ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬೂಮ್ರಾ ಕಥೆ ಹೀಗ್ಯಾಕಾಯ್ತು?

ಭಾರತದ ಬೌಲಿಂಗ್ ಬ್ರಹ್ಮಾಸ್ತ್ರ ಕಮ್ ಬ್ಯಾಕ್ ಮಾಡ್ತಾರಾ? | Jasprit Bumrah | Oneindia Kannada

ಟೀಮ್ ಇಂಡಿಯಾದ ಬೌಲಿಂಗ್ ಬ್ರಹ್ಮಾಸ್ತ್ರ ಅಂದ್ರೆ ಅದು ಜಸ್ಪ್ರೀತ್ ಬೂಮ್ರಾ . ತನ್ನ ಕರಾರುವಾಕ್ ದಾಳಿಯ ಮೂಲಕ ಎದುರಾಳಿಯನ್ನು ಕಂಗೆಡಿಸುವ ಚಾಕಚಕ್ಯತೆ ಹೊಂದಿರುವ ಆಟಗಾರ ಬೂಮ್ರಾ. ಅದೆಷ್ಟೋ ಪಂದ್ಯಗಳಲ್ಲಿ ಸೋಲುವ ಪಂದ್ಯಗಳಲ್ಲಿ ಬೌಲಿಂಗ್ ದಾಳಿಯ ಮೂಲಕ ಗೆಲ್ಲಿಸಿ ಕೊಟ್ಟ ಸಾಹಸಿ ಬೌಲರ್.

ಆದರೆ ಗಾಯಗೊಂಡು ಹೊರಗುಳಿದ ಬಳಿಕ ಮರಳಿ ತಂಡಕ್ಕೆ ಸೇರಿಕೊಂಡ ಜಸ್ಪ್ರೀತ್ ಬೂಮ್ರಾ ತನ್ ಮೊನಚನ್ನೇ ಕಳೆದುಕೊಂಡು ಬಿಟ್ಟರಾ? ಹೀಗೊಂದು ಅನುಮಾನ ಸುಮ್ಮನೆ ಹುಟ್ಟಿಕೊಂಡಿದ್ದಲ್ಲ. ಅದಕ್ಕೆ ಕಾರಣ ಏಕದಿನ ಪಂದ್ಯದಲ್ಲಿ ಬೂಮ್ರಾ ಪ್ರದರ್ಶನ

ಅನಿವಾರ್ಯ ಸಂದರ್ಭಗಳಲ್ಲಿ ವಿಕೆಟ್ ಕಬಳಿಸಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದ ಬೂಮ್ರಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ಇದು ಇಡೀ ತಂಡದ ಪ್ರದರ್ಶನದ ಮೇಲೂ ಪ್ರಭಾವ ಬೀರಿದೆ ಎಂದರೆ ತಪ್ಪಿಲ್ಲ.

ಕೀವಿಸ್ ವಿರುದ್ಧದ ಏಕದಿನ ಸರಣಿಯಲ್ಲಿ ವೈಫಲ್ಯ:

ಕೀವಿಸ್ ವಿರುದ್ಧದ ಏಕದಿನ ಸರಣಿಯಲ್ಲಿ ವೈಫಲ್ಯ:

ಜಸ್ಪ್ರೀತ್ ಬೂಮ್ರಾ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಎಷ್ಟರ ಮಟ್ಟಿಗೆಂದರೆ ಇಡೀ ಸರಣಿಯಲ್ಲಿ ಮೂರು ಪಂದ್ಯಗಳಲ್ಲಿ ಮೂವತ್ತು ಓವರ್‌ಗಳನ್ನು ಎಸೆದಿದ್ದಾರೆ. ಆದರೆ ಒಂದೇ ಒಂದು ವಿಕೆಟ್ ಪಡೆಯಲು ಅವರಿಂದ ಸಾಧ್ಯವಾಗಿಲ್ಲ. ಇದು ತಂಡಕ್ಕೇ ಆಘಾತ ನೀಡುವ ಸುದ್ಧಿ.

ಲೈನ್‌ ಮತ್ತು ಲೆಂತ್ ಕಂಟ್ರೋಲ್ ಕಳೆದುಕೊಂಡು ಬಿಟ್ರಾ!

ಲೈನ್‌ ಮತ್ತು ಲೆಂತ್ ಕಂಟ್ರೋಲ್ ಕಳೆದುಕೊಂಡು ಬಿಟ್ರಾ!

ಕರಾರುವಾಕ್ ದಾಳಿಗೆ ಹೆಸರಾದ ಬೂಮ್ರಾ ತಮ್ಮ ಮೊನಚನ್ನೇ ಕಳೆದುಕೊಂಡು ಬಿಟ್ರಾ ಅನ್ನುವ ಅನುಮಾನ ಮೂಡುತ್ತದೆ. ಅದರಲ್ಲೂ ನ್ಯೂಜಿಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಬರೊಬ್ಬರಿ 13 ವೈಡ್‌ಗಳನ್ನು ಎಸೆದಿದ್ದರು. ಇದಕ್ಕೂ ಹಿಂದಿನ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯ 3 ಪಂದ್ಯಗಳಲ್ಲಿ 14 ವೈಡ್‌ಗಳನ್ನು ಎಸೆದಿದ್ದರು. ಇದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಚಿಂತೆ ಹೆಚ್ಚಿಸಿದ್ದು ಸುಳ್ಳಲ್ಲ.

ಕಮ್‌ಬ್ಯಾಕ್ ಬಳಿಕ:

ಕಮ್‌ಬ್ಯಾಕ್ ಬಳಿಕ:

ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ಬೂಮ್ರಾ ಶ್ರೀಲಂಕಾ ವಿರುದ್ಧದ ಸರಣಿಯ ಮೂಲಕ ಬೂಮ್ರಾ ಕಮ್‌ಬ್ಯಾಕ್‌ ಮಾಡಿದರು. ಶ್ರೀಲಂಕಾ ವಿರುದ್ಧ ಎರಡು ಟಿ20 ಪಂದ್ಯಗಳಲ್ಲಿ ಎರಡು ವಿಕೆಟ್ ಮಾತ್ರವೇ ಕೀಳುವಲ್ಲಿ ಯಶಸ್ವಿಯಾದರು. ಬಳಿಕ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯಲ್ಲಿ ರನ್‌ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರೂ ಪಡೆದಿದ್ದು ಕೇವಲ ಒಂದು ವಿಕೆಟ್ ಮಾತ್ರ.

4 ಸರಣಿಯಲ್ಲಿ 6 ವಿಕೆಟ್:

4 ಸರಣಿಯಲ್ಲಿ 6 ವಿಕೆಟ್:

ಜಸ್ಪ್ರೀತ್ ಬೂಮ್ರಾ ಕಮ್‌ಬ್ಯಾಕ್‌ ಬಳಿಕ 4 ಸರಣಿಯಲ್ಲಿ ಪಾಲ್ಕೊಂಡಿದ್ದಾರೆ. ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿ ಮತ್ತು ನ್ಯೂಜಿಲೆಂಡ್ ವಿರುದ್ಧ ಟಿ20 ಮತ್ತು ಏಕದಿನ ಸರಣಿಯಲ್ಲಿ ಆಟವಾಡಿದ್ದಾರೆ. ಆದರೆ ಇದರಲ್ಲಿ ಕೇವಲ 6 ವಿಕೆಟ್ ಪಡೆಯುವಲ್ಲಿ ಮಾತ್ರವೇ ಯಶಸ್ವಿಯಾಗಿದ್ದಾರೆ. ಪ್ರಮುಖ ಬೌಲರ್ ಆಗಿರುವ ಬೂಮ್ರಾ ಅವರ ಮೇಲೆ ನಿರೀಕ್ಷೆ ಹೆಚ್ಚಿರುವುದರಿಂದ ತಂಡಕ್ಕೆ ಅವರ ಕೊಡುಗೆ ಅತ್ಯಗತ್ಯವಿದೆ.

ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್:

ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್:

ಜಸ್ಪ್ರೀತ್ ಬೂಮ್ರಾ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಆಡಿದ 9 ಪಂದ್ಯಗಳಲ್ಲಿ ಬೂಮ್ರಾ ಇದರಲ್ಲಿ 18 ವಿಕೆಟ್ ಪಡೆದು ಮಿಂಚು ಹರಿಸಿದ್ದರು. 4.41ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿದ್ದಾರೆ. ವಿಶ್ವಕಪ್‌ನಲ್ಲಿ 9 ಮೇಡನ್ ಓವರ್‌ ಎಸೆದು ದಾಖಲೆಯನ್ನೂ ಮಾಡಿದ್ದಾರೆ.

ಕಮ್‌ಬ್ಯಾಕ್ ಕಷ್ಟವಲ್ಲ:

ಕಮ್‌ಬ್ಯಾಕ್ ಕಷ್ಟವಲ್ಲ:

ಬೂಮ್ರಾ ವಿಶ್ವದರ್ಜೆಯ ಬೌಲರ್ ಏಕದಿನ ಶ್ರೇಯಾಂಕದಲ್ಲಿ ನಂಬರ್‌ 1 ಸ್ಥಾನವನ್ನು ಅಲಂಕರಿಸಿದ್ದಾರೆ. ಬೌಲಿಂಗ್‌ನಲ್ಲಿ ಸದ್ಯ ಹಿನ್ನೆಡೆ ಅನುಭವಿಸುತ್ತಿದ್ದರೂ ಬೂಮ್ರಾನಂತಾ ಆಟಗಾರನಿಗೆ ಮತ್ತೆ ಮಿಂಚುಹರಿಸುವುದು ಕಷ್ಟವಲ್ಲ. ಮತ್ತೆ ತನ್ನ ಎಂದಿನ ಫಾರ್ಮ್‌ಗೆ ಬೂಮ್ರಾ ಮರಳಲಿ ಎಂಬುದು ಅಭಿಮಾನಿಗಳ ಆಶಯ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, February 11, 2020, 18:08 [IST]
Other articles published on Feb 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X