ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಶ್ರೇಯಾಂಕ: ಅಗ್ರಸ್ಥಾನ ಉಳಿಸಿಕೊಂಡ ಕೊಹ್ಲಿ, ಬೂಮ್ರಾ

ನವದೆಹಲಿ, ಅಕ್ಟೋಬರ್ 8: ಸೋಮವಾರ ಪ್ರಕಟವಾದ ಏಕದಿನ ಕ್ರಿಕೆಟ್‌ ಐಸಿಸಿ ಶ್ರೇಯಾಂಕದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ.

ಸತತ ಎರಡನೆಯ ವಾರವೂ ಭಾರತದ ಆಟಗಾರಾದ ವಿರಾಟ್ ಕೊಹ್ಲಿ ಮತ್ತು ಜಸ್ ಪ್ರೀತ್ ಬೂಮ್ರಾ, ಕ್ರಮವಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಸೆಪ್ಟೆಂಬರ್ 30ರಂದು ಪ್ರಕಟವಾಗಿದ್ದ ಶ್ರೇಯಾಂಕದಲ್ಲಿಯೂ ಈ ಇಬ್ಬರು ಮುಂಚೂಣಿಯ ಸ್ಥಾನದಲ್ಲಿದ್ದರು.

ವೇಗದ ಬೌಲರ್ ಜಸ್‌ ಪ್ರೀತ್ ಬೂಮ್ರಾ 797 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅಫ್ಘಾನಿಸ್ತಾನದ ಲೆಗ್‌ ಸ್ಪಿನ್ನರ್ ರಶೀದ್ ಖಾನ್ 788 ಅಂಕಗಳೊಂದಿಗೆ ಎರಡನೆಯ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಈ ಇಬ್ಬರಿಗಿಂತ ತೀರಾ ಕಡಿಮೆ, 700 ಅಂಕಗಳನ್ನು ಹೊಂದಿದ್ದರೂ ಭಾರತದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಮೂರನೇ ಸ್ಥಾನದಲ್ಲಿದ್ದಾರೆ.

ಐಸಿಸಿ Ranking: ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಐಸಿಸಿ Ranking: ವಿಶ್ವ ಶ್ರೇಷ್ಠ ಬ್ಯಾಟ್ಸ್ಮನ್ ಸ್ಥಾನದಲ್ಲಿ ವಿರಾಟ್ ಕೊಹ್ಲಿ

ಕಳೆದ ವಾರ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವೆ ಮಾತ್ರ ಏಕದಿನ ಪಂದ್ಯಗಳು ನಡೆದಿವೆ. ಹೀಗಾಗಿ ಈ ಎರಡು ತಂಡಗಳ ಪಾಯಿಂಟ್‌ಗಳಲ್ಲಿ ವ್ಯತ್ಯಾಸವಾಗಿದೆ. ಉಳಿದ ತಂಡಗಳು ಮತ್ತು ಆಟಗಾರರ ಪಾಯಿಂಟ್‌ನಲ್ಲಿ ಬದಲಾವಣೆಗಳಾಗಿಲ್ಲ.

ಕೊಹ್ಲಿ ಮೊದಲ ಸ್ಥಾನ

ಕೊಹ್ಲಿ ಮೊದಲ ಸ್ಥಾನ

ವಿರಾಟ್ ಕೊಹ್ಲಿ 884 ರೇಟಿಂಗ್‌ನೊಂದಿಗೆ ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಜಿಂಬಾಬ್ವೆ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿಯನ್ನು 3-0ಯಿಂದ ಗೆದ್ದುಕೊಂಡ ಬಳಿಕ ದಕ್ಷಿಣ ಆಫ್ರಿಕಾದ ಬೌಲರ್‌ಗಳಾದ ಕಗಿಸೋ ರಬಾಡ ಮತ್ತು ಇಮ್ರಾನ್ ತಾಹೀರ್ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಐಸಿಸಿ ODI ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ರಶೀದ್ ಖಾನ್!

ಮೇಲೇರಿದ ರಬಾಡ

ಮೇಲೇರಿದ ರಬಾಡ

ಟೆಸ್ಟ್‌ನಲ್ಲಿ ಎರಡನೆಯ ಸ್ಥಾನದಲ್ಲಿರುವ ರಬಾಡ, ಜಿಂಬಾಬ್ವೆ ವಿರುದ್ಧ ಎರಡು ಪಂದ್ಯಗಳಲ್ಲಿ ಐದು ವಿಕೆಟ್ ಕಬಳಿಸಿ ಮೂರು ಸ್ಥಾನಗಳನ್ನು ಮೇಲೇರಿದ್ದಾರೆ. ಅವರು ಶ್ರೇಯಾಂಕದಲ್ಲಿ ಆರನೇ ಸ್ಥಾನದಲ್ಲಿದ್ದಾರೆ. ಇದೇ ಸರಣಿಯಲ್ಲಿ ಎರಡನೆಯ ಪಂದ್ಯದಲ್ಲಿ ಹ್ಯಾಟ್ರಿಕ್ ಸೇರಿದಂತೆ ಹತ್ತು ವಿಕೆಟ್ ಪಡೆದ ತಾಹೀರ್ ಕೂಡ ಮೂರು ಸ್ಥಾನ ಮೇಲಕ್ಕೇರಿದ್ದು ಏಳನೇ ಶ್ರೇಯಾಂಕದಲ್ಲಿದ್ದಾರೆ.

ಬಿಸಿಸಿಐ ವಿರುದ್ಧ ದನಿಯೆತ್ತಿದ ಕರುಣ್, ವಿಜಯ್ ಗೆ ಸಂಕಷ್ಟ?

ಭಾರತ ಎರಡನೆಯ ಸ್ಥಾನ

ಭಾರತ ಎರಡನೆಯ ಸ್ಥಾನ

#1 ಇಂಗ್ಲೆಂಡ್ ತಂಡ : ಪಂದ್ಯಗಳು 51, 6,470 ಅಂಕಗಳು, 127 ರೇಟಿಂಗ್
#2 ಭಾರತ : ಪಂದ್ಯಗಳು 53, 6,492 ಅಂಕಗಳು, 122 ರೇಟಿಂಗ್
#3 ನ್ಯೂಜಿಲೆಂಡ್ : ಪಂದ್ಯಗಳು 41, 4602 ಅಂಕಗಳು, 112 ರೇಟಿಂಗ್
#4 ದಕ್ಷಿಣ ಆಫ್ರಿಕಾ : ಪಂದ್ಯಗಳು 42, 427635 ಅಂಕಗಳು, 110 ರೇಟಿಂಗ್
#5 ಪಾಕಿಸ್ತಾನ : ಪಂದ್ಯಗಳು 41, 4145 ಅಂಕಗಳು, 101 ರೇಟಿಂಗ್

ಏಕದಿನ ಬ್ಯಾಟ್ಸ್‌ಮನ್ ಗಳು ಟಾಪ್ 05

ಏಕದಿನ ಬ್ಯಾಟ್ಸ್‌ಮನ್ ಗಳು ಟಾಪ್ 05

1. ವಿರಾಟ್ ಕೊಹ್ಲಿ (ಭಾರತ), 884 ರೇಟಿಂಗ್
2. ರೋಹಿತ್ ಶರ್ಮ (ಭಾರತ), 842 ರೇಟಿಂಗ್
3. ಜೋ ರೂಟ್ (ಇಂಗ್ಲೆಂಡ್), 818 ರೇಟಿಂಗ್
4. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), 803 ರೇಟಿಂಗ್
5. ಶಿಖರ್ ಧವನ್ (ಭಾರತ), 802 ರೇಟಿಂಗ್

ಏಕದಿನ ಟಾಪ್ 05 ಬೌಲರ್‌ಗಳು

ಏಕದಿನ ಟಾಪ್ 05 ಬೌಲರ್‌ಗಳು

1. ಜಸ್ ಪ್ರೀತ್ ಬೂಮ್ರಾ (ಭಾರತ), 797 ರೇಟಿಂಗ್
2. ರಶೀದ್ ಖಾನ್ (ಅಫ್ಘಾನಿಸ್ತಾನ) 788 ರೇಟಿಂಗ್
3. ಕುಲದೀಪ್ ಯಾದವ್ (ಭಾರತ), 700 ರೇಟಿಂಗ್
4. ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್), 699 ರೇಟಿಂಗ್
5. ಜೋಶ್ ಹೇಜಲ್ ವುಡ್ (ಆಸ್ಟ್ರೇಲಿಯಾ), 696 ರೇಟಿಂಗ್

Story first published: Monday, October 8, 2018, 18:57 [IST]
Other articles published on Oct 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X