ಜಸ್ಪ್ರೀತ್ ಬೂಮ್ರಾ ವರಿಸಲಿರುವ ವಧು ಯಾರು? ದಕ್ಷಿಣ ಭಾರತ ನಟಿಯಾ ಅಥವಾ ಟಿವಿ ನಿರೂಪಕಿಯಾ?

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ವೈಯಕ್ತಿಕ ಕಾರಣಗಳನ್ನು ನೀಡಿ ಅಂತಿಮ ಪಂದ್ಯದಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದಲೂ ಅವರು ಹೊರಗುಳಿಯಲಿದ್ದಾರೆ. ಇದಕ್ಕೆ ಕಾರಣವೇನೆಂಬುದು ಈಗ ಬಹಿರಂಗವಾಗಿದೆ. ಬೂಮ್ರಾ ಮದುವೆಯಾಗುವ ಹಿನ್ನೆಲೆಯಲ್ಲಿ ತಂಡದಿಂದ ಹೊರಗುಳಿದಿದ್ದಾರೆ ಎಂಬುದು ಖಚಿತವಾಗಿದೆ.

ವರದಿಗಳ ಪ್ರಕಾರ ಬೂಮ್ರಾ ಅವರ ಮದುವೆ ಗೋವಾದಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಇದರಲ್ಲಿ ಕೆಲವೇ ಆಪ್ತರು ಭಾಗಿಯಾಗುವ ನಿರೀಕ್ಷೆಯಿದೆ. ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಹಾಗೂ ವಿಜಯ್ ಹಜಾರೆ ಟ್ರೋಫಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಆಟಗಾರರು ಭಾಗಿಯಾಗುವ ಸಾಧ್ಯತೆಗಳು ಕಡಿಮೆಯಿದೆ.

ಕೊಹ್ಲಿ ಮತ್ತು ಸ್ಟೋಕ್ಸ್ ನಡುವೆ ಮಾತಿನ ಚಕಮಕಿ: ನಿಜಕ್ಕೂ ಆಗಿದ್ದೇನೆಂದು ವಿವರಿಸಿದ ಸಿರಾಜ್

ಆದರೆ ಟೀಮ್ ಇಂಡಿಯಾದ ಈ ಖ್ಯಾತ ಬೌಲರ್‌ನನ್ನು ವರಿಸಲಿರುವ ಆ ವಧು ಯಾರು ಎಂಬುದು ಪ್ರಶ್ನೆಯಾಗಿದೆ. ಈ ಹಿಂದೆ ಜಸ್ಪ್ರೀತ್ ಬೂಮ್ರಾ ಜೊತೆಗೆ ಹಲವು ಹೆಸರುಗಳು ಕೇಳಿ ಬಂದಿತ್ತು. ಅದರಲ್ಲಿ ದಕ್ಷಿಣ ಭಾರತದ ನಟಿಯ ಹೆಸರು ಹಾಗೂ ಟಿವಿ ನಿರೂಪಕಿಯೊಬ್ಬರು ಹೆಸರು ಪ್ರಮುಖವಾಗಿದೆ.

ದಕ್ಷಿಣದ ನಟಿಯನ್ನು ವರಿಸಲಿದ್ದಾರಾ ಬೂಮ್ರಾ?

ದಕ್ಷಿಣದ ನಟಿಯನ್ನು ವರಿಸಲಿದ್ದಾರಾ ಬೂಮ್ರಾ?

ಟೀಮ್ ಇಂಡಿಯಾ ವೇಗಿ ಜಸ್ಪ್ರಿತ್ ಬೂಮ್ರಾ ಹೆಸರು ಈ ಹಿಂದೆ ದಕ್ಷಿಣ ಭಾರತದ ನಟಿ ಅನುಪಮಾ ಪರಮೇಶ್ವರನ್ ಜೊತೆಗೆ ಕೇಳಿ ಬಂದಿತ್ತು. ಹೀಗಾಗಿ ಅನುಪಮಾ ಪರಮೇಶ್ವರ್ ಹೆಸರು ಜಸ್ಪ್ರಿತ್ ಬೂಮ್ರಾ ಜೊತೆಗೆ ಆರಂಭದಲ್ಲಿಯೇ ಕಾಣಿಸಿಕೊಳ್ಳುತ್ತಿದೆ. ಅನುಪಮ ಪರಮೇಶ್ವರ್ ಕನ್ನಡದ 'ಗೂಗ್ಲಿ' ದಕ್ಷಿಣ ಭಾರತದ ಭಾಷೆಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಡೇಟಿಂಗ್ ವರದಿಯನ್ನು ತಿರಸ್ಕರಿಸಿದ್ದ ಅನುಪಮಾ

ಡೇಟಿಂಗ್ ವರದಿಯನ್ನು ತಿರಸ್ಕರಿಸಿದ್ದ ಅನುಪಮಾ

ಕಳೆದ ವರ್ಷಾರಂಭದಲ್ಲಿ ಬೂಮ್ರಾ ಜೊತೆಗೆ ಅನುಪಮಾ ಹೆಸರು ಕೇಳಿಸಿಕೊಂಡಾಗ ಈ ಬಗ್ಗೆ ಸ್ವತಃ ಅನುಪಮಾ ಪರಮೇಶ್ವರನ್ ಸ್ಪಷ್ಟನೆಯನ್ನು ನೀಡಿದ್ದರು. "ನನಗೆ ಆತ ಯಾರೆಂದೇ ಗೊತ್ತಿಲ್ಲ. ಆತ ಕ್ರಿಕೆಟರ್ ಎಂಬುದಷ್ಟೇ ನನಗೆ ತಿಳಿದಿದೆ. ಅದಕ್ಕಿಂತ ಹೆಚ್ಚಿನದೇನೂ ಗೊತ್ತಿಲ್ಲ. ಸೂಕ್ತ ಮಾಹಿತಿಗಳೇ ಇಲ್ಲದೆ ಈ ರೀತಿಯಾಗಿ ಸುದ್ದಿಗಳು ಹರಿದಾಡುವುದು ನಿಜಕ್ಕೂ ಬೇಸರ ತರಿಸುತ್ತದೆ" ಎಂದಿದ್ದರು. ಆದರೆ ಇತ್ತೀಚೆಗೆ ನಟಿ ಅನುಪಮಾ ಗೋವಾದಲ್ಲಿ ತಮ್ಮ ರಜಾದಿನಗಳ ಫೋಟೋವನ್ನು ಹಂಚಿಕೊಂಡ ನಂತರ ಈ ಗಾಳಿಸುದ್ದಿ ಮತ್ತಷ್ಟು ವೇಗವನ್ನು ಪಡೆದುಕೊಂಡಿದೆ.

ಕ್ರೀಡಾ ನಿರೂಪಕಿಯೊಂದಿಗೂ ಕೇಳಿ ಬಂದಿತ್ತು ಬೂಮ್ರಾ ಹೆಸರು

ಕ್ರೀಡಾ ನಿರೂಪಕಿಯೊಂದಿಗೂ ಕೇಳಿ ಬಂದಿತ್ತು ಬೂಮ್ರಾ ಹೆಸರು

ಮುಂಬೈ ಇಂಡಿಯನ್ಸ್ ತಂಡದ ಈ ವೇಗಿಯ ಹೆಸರು ಕ್ರೀಡಾ ನಿರೂಪಕಿ ಮಾಡೆಲ್ ಸಂಜನಾ ಗಣೇಶನ್ ಅವರೊಂದಿಗೂ ಕೇಳಿ ಬಂದಿತ್ತು. ಹೀಗಾಗಿ ಬೂಮ್ರಾ ಅವರನ್ನು ವರಿಸುವ ವಧು ಸಂಜನಾ ಗಣೇಶನ್ ಅವರೇನಾ ಎಂಬುದು ಅಂಬಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಸ್ಟಾರ್ ಸ್ಪೋರ್ಟ್ಸ್ ನಿರೂಪಕಿಯರ ಖಾಯಂ ಸದಸ್ಯೆಯಾಗಿದ್ದಾರೆ ಸಂಜನಾ ಗಣೇಶನ್.

ರಾಶಿ ಖನ್ನಾ ಜೊತೆಗೂ ಬೂಮ್ರಾ ಹೆಸರು ಥಳುಕು

ರಾಶಿ ಖನ್ನಾ ಜೊತೆಗೂ ಬೂಮ್ರಾ ಹೆಸರು ಥಳುಕು

ಬೂಮ್ರಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಆರಂಭಿಕ ದಿನಗಳಲ್ಲಿ ಇನ್ನೋರ್ವ ದಕ್ಷಿಣದ ನಟಿ ರಾಶಿ ಖನ್ನಾ ಜೊತೆಗೆ ಥಳುಕು ಹಾಕಿಕೊಂಡಿತ್ತು. ಬೂಮ್ರಾ ಅವರ ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಬಗ್ಗೆ ಪ್ರಶಂಸೆಯನ್ನು ಈ ನಟಿ ವ್ಯಕ್ತೊಡಿಸಿದ ಬಳಿಕ ಈ ಬಗ್ಗೆ ಚರ್ಚೆಗಳು ನಡೆದಿತ್ತು. ಆದರೆ ಈ ಸುದ್ದಿಯನ್ನು ರಾಶಿ ತಿರಸ್ಕರಿಸಿದ್ದರು.

ನಾಯಕ ಕೊಹ್ಲಿ ಹಾದಿಯನ್ನು ಹಿಡಿಯುತ್ತಾರಾ ಬೂಮ್ರಾ

ನಾಯಕ ಕೊಹ್ಲಿ ಹಾದಿಯನ್ನು ಹಿಡಿಯುತ್ತಾರಾ ಬೂಮ್ರಾ

ಬಾಲಿವುಡ್ ನಟಿ ಅನುಷ್ಕಾ ಶರ್ಮನಾ ಅವರನ್ನು ಪ್ರೀತಿಸಿ ವರಿಸಿದ ನಾಯಕ ವಿರಾಟ್ ಕೊಹ್ಲಿಯನ್ನು ವೇಗಿ ಬೂಮ್ರಾ ಅವರು ಅನುಸರಿಸುತ್ತಾರಾ ಎಂಬುದು ಈಗ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈ ತಾರಾ ಜೋಡಿ 2017ರ ಡಿಸೆಂಬರ್ 11ರಂದು ವರಿಸಿದ್ದರು. 2019ರಲ್ಲಿ ಟೀಮ್ ಇಂಡಿಯಾದ ಇನ್ನೋರ್ವ ಆಟಗಾರ ಮನೀಶ್ ಪಾಂಡೆ ಕೂಡ ದಕ್ಷಿಣ ಭಾರತದ ನಟಿಯನ್ನು ಮದುವೆಯಾಗಿದ್ದರು.

ಸ್ಟುವರ್ಟ್ ಬಿನ್ನಿಯನ್ನು ಅನುಸರಿಸುತ್ತಾರಾ ವೇಗಿ

ಸ್ಟುವರ್ಟ್ ಬಿನ್ನಿಯನ್ನು ಅನುಸರಿಸುತ್ತಾರಾ ವೇಗಿ

ಈ ಹಿಂದೆ ಟೀಮ್ ಇಂಡಿಯಾ ಸದಸ್ಯರಾಗಿದ್ದ ಸ್ಟುವರ್ಟ್ ಬಿನ್ನಿ ಖ್ಯಾತ ಕ್ರೀಡಾ ನಿರೂಪಕಿ ಮಯಾಂತಿ ಲ್ಯಾಂಗರ್ ಅವರನ್ನು ವರಿಸಿದ್ದರು. ಜಸ್ಪ್ರಿತ್ ಬೂಮ್ರಾ ನಿರೂಪಕಿಯನ್ನು ವರಿಸುವ ಮೂಲಕ ಸ್ಟುವರ್ಟ್ ಬಿನ್ನಿಯನ್ನು ಅನುಸರಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಈ ಬಿನ್ನಿ-ಲ್ಯಾಂಗರ್ ಜೋಡಿ ಪ್ರಥಮ ಮಗುವನ್ನು ಬರಮಾಡಿಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, March 5, 2021, 13:03 [IST]
Other articles published on Mar 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X