ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಟೆಸ್ಟ್ ಕ್ರಿಕೆಟ್ ನಾಯಕತ್ವಕ್ಕೆ ನಾನು ರೆಡಿ ಇದ್ದೇನೆ ಎಂದ ಬುಮ್ರಾ!

Jasprit bumrah

ಟೀಂ ಇಂಡಿಯಾ ಟೆಸ್ಟ್ ನಾಯಕತ್ವ ವಹಿಸಿಕೊಳ್ಳಲು ನಾನು ಸಿದ್ಧ ಎಂದು ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಹೇಳಿದ್ದಾರೆ. ನಾಯಕತ್ವದ ಜವಾಬ್ದಾರಿಯನ್ನು ಪಡೆಯುವುದು ದೊಡ್ಡ ಗೌರವ ಎಂದು ಅವರು ಹೇಳಿದರು.

ಟೀಂ ಇಂಡಿಯಾ ಸೀಮಿತ ಓವರ್‌ಗಳ ನಾಯಕ ರೋಹಿತ್ ಶರ್ಮಾ ಗಾಯದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿರುವ ಕಾರಣ, ಕೆ.ಎಲ್ ರಾಹುಲ್ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಇನ್ನು ಟೆಸ್ಟ್ ಸರಣಿಯಲ್ಲಿ ಈಗಾಗಲೇ ಕೊಹ್ಲಿ ರಾಜೀನಾಮೆ ನೀಡಿರುವ ಕಾರಣ ಉಪನಾಯಕ ಜಸ್ಪ್ರೀತ್ ಬುಮ್ರಾ ನಾಯಕನಾಗಿ ಕಣಕ್ಕಿಳಿದ್ರು ಆಶ್ಚರ್ಯವಿಲ್ಲ.

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಹಿನ್ನಲೆಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಜಸ್ಪ್ರೀತ್ ಬುಮ್ರಾ, ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಟೆಸ್ಟ್ ನಾಯಕತ್ವದ ಬಗ್ಗೆ ಕೇಳಲಾದ ಪ್ರಶ್ನೆಗೆ ಬುಮ್ರಾ ಸಕಾರಾತ್ಮಕವಾಗಿ ಉತ್ತರ ನೀಡಿದ್ದಾರೆ.

ಟೆಸ್ಟ್‌ ತಂಡದ ನಾಯಕನಾಗಲು ನಾನು ರೆಡಿ!

ಟೆಸ್ಟ್‌ ತಂಡದ ನಾಯಕನಾಗಲು ನಾನು ರೆಡಿ!

ಟೆಸ್ಟ್ ತಂಡದ ನಾಯಕನಾಗುವ ಅವಕಾಶ ಸಿಕ್ಕರೆ ಅದೊಂದು ದೊಡ್ಡ ಗೌರವ. ನನಗೆ ಗೊತ್ತಿರುವ ಯಾವ ಆಟಗಾರನೂ ನಾಯಕತ್ವದ ಅವಕಾಶವನ್ನು ಬೇಡ ಎನ್ನುವುದಿಲ್ಲ. ನಾಯಕನಾಗಿ ನನ್ನ ಕೈಲಾದ ಮಟ್ಟಿಗೆ ತಂಡವನ್ನು ಬೆಂಬಲಿಸುತ್ತೇನೆ. ನಾಯಕತ್ವ ನೀಡದಿದ್ದರೂ ಆಟಗಾರನಾಗಿ ನನ್ನ ಸಾಮರ್ಥ್ಯಕ್ಕಾಗಿ ಶ್ರಮಿಸುತ್ತೇನೆ. ನನ್ನ ಗಮನ ಉತ್ತಮ ಸಾಧನೆಯತ್ತ ಇರುತ್ತದೆ.

ಏಕದಿನ ಸರಣಿಯಲ್ಲಿ ನಾನು ಉಪನಾಯಕನ ಪಾತ್ರವನ್ನು ವಹಿಸಿಕೊಳ್ಳುವುದು ಮತ್ತು ನನ್ನ ಸಹ ಆಟಗಾರರಿಗೆ ಬೆಂಬಲ ನೀಡುವುದು ಸಹಜ. ಪ್ರಸ್ತುತ ಪರಿಸ್ಥಿತಿಯನ್ನು ನಾನು ಅದೇ ರೀತಿಯಲ್ಲಿ ನೋಡುತ್ತೇನೆ. ಉಪನಾಯಕನಾಗಿ ಜವಾಬ್ದಾರಿಯುತವಾಗಿ ವರ್ತಿಸುವುದು, ಆಟಗಾರರೊಂದಿಗೆ ಮಾತನಾಡುವುದು, ಅವರಿಗೆ ಸಹಾಯ ಮಾಡುವುದು ನನ್ನ ಕೆಲಸ ಎಂದು ನಾನು ನೋಡುತ್ತೇನೆ ಎಂದು ಬುಮ್ರಾ ಹೇಳಿದರು.

ಕೊಹ್ಲಿ ತಂಡದ ಸಭೆಯಲ್ಲಿ ರಾಜೀನಾಮೆ ಕುರಿತು ತಿಳಿಸಿದ್ದರು

ಕೊಹ್ಲಿ ತಂಡದ ಸಭೆಯಲ್ಲಿ ರಾಜೀನಾಮೆ ಕುರಿತು ತಿಳಿಸಿದ್ದರು

ಟೀಮ್ ಇಂಡಿಯಾ ತಂಡದ ಸಭೆಯಲ್ಲಿ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯುವುದಾಗಿ ತಿಳಿಸಿದ್ದರು ಎಂದು ಬುಮ್ರಾ ಹೇಳಿದ್ದಾರೆ. ಅವರ ನಿರ್ಧಾರವನ್ನು ಗೌರವಿಸುತ್ತೇನೆ ಮತ್ತು ನಾಯಕನಾಗಿ ಅವರ ಸಾಧನೆಗಳಿಗೆ ಅಭಿನಂದನೆಗಳು ಎಂದು ಅವರು ಹೇಳಿದರು.

'ಒಂದು ತಂಡವಾಗಿ ನಾವೆಲ್ಲರೂ ತುಂಬಾ ಹತ್ತಿರವಾಗಿದ್ದೇವೆ. ತಂಡದ ಸಭೆಯ ವೇಳೆ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಕೊಹ್ಲಿ ಪ್ರಕಟಿಸಿದರು. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ನಾವು ಅವರ ನಾಯಕತ್ವವನ್ನು ಗೌರವಿಸುತ್ತೇವೆ. ನಾಯಕನಾಗಿ ಅವರ ಸಾಧನೆಗಳಿಗಾಗಿ ನಾವು ಅವರನ್ನು ಅಭಿನಂದಿಸುತ್ತೇವೆ ಎಂದಿದ್ದಾರೆ.

ಕೊಹ್ಲಿ ರಾಜೀನಾಮೆ: 'ನಾಯಕತ್ವ ಯಾರ ಜನ್ಮಸಿದ್ದ ಹಕ್ಕು ಅಲ್ಲ' ಎಂದ ಗೌತಮ್ ಗಂಭೀರ್

ಕೊಹ್ಲಿ ನಾಯಕನಾದ ಮೇಲೆ ಸಾಕಷ್ಟು ಬದಲಾವಣೆ

ಕೊಹ್ಲಿ ನಾಯಕನಾದ ಮೇಲೆ ಸಾಕಷ್ಟು ಬದಲಾವಣೆ

ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ನಾಯಕನಾದ ಬಳಿಕ ತಂಡದಲ್ಲಿ ಭಾರಿ ಬದಲಾವಣೆ ತಂದಿದ್ದಾರೆ ಎಂದು ಹೊಗಳಿದರು. ಕೊಹ್ಲಿ ತಂಡಕ್ಕೆ ಹೊಸ ಶಕ್ತಿ ಹಾಗೂ ಫಿಟ್ನೆಸ್ ಸಂಪ್ರದಾಯ ತಂದಿದ್ದಾರೆ. ಅವರು ತಂಡವನ್ನು ಅದ್ಭುತ ರೀತಿಯಲ್ಲಿ ಮುನ್ನಡೆಸಿದರು. ಅವರ ನೇತೃತ್ವದಲ್ಲಿ ಎಲ್ಲರೂ ಒಂದೇ ಮಾರ್ಗದಲ್ಲಿ ನಡೆದರು. ವಿರಾಟ್ ಅಸಾಧಾರಣ ಆಟಗಾರ. ನಾಯಕತ್ವದ ಬದಲಾವಣೆಯನ್ನು ನಾವು ಅರ್ಥಮಾಡಿಕೊಳ್ಳಬಹುದು. ತಂಡದ ಎಲ್ಲಾ ಆಟಗಾರರು ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ತಂಡವಾಗಿ ನಾವು ಅದಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತೇವೆ ಎಂದು ಬುಮ್ರಾ ಹೇಳಿದ್ದಾರೆ.

ಕೊಹ್ಲಿ ರಾಜೀನಾಮೆ ನೀಡಿ 2 ದಿನ ಕಳೆದ್ರೂ, ನಾವಿಕನೇ ಇಲ್ಲದೆ ನೌಕೆಯಂತಾಗಿದೆ ಭಾರತ

Usman Khawajaರನ್ನು stage ಮೇಲೆ ಕರೆಯಲು Pat Cummins ಮಾಡಿದ್ದೇನು | Oneindia Kannada
ಮೂರು ಫಾರ್ಮೆಟ್‌ನಲ್ಲಿ ಬುಮ್ರಾ ಬೆಸ್ಟ್ ಬೌಲರ್

ಮೂರು ಫಾರ್ಮೆಟ್‌ನಲ್ಲಿ ಬುಮ್ರಾ ಬೆಸ್ಟ್ ಬೌಲರ್

ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ ಏಳನೇ ಬಾರಿಗೆ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಬಾರಿಗೆ ಐದು ವಿಕೆಟ್ ಪಡೆದ ಬುಮ್ರಾ, ಆಫ್ರಿಕನ್ನರ ಬ್ಯಾಟಿಂಗ್ ಬಲವನ್ನ ಅಡಗಿಸಿದ್ರು. ಬುಮ್ರಾ ಅವರು ದಕ್ಷಿಣ ಆಫ್ರಿಕಾದ ಪಿಚ್‌ಗಳಿಗೆ ಹೊಂದಿಕೊಂಡು ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ. ಆಯಾ ದೇಶದ ಪೇಸ್ ಮತ್ತು ಬೌನ್ಸ್ ಅನ್ನು ಬಳಸಿಕೊಳ್ಳುವ ಜಾಣ್ಮೆಯ ಬೌಲರ್. ಈ ಪ್ರದರ್ಶನವನ್ನು ಗಮನಕ್ಕೆ ತೆಗೆದುಕೊಂಡು ಮಾಜಿ ಆಶಸ್ ವಿಜೇತ ಇಂಗ್ಲೆಂಡ್ ನಾಯಕ ಮೈಕೆಲ್ ವಾನ್ ಮೂರು ಫಾರ್ಮೆಟ್‌ನಲ್ಲಿ ಬುಮ್ರಾ ಬೆಸ್ಟ್ ಎಂದು ಹೊಗಳಿದ್ದಾರೆ.

Story first published: Monday, January 17, 2022, 22:10 [IST]
Other articles published on Jan 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X