕುರಿತು ನಾನು ಯೋಚಿಸಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜಸ್ಪ್ರೀತ್ ಬುಮ್ರಾ ರೀತಿಯ ಓರ್ವ ವೇಗಿ ಭಾರತ ಟೆಸ್ಟ್ ತಂಡದ ನಾಯಕನಾಗುವುದು ಅಸಾಧ್ಯ ಎಂದು ರವಿಶಾಸ್ತ್ರಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬೌಲರ್ ನಾಯಕನಾಗಬೇಕೆಂದರೆ ಆಲ್ ರೌಂಡರ್ ಆಗಿರಬೇಕು

ಬೌಲರ್ ನಾಯಕನಾಗಬೇಕೆಂದರೆ ಆಲ್ ರೌಂಡರ್ ಆಗಿರಬೇಕು

ಇನ್ನೂ ಮುಂದುವರಿದು ಮಾತನಾಡಿರುವ ರವಿಶಾಸ್ತ್ರಿ ಟೀಮ್ ಇಂಡಿಯಾದ ಯಾವುದಾದರೂ ಬೌಲರ್ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬೇಕೆಂದರೆ ಆತ ಓರ್ವ ಅನುಭವಿ ಆಲ್ ರೌಂಡರ್ ಆಟಗಾರನಾಗಿರಬೇಕು ಎಂದಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಕೊಡುಗೆ ನೀಡಬಲ್ಲಂತಹ ಆಲ್ ರೌಂಡರ್ ಮಾತ್ರ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲು ಅರ್ಹ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಅಂಥ ನಾಯಕ ಸಿಗುವುದು ಅಪರೂಪ

ಅಂಥ ನಾಯಕ ಸಿಗುವುದು ಅಪರೂಪ

ಹೀಗೆ ಆಲ್ ರೌಂಡರ್ ಆಟಗಾರ ಮಾತ್ರ ಭಾರತ ಟೆಸ್ಟ್ ತಂಡದ ನಾಯಕನಾಗಬಹುದು ಎಂದು ಹೇಳಿಕೆ ನೀಡಿರುವ ರವಿಶಾಸ್ತ್ರಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ತೊಡಗಿಸಿಕೊಳ್ಳುವುದರ ಜತೆಗೆ ಪಂದ್ಯದುದ್ದಕ್ಕೂ ಮೈದಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದಿದ್ದಾರೆ. ಈ ರೀತಿಯ ಲಕ್ಷಣಗಳಿರುವ ನಾಯಕರು ಸಿಗುವುದು ತುಂಬಾ ಅಪರೂಪ ಈ ಹಿಂದೆ ಕಪಿಲ್ ದೇವ್, ಇಮ್ರಾನ್ ಮತ್ತು ಗ್ಯಾರ್ಫೀಲ್ಡ್ ಇಂತಹ ಸಾಮರ್ಥ್ಯವಿರುವ ನಾಯಕರಾಗಿದ್ದರು ಎಂದು ಕಪಿಲ್ ದೇವ್ ಉದಾಹರಣೆ ನೀಡಿದ್ದಾರೆ. ಈ ಮೂಲಕ ಜಸ್ಪ್ರೀತ್ ಬೂಮ್ರಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿಯೂ ತೊಡಗಿಸಿಕೊಳ್ಳಲಾಗದ ಕಾರಣ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ನಿಭಾಯಿಸಲು ಅನರ್ಹ ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

Story first published: Friday, January 28, 2022, 10:49 [IST]
Other articles published on Jan 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X