ನಾಯಿಗಳು ಬೊಗಳುತ್ತವೇ ಎಂದು ಕಲ್ಲು ಹೊಡೆಯುತ್ತಾ ನಿಲ್ಲಲಾರೆ: ಟೀಕಾಕಾರರ ಬಾಯಿ ಮುಚ್ಚಿಸಿದ ಜಸ್ಪ್ರೀತ್ ಬುಮ್ರಾ!

ಟಿ20 ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಸ್ಕ್ವಾಡ್ ಈಗಾಗಲೇ ಆಸ್ಟ್ರೇಲಿಯಾಗೆ ತಲುಪಿದ್ದಾಗಿದೆ. 15 ಆಟಗಾರರ ಸ್ಕ್ವಾಡ್‌ನಲ್ಲಿ ಪ್ರಮುಖ ಆಟಗಾರ ಜಸ್ಪ್ರೀತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ಇಂಜ್ಯುರಿಯಿಂದಾಗಿ ಭಾರತಕ್ಕೆ ಹಿನ್ನಡೆಯಾಗಿದ್ದು, ಬದಲಿ ಆಟಗಾರರು ಇಲ್ಲದೆಯೇ ಕಾಂಗರೂ ನಾಡಿಗೆ ಕಾಲಿಟ್ಟಿದೆ.

ಜಸ್ಪ್ರೀತ್ ಬುಮ್ರಾ ಇಂಜ್ಯುರಿಯು ಟೀಂ ಇಂಡಿಯಾಗೆ ನುಂಗಲಾರದ ತುತ್ತಾಗಿದ್ದು, ಪ್ರಮುಖ ಸ್ಟಾರ್ ಬೌಲರ್ ಇಲ್ಲದೆ ಭಾರತ ಟಿ20 ವಿಶ್ವಕಪ್ ಅಭಿಯಾನ ಪ್ರಾರಂಭಿಸಲಿದೆ. ವಿಶ್ವಕಪ್‌ಗೂ ಮುನ್ನ ಭಾರತ ನಾಲ್ಕು ಅಭ್ಯಾಸ ಪಂದ್ಯಗಳನ್ನ ಸಹ ಆಡಲಿದೆ.

ವಿಶ್ವಕಪ್‌ನಿಂದ ಹೊರಬಿದ್ದಿರುವುದಕ್ಕೆ ಸಾಕಷ್ಟು ಬೇಸರಗೊಂಡಿರುವ ಬುಮ್ರಾ

ವಿಶ್ವಕಪ್‌ನಿಂದ ಹೊರಬಿದ್ದಿರುವುದಕ್ಕೆ ಸಾಕಷ್ಟು ಬೇಸರಗೊಂಡಿರುವ ಬುಮ್ರಾ

ಜಸ್ಪ್ರೀತ್ ಬುಮ್ರಾ ಈಗಾಗಲೇ ಏಷ್ಯಾಕಪ್‌ನಿಂದ ಹೊರಬಿದ್ದಿದ್ದಲ್ಲದೆ ಮುಂಬರುವ ಟಿ20 ವಿಶ್ವಕಪ್‌ನಲ್ಲೂ ಆಡುವ ಅವಕಾಶವನ್ನ ಕಳೆದುಕೊಂಡರು. ಇದರಿಂದಾಗಿ ಸಾಕಷ್ಟು ನೊಂದಿರುವ ಜಸ್ಪ್ರೀತ್ ಬುಮ್ರಾ ಟ್ವೀಟ್ ಮೂಲಕ ತಮ್ಮ ನೋವನ್ನು ಹೊರಹಾಕಿದ್ದರು.

''ನಾನು ಈ ಬಾರಿ ಟಿ20 ವಿಶ್ವಕಪ್‌ನ ಭಾಗವಾಗುವುದಿಲ್ಲ ಎಂದು ತುಂಬಾ ನೋವಾಗಿದೆ. ಆದ್ರೆ ನನ್ನ ಪ್ರೀತಿಪಾತ್ರರಿಂದ ನಾನು ಪಡೆದ ಶುಭಾಶಯಗಳು, ಕಾಳಜಿ ಮತ್ತು ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಾನು ಚೇತರಿಸಿಕೊಂಡ ಬಳಿಕ ಆಸ್ಟ್ರೇಲಿಯಾದಲ್ಲಿ ಟೀಂ ಇಂಡಿಯಾವನ್ನ ಹುರಿದುಂಬಿಸುತ್ತೇನೆ'' ಎಂದು ಜಸ್ಪ್ರೀತ್ ಬುಮ್ರಾ ಟ್ವೀಟ್ ಮಾಡಿದ್ದರು.

Ind vs SA 1st ODI: ದ. ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸೋಲಿಗೆ 4 ಪ್ರಮುಖ ಕಾರಣಗಳು

ಐಪಿಎಲ್‌ನಲ್ಲಿ ಆಡ್ತೀರಾ, ಟೀಂ ಇಂಡಿಯಾ ಪರ ಆಡಲು ಇಂಜ್ಯುರಿಯೇ?

ಐಪಿಎಲ್‌ನಲ್ಲಿ ಆಡ್ತೀರಾ, ಟೀಂ ಇಂಡಿಯಾ ಪರ ಆಡಲು ಇಂಜ್ಯುರಿಯೇ?

ಐಪಿಎಲ್‌ ಪೂರ್ಣ ಪ್ರಮಾಣದ ಸೀಸನ್ ಆಡುವ ಜಸ್ಪ್ರೀತ್ ಬುಮ್ರಾ, ಟೀಂ ಇಂಡಿಯಾ ಪರ ಆಡುವಾಗ ಅದ್ರಲ್ಲೂ ಪ್ರಮುಖ ಟೂರ್ನಮೆಂಟ್‌ಗಳಲ್ಲಿ ಈ ರೀತಿಯಲ್ಲಿ ಇಂಜ್ಯುರಿಯಾಗಿ ತಂಡಕ್ಕೆ ದೊಡ್ಡ ತೊಂದರೆಯಾಗಿರುವುದು ಸರಿಯಲ್ಲ ಎಂದು ಅನೇಕ ನೆಟ್ಟಿಗರು ಬುಮ್ರಾ ಕುರಿತಾಗಿ, ಬುಮ್ರಾ ಆಯ್ಕೆಗಳ ಕುರಿತಾಗಿ ನಾನಾ ರೀತಿಯಲ್ಲಿ ಟ್ರೋಲ್ ಮಾಡಿದ್ದರು. ಐಸಿಸಿ ಟೂರ್ನಿಗಳ ಮುನ್ನ ಫಿಟ್ನೆಸ್ ಕಾಯ್ದುಕೊಳ್ಳದೆ ಈ ರೀತಿ ತಂಡಕ್ಕೆ ದೊಡ್ಡ ಹೊಡೆತ ನೀಡಿದ್ದು ಸರಿಯೇ? ಎಂಬಂತೆಲ್ಲಾ ಪ್ರಶ್ನೆಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಕೇಳಲಾಗಿತ್ತು.

56-57 ಆಟಗಾರರನ್ನ ಆಡಿಸಿದ್ರಿ, ಆದ್ರೆ ನಿಮಗೆ 1 ಉತ್ತಮ ತಂಡ ರಚಿಸಲು ಸಾಧ್ಯವಾಗ್ಲಿಲ್ಲ: ಟೀಂ ಇಂಡಿಯಾ ವಿರುದ್ಧ ಲತೀಫ್ ವಾಗ್ದಾಳಿ!

ಟೀಕಾಕಾರರಿಗೆ ಉತ್ತರ ನೀಡಿದ ಬುಮ್ರಾ.. ಅರ್ಥವಾಗದ ರೀತಿಯಲ್ಲಿ ಇನ್‌ಸ್ಟಾಗ್ರಾಮ್ ಸ್ಟೋರಿ

ಟೀಕಾಕಾರರಿಗೆ ಉತ್ತರ ನೀಡಿದ ಬುಮ್ರಾ.. ಅರ್ಥವಾಗದ ರೀತಿಯಲ್ಲಿ ಇನ್‌ಸ್ಟಾಗ್ರಾಮ್ ಸ್ಟೋರಿ

ಇನ್ನು ಇತ್ತೀಚೆಗೆ ಜಸ್ಪ್ರೀತ್ ಬುಮ್ರಾ ಅರ್ಥವಾಗದ ರೀತಿಯ ಸಂದೇಶವನ್ನ ನೀಡುವಂತೆ ಪರೋಕ್ಷವಾಗಿ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. ಅವರು ವಿನ್ಸ್ಟನ್ ಚರ್ಚಿಲ್ ಅವರ ಜನಪ್ರಿಯ ಉಲ್ಲೇಖವನ್ನು ಪೋಸ್ಟ್ ಮಾಡಿದ್ದಾರೆ.

''ಬೊಗಳುವ ಪ್ರತಿ ನಾಯಿಗೆ ಕಲ್ಲನ್ನು ಹೊಡೆಯುತ್ತಾ ನಿಂತರೆ, ನಿಮ್ಮ ಗುರಿಯನ್ನ ತಲುಪಲು ಸಾಧ್ಯವಿಲ್ಲ'' ಎಂದು ಬುಮ್ರಾ ಇನ್‌ಸ್ಟಾಗ್ರಾಮ್‌ ಸ್ಟೋರಿಯನ್ನು ಹಾಕಿಕೊಂಡಿದ್ದು, ಇದನ್ನು ಯಾರಿಗೆ ಉದ್ದೇಶಿಸಿ ಹಾಕಿದ್ದಾರೆ ಎಂಬುದರ ಕುರಿತು ಚರ್ಚೆ ಆರಂಭಗೊಂಡಿದ್ದು, ಟೀಕಾಕಾರರ ಬಾಯಿ ಮುಚ್ಚಿಸಲು ಬುಮ್ರಾ ಯಾರ್ಕರ್ ಹಾಕಿದಂತಿದೆ.

ಇಂಜ್ಯುರಿಯಿಂದಾಗಿ ದುಬೈನಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದ ಜಸ್ಪ್ರೀತ್ ಬುಮ್ರಾ, ಕಳೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನಾಡಿ ಮತ್ತೆ ಇಂಜ್ಯುರಿಗೆ ಒಳಗಾದರು. ಹೀಗಾಗಿಯೇ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ಕಳೆದುಕೊಂಡಿದ್ದರ ಜೊತೆಗೆ ವಿಶ್ವಕಪ್‌ನಲ್ಲೂ ಆಡುವ ಅವಕಾಶ ವಂಚಿತರಾದರು.

ಥಾಯ್ಲೆಂಡ್‌ ಎದುರು ಸೋತ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ: ಟ್ವಿಟ್ಟರ್‌ನಲ್ಲಿ ಭಾರೀ ಟ್ರೋಲ್

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಸ್ಕ್ವಾಡ್

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಸ್ಕ್ವಾಡ್

ರೋಹಿತ್ ಶರ್ಮಾ (ನಾಯಕ ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್.

For Quick Alerts
ALLOW NOTIFICATIONS
For Daily Alerts
Story first published: Friday, October 7, 2022, 12:01 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X