ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಆಡಿಸಿ ದುಡ್ದು ಮಾಡುವುದನ್ನು ಬಿಟ್ಟು ಜೀವ ಉಳಿಸಿ : ಪಾಕ್ ಮಾಜಿ ಕ್ರಿಕೆಟಿಗ ಗರಂ

Javed Miandad Slams PCB Over Resumption of PSL

ಕೊರೊನಾವೈರಸ್ ಕೇವಲ ಭಾರತ ಮಾತ್ರವಲ್ಲದೆ ವಿಶ್ವದ ಹಲವಾರು ದೇಶಗಳನ್ನು ಕಾಡುತ್ತಿದೆ. ಇತ್ತೀಚೆಗಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ ಬಯೋಬಬಲ್ ಒಳಗೂ ಸಹ ಕೊರೊನಾವೈರಸ್ ಪ್ರವೇಶಿಸಿದ ಕಾರಣ ಪ್ರಸ್ತುತ ಟೂರ್ನಿಯನ್ನು ಮುಂದೂಡಿರುವುದಾಗಿ ಬಿಸಿಸಿಐ ತಿಳಿಸಿತ್ತು. ವಿವಿಧ ತಂಡಗಳ ಕೆಲ ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರವನ್ನು ಕೈಗೊಂಡಿತ್ತು.

ಇದಕ್ಕೂ ಮುನ್ನ ಮಾರ್ಚ್ ತಿಂಗಳಿನಲ್ಲಿ ಪಾಕಿಸ್ತಾನದ 6ನೇ ಆವೃತ್ತಿಯ ಪಾಕಿಸ್ತಾನ್ ಸೂಪರ್ ಲೀಗ್ ಕೂಡ ಇದೇ ಮಾದರಿಯಲ್ಲಿ ಮುಂದೂಡಲ್ಪಟ್ಟಿತ್ತು. ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸಿದ್ದ 6 ಕ್ರಿಕೆಟಿಗರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಈ ನಿರ್ಧಾರವನ್ನು ಕೈಗೊಂಡಿತ್ತು. ಹೀಗೆ ಐಪಿಎಲ್ ಮಾದರಿಯಲ್ಲಿಯೇ ಮಾರ್ಚ್ ತಿಂಗಳಲ್ಲಿ ಪಿಎಸ್ಎಲ್ ಟೂರ್ನಿ ಕೊರೊನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.

ಹೀಗೆ ಮುಂದೂಡಲ್ಪಟ್ಟಿದ್ದ ಪಿಎಸ್ಎಲ್ ಟೂರ್ನಿಯನ್ನು ಜೂನ್ 1ರಿಂದ ಯುಎಇಯಲ್ಲಿ ಮುಂದುವರೆಸಲು ಪಿಸಿಬಿ ಚಿಂತನೆ ನಡೆಸಿತ್ತು. ಪಿಎಸ್ಎಲ್ ಟೂರ್ನಿಯ ಉಳಿದ 20 ಪಂದ್ಯಗಳನ್ನು ಯುಎಇಯಲ್ಲಿ ನಡೆಸಲು ಚರ್ಚೆಗಳು ಆರಂಭವಾಗುತ್ತಿದ್ದಂತೆಯೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. 'ಇದು ಕ್ರಿಕೆಟ್ ಆಡುವ ಸಮಯವಲ್ಲ, ಜೀವ ಉಳಿಸುವ ಸಮಯ. ಸೊಂಕು ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಕ್ರಿಕೆಟ್ ಆಡುವುದರ ಬದಲು ಜೀವಗಳನ್ನು ಉಳಿಸುವ ಕಡೆ ಹೆಚ್ಚಿನ ಗಮನವನ್ನು ಹರಿಸಬೇಕು. ಇಡೀ ಪ್ರಪಂಚವೇ ಕೊರೊನಾವೈರಸ್‌ನಿಂದ ತೊಂದರೆಗೊಳಗಾಗಿದ್ದು, ಟಿ ಟ್ವೆಂಟಿ ವಿಶ್ವಕಪ್ ನಡೆಯಬೇಕಿದ್ದ ಭಾರತವೂ ಕೂಡ ಕೊರೊನಾ ಹೊಡೆತಕ್ಕೆ ಸಿಲುಕಿದೆ' ಎಂದು ಜಾವೇದ್ ಮಿಯಾಂದಾದ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಹಾಗೂ ಪಿಎಸ್ಎಲ್ ಮುಂದುವರೆಸುವ ನಿರ್ಧಾರವನ್ನು ಕೈಗೊಂಡ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ವಿರುದ್ಧ ಜಾವೇದ್ ಮಿಯಾಂದಾದ್ ಆಕ್ರೋಶ ವ್ಯಕ್ತಪಡಿಸಿದರು. 'ಅವರು ದುಡ್ಡು ಮಾಡಿಕೊಳ್ಳುವುದಕ್ಕೋಸ್ಕರ ಹಲವಾರು ಜನರ ಜೀವವನ್ನು ಒತ್ತೆ ಇಡುತ್ತಿದ್ದಾರೆ. ಒಂದುವೇಳೆ ನಾನೇನಾದರೂ ಪಿಎಸ್ಎಲ್ ಆಯೋಜಕನಾಗಿದ್ದರೆ ಇಂತಹ ನಿರ್ಧಾರವನ್ನು ಕೈಗೊಳ್ಳುತ್ತಿರಲಿಲ್ಲ. ಅವರು ಯೋಜಿಸಿರುವಂತೆ ಪಿಎಸ್ಎಲ್ ಪಂದ್ಯಗಳನ್ನು ನಡೆಸಿ ಯಾರಿಗಾದರೂ ತೊಂದರೆಯಾದರೆ ಯಾರು ಜವಾಬ್ದಾರಿಯನ್ನು ಹೊರುತ್ತಾರೆ?' ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ವಿರುದ್ಧ ಜಾವೇದ್ ಮಿಯಾಂದಾದ್ ಕಿಡಿಕಾರಿದರು.

Story first published: Tuesday, May 11, 2021, 14:30 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X