ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೂಮ್ರಾ ಮುಂದೊಮ್ಮೆ ಕೊಹ್ಲಿಯಾದರೆ ಅದರಲ್ಲಿ ಅಚ್ಚರಿಯಿಲ್ಲ: ಕೈಫ್

Jasprit Bumrah will become Virat Kohli of bowling: Mohammed Kaif

ಭುವನೇಶ್ವರ, ನವೆಂಬರ್ 3: ಜಸ್‌ಪ್ರೀತ್ ಬೂಮ್ರಾ ಅವರು ಭಾರತ ಕ್ರಿಕೆಟ್ ತಂಡದ ಆಸ್ತಿ. ಮುಂದೊಂದು ದಿನ ಬೂಮ್ರಾ, ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಅನ್ನಿಸಿಕೊಳ್ಳಬಲ್ಲರು ಎಂದು ಮಾಜಿ ಆಟಗಾರ ಮೊಹಮ್ಮದ್ ಕೈಫ್ ಹೇಳಿದ್ದಾರೆ.

ಕೊಹ್ಲಿ, ಧೋನಿ ಮೇಲೆ ಪ್ರೀತಿ ಹೆಚ್ಚಾಗಲು ಇಲ್ಲೊಂದು ಚಂದದ ನೆಪವಿದೆ!ಕೊಹ್ಲಿ, ಧೋನಿ ಮೇಲೆ ಪ್ರೀತಿ ಹೆಚ್ಚಾಗಲು ಇಲ್ಲೊಂದು ಚಂದದ ನೆಪವಿದೆ!

ಭಾರತದ ಜಾಂಟಿ ರೋಡ್ಸ್ ಖ್ಯಾತಿಯ ಕೈಫ್, ಒಡಿಶಾದ ಭುನವೇಶ್ವರದಲ್ಲಿ ನಡೆಯುತ್ತಿರುವ ಎಕಮ್ರಾ ಸ್ಪೋರ್ಟ್ಸ್ ಲಿಟರರಿ ಫೆಸ್ಟಿವಲ್‌ನಲ್ಲಿ ಮಾತನಾಡುತ್ತ, 'ಮುಂದೊಂದು ದಿನ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಎನಿಸುವ ಅಂಶಗಳು ಬೂಮ್ರಾ ಅವರಲ್ಲಿದೆ' ಎಂದರು.

ಐಸಿಸಿ ಏಕದಿನ Ranking: ಜಿಗಿದ ಚಾಹಲ್, ಕುಸಿದ ಧವನ್, ಮಿಂಚಿದ ಕೊಹ್ಲಿಐಸಿಸಿ ಏಕದಿನ Ranking: ಜಿಗಿದ ಚಾಹಲ್, ಕುಸಿದ ಧವನ್, ಮಿಂಚಿದ ಕೊಹ್ಲಿ

ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಐಸಿಸಿ ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ನಿಜಕ್ಕೂ ಅಪ್ರತಿಮ ಆಟಗಾರ. ಇದರರ್ಥವಾಗಿಯೇ ಕೈಫ್, ಬೂಮ್ರಾ ಅವರು ಮುಂದೊಮ್ಮೆ ಕೊಹ್ಲಿ ಅನ್ನಿಸಬಲ್ಲರು ಎಂದು ಹೇಳಿದ್ದಾರೆ.

ಫೀಲ್ಡಿಂಗ್ ಪ್ರವೀಣ

ಫೀಲ್ಡಿಂಗ್ ಪ್ರವೀಣ

ಬೌಲಿಂಗ್ ಮತ್ತು ಫೀಲ್ಡಿಂಗ್ ಅಂದಕೂಡಲೇ ಈಗಲೂ ಮೊಹಮ್ಮದ್ ಕೈಫ್ ಪಕ್ಕನೆ ನೆನಪಾಗುತ್ತಾರೆ. ಮುಖ್ಯವಾಗಿ ಸ್ಲಿಪ್ ಫೀಲ್ಡಿಂಗ್ ನಂತ ಪರಿಣಾಮಕಾರಿ ಕ್ರಿಕೆಟ್ ಕೌಶಲಕ್ಕೆ ಫಿಟ್ ಅನ್ನಿಸಕೊಂಡಿದ್ದವರು ಕೈಫ್. ಮೊಹಮ್ಮದ್ ಆಸುಪಾಸಿನಲ್ಲಿ ಚೆಂಡು ಸುಳಿದಾಡಿದ್ದೇ ಆದರೆ ಅದನ್ನು ಮಿಂಚಿನ ವೇಗದಲ್ಲಿ ಹಾರಿ ಹಿಡಿಯುತ್ತಿದ್ದುದು ಈಗಲೂ ಕ್ರಿಕೆಟ್ ಪ್ರೇಮಿಗಳ ಕಣ್ಣೆದುರು ನಿಲ್ಲೋದಿದೆ.

ಬೂಮ್ರಾ, ಕೊಹ್ಲಿಯಾದರೆ ಅಚ್ಚರಿಯಿಲ್ಲ!

ಬೂಮ್ರಾ, ಕೊಹ್ಲಿಯಾದರೆ ಅಚ್ಚರಿಯಿಲ್ಲ!

'ವೇಗದ ಬೌಲಿಂಗ್‌ಗಾಗಿ ಭಾರತದ ಮುಂದೆ ಸಾಕಷ್ಟು ಆಯ್ಕೆಗಳಿವೆ. ಈ ನಡುವೆ ಬೂಮ್ರಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಬೌಲಿಂಗ್ ವಿಚಾರದಲ್ಲಿ ಬೂಮ್ರಾ ಮುಂದೊಂದು ದಿನ ವಿರಾಟ್ ಕೊಹ್ಲಿಯಂತಾದರೆ ಅದರಲ್ಲಿ ವಿಶೇಷವಿಲ್ಲ' ಎಂದು ಕೈಫ್ ಹೇಳಿದರು.

55 ಏಕದಿನ ಕ್ಯಾಚ್

55 ಏಕದಿನ ಕ್ಯಾಚ್

ಏಕದಿನ ಕ್ರಿಕೆಟ್ ನಲ್ಲಿ 110 ಇನ್ನಿಂಗ್ಸ್ ಗಳನ್ನಾಡಿರುವ ಈಗ 37ರ ಹರೆಯದ ಕೈಫ್, 32.01ರ ಸರಾಸರಿಯಲ್ಲಿ 2753 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 2 ಶತಕ, 17 ಅರ್ಧ ಶತಕಗಳು ಸೇರಿವೆ. ಕೈಫ್, ಏಕದಿನದಲ್ಲಿ 55 ಕ್ಯಾಚ್ ಪಡೆದ ಸಾಧನೆ ಹೊಂದಿದ್ದಾರೆ. ಬಲಗೈ ಆಫ್‌ಬ್ರೇಕ್ ಬೌಲಿಂಗ್ ಕೂಡ ಮಾಡುತ್ತಿದ್ದ ಕೈಫ್, ತಂಡದ ಆಲ್‌ ರೌಂಡರ್ ಅನ್ನಿಸಿದ್ದರು. ಆದರೆ ಅಂಡರ್ 19 ತಂಡದ ನಾಯಕರಾಗಿದ್ದ ಕೈಫ್ ಕ್ರಿಕೆಟ್ ವೃತ್ತಿಯಲ್ಲಿ ಹೆಚ್ಚು ಕಾಲ ನಿಲ್ಲಲಿಲ್ಲ.

ಕ್ರಿಕೆಟ್ ತಂಡದ ಆಸ್ತಿ

ಕ್ರಿಕೆಟ್ ತಂಡದ ಆಸ್ತಿ

'ನಾನು ಬೂಮ್ರಾ ಅವರನ್ನು ಇತ್ತೀಚೆಗೆ ಗಮನಿಸಿದ್ದೇನೆ. ಅವರು ಔಟ್ ಸ್ವಿಂಗರ್‌ನಲ್ಲೂ ಬೌಲಿಂಗ್ ಮಾಡಬಲ್ಲರು. ಅಷ್ಟೇ ಅಲ್ಲ ಬೂಮ್ರಾ ಫಾಸ್ಟ್ ಯಾರ್ಕರ್ ಕೂಡ ಎಸೆಯಬಲ್ಲರು. ಕಡಿಮೆ ಅವಧಿಯಲ್ಲೇ ಕ್ರಿಕೆಟ್ ಬದುಕಿನಲ್ಲಿ ಬೂಮ್ರಾ ಬಹಳಷ್ಟು ಸಾಧಿಸಿದ್ದಾರೆ. ಇದಕ್ಕಾಗಿಯೇ ಅವರು ಕ್ರಿಕೆಟ್ ತಂಡದ ಆಸ್ತಿ ಎನಿಸಿದ್ದಾರೆ' ಎಂದು ಕೈಫ್ ಅಭಿಪ್ರಾಯಪಟ್ಟರು.

Story first published: Saturday, November 3, 2018, 17:39 [IST]
Other articles published on Nov 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X