ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಗೆ ಸಚಿನ್: ಕೋಚ್ ದ್ರಾವಿಡ್ ಜೊತೆ ಕೈಜೋಡಿಸಲಿದ್ದಾರೆ ಕ್ರಿಕೆಟ್ ದೇವರು!

Jay Shah trying to convince Sachin Tendulkar to take up a role in team India: Reports

ಇತ್ತೀಚಿನ ದಿನಗಳಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗರನ್ನು ಬಿಸಿಸಿಐ ಮತ್ತೆ ಟೀಮ್ ಇಂಡಿಯಾಕ್ಕೆ ಹೆಚ್ಚಾಗಿ ಕರೆತರುತ್ತಿದೆ. ಇದಕ್ಕೆ ತಾಜಾ ಉದಾಹರಣೆಗಳೆಂದರೆ ಕಳೆದ ವರ್ಷ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ನೇಮಕ ಮಾಡಿದ್ದು ಹಾಗೂ ಭಾರತದ ಮತ್ತೋರ್ವ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರನ್ನು ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಹುದ್ದೆಗೆ ನೇಮಿಸಿದ್ದು.

ಐಪಿಎಲ್ 2022: ಎಬಿಡಿ ಈ ತಂಡದ ಪರ ಮೈದಾನಕ್ಕಿಳಿಯಲಿದ್ದಾರೆ ಎಂದ ಮಾಜಿ ಕ್ರಿಕೆಟಿಗಐಪಿಎಲ್ 2022: ಎಬಿಡಿ ಈ ತಂಡದ ಪರ ಮೈದಾನಕ್ಕಿಳಿಯಲಿದ್ದಾರೆ ಎಂದ ಮಾಜಿ ಕ್ರಿಕೆಟಿಗ

ಹೀಗೆ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರನ್ನು ಕರೆತಂದಿದ್ದ ಬಿಸಿಸಿಐ ಇದೀಗ ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಭಾರತ ತಂಡಕ್ಕೆ ಕರೆತರುವ ಪ್ರಯತ್ನದಲ್ಲಿದ್ದು ಉನ್ನತ ಹುದ್ದೆಯೊಂದನ್ನು ನೀಡುವ ಯೋಜನೆಯಲ್ಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿರುವ ಪ್ರಕಾರ ಬಿಸಿಸಿಐನ ಕಾರ್ಯಾಧ್ಯಕ್ಷ ಜಯ್ ಶಾ ಸಚಿನ್ ತೆಂಡೂಲ್ಕರ್ ಅವರನ್ನು ಭಾರತ ತಂಡಕ್ಕೆ ಕರೆತರುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ.

ಐಪಿಎಲ್ 2022: ಮೆಗಾ ಆಕ್ಷನ್ ಎಲ್ಲಿ? ಯಾವಾಗ?: ಅಧಿಕೃತ ಮಾಹಿತಿ ನೀಡಿದ ಐಪಿಎಲ್ ಆಡಳಿತ ಮಂಡಳಿಐಪಿಎಲ್ 2022: ಮೆಗಾ ಆಕ್ಷನ್ ಎಲ್ಲಿ? ಯಾವಾಗ?: ಅಧಿಕೃತ ಮಾಹಿತಿ ನೀಡಿದ ಐಪಿಎಲ್ ಆಡಳಿತ ಮಂಡಳಿ

ಎಲ್ಲಾ ಅಂದುಕೊಂಡಂತೆ ನಡೆದರೆ ಸಚಿನ್ ತೆಂಡೂಲ್ಕರ್ ಟೀಮ್ ಇಂಡಿಯಾವನ್ನು ಸೇರಲಿದ್ದು ಈಗಾಗಲೇ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿರುವ ರಾಹುಲ್ ದ್ರಾವಿಡ್ ಅವರ ಜೊತೆ ಕೈ ಜೋಡಿಸಲಿದ್ದಾರೆ. ಈ ಮೂಲಕ ಇಬ್ಬರು ದಿಗ್ಗಜ ಕ್ರಿಕೆಟಿಗರ ಮಾರ್ಗದರ್ಶನ ಹಾಗೂ ಸಲಹೆಗಳಲ್ಲಿ ಈಗಾಗಲೇ ಬಲಿಷ್ಠವಾಗಿರುವ ಟೀಮ್ ಇಂಡಿಯಾ ಮತ್ತಷ್ಟು ಬಲಿಷ್ಠವಾಗುವುದು ಖಚಿತ ಎಂದು ನೆಟ್ಟಿಗರು ಹಾಗೂ ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ಮಾರ್ಗದರ್ಶಕನಾಗ್ತಾರಾ ಸಚಿನ್ ತೆಂಡೂಲ್ಕರ್?

ಮಾರ್ಗದರ್ಶಕನಾಗ್ತಾರಾ ಸಚಿನ್ ತೆಂಡೂಲ್ಕರ್?

ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಟೀಮ್ ಇಂಡಿಯಾಗೆ ಕರೆತರುವಲ್ಲಿ ಜಯ್ ಶಾ ಯಶಸ್ವಿಯಾದರೆ ತೆಂಡೂಲ್ಕರ್ ಅವರಿಗೆ ಯಾವ ಜವಾಬ್ದಾರಿಯನ್ನು ನೀಡಬಹುದು ಎಂಬ ಚರ್ಚೆಗಳು ಆರಂಭವಾಗಿವೆ. ಟೀಮ್ ಇಂಡಿಯಾದ ಕೋಚ್ ಹುದ್ದಗಳ ಪೈಕಿ ಉನ್ನತ ಹುದ್ದೆಯಾದ ಹೆಡ್ ಕೋಚ್ ಸ್ಥಾನದಲ್ಲಿ ಈಗಾಗಲೇ ರಾಹುಲ್ ದ್ರಾವಿಡ್ ಇರುವುದರಿಂದ ಸಚಿನ್ ತೆಂಡೂಲ್ಕರ್ ಅವರಿಗೆ ಟೀಮ್ ಇಂಡಿಯಾದ ಮೆಂಟರ್ ಸ್ಥಾನವನ್ನು ನೀಡುವ ಸಾಧ್ಯತೆಗಳು ಹೆಚ್ಚಿವೆ ಎಂಬ ಮಾತುಗಳು ಹರಿದಾಡುತ್ತಿವೆ.

ಬಿಸಿಸಿಐ ಮಾತಿಗೆ ಒಪ್ಪಿಗೆ ಸೂಚಿಸಿದರೆ ಮುಂಬೈ ಇಂಡಿಯನ್ಸ್ ಬಿಡಬೇಕಾಗುತ್ತದೆ ಸಚಿನ್

ಬಿಸಿಸಿಐ ಮಾತಿಗೆ ಒಪ್ಪಿಗೆ ಸೂಚಿಸಿದರೆ ಮುಂಬೈ ಇಂಡಿಯನ್ಸ್ ಬಿಡಬೇಕಾಗುತ್ತದೆ ಸಚಿನ್

ಇನ್ನು ಸಚಿನ್ ತೆಂಡೂಲ್ಕರ್ ಅವರ ಮನವೊಲಿಸುವ ಯತ್ನದಲ್ಲಿರುವ ಬಿಸಿಸಿಐ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇ ಆದರೆ ಐಸಿಸಿ ನಿಯಮದ ಪ್ರಕಾರ ಸಚಿನ್ ತೆಂಡೂಲ್ಕರ್ ತಾವು ನಿರ್ವಹಿಸುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ಮಾರ್ಗದರ್ಶಕನ ಜವಾಬ್ದಾರಿಯನ್ನು ಕೈಬಿಡಬೇಕಾಗುತ್ತದೆ. ಇನ್ನು ಕಳೆದ ಕೆಲ ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಚಿನ್ ತೆಂಡೂಲ್ಕರ್ ಉತ್ತಮವಾಗಿ ತಂಡವನ್ನು ನಿಭಾಯಿಸುತ್ತಿದ್ದು, ಅದೇ ಕೆಲಸವನ್ನು ಭಾರತ ಕ್ರಿಕೆಟ್ ತಂಡದಲ್ಲಿಯೂ ಮುಂದುವರೆಸುವ ಸಾಧ್ಯತೆಗಳಿವೆ.

Pant out of 3rd Test? ಕುತೂಹಲ ಮೂಡಿಸಿದ ಸಾಹ ಟ್ವಿಟ್ಟರ್ ಪೋಸ್ಟ್:ಇವತ್ತು ಯಾರು ಇನ್ ಯಾರು ಔಟ್?|Oneindia Kannada
ಜಯ್ ಶಾ ಮನವೊಲಿಸದೇ ಬಿಡುವುದಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು

ಜಯ್ ಶಾ ಮನವೊಲಿಸದೇ ಬಿಡುವುದಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು

ಇನ್ನು ಜಯ್ ಶಾ ಸಚಿನ್ ತೆಂಡೂಲ್ಕರ್ ಅವರ ಮನವೊಲಿಸಲು ಯತ್ನಿಸುತ್ತಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ನೆಟ್ಟಿಗರು ಹಾಗೂ ಕ್ರೀಡಾ ಪಂಡಿತರು ಜಯ್ ಶಾ ಈ ಕೆಲಸವನ್ನು ಮಾಡದೇ ಬಿಡುವುದಿಲ್ಲ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಭಾರತದ ಹೆಡ್ ಕೋಚ್ ಆಗಿ ಕಾರ್ಯನಿರ್ವಹಿಸಲು ರಾಹುಲ್ ದ್ರಾವಿಡ್ ಮೊದಲಿಗೆ ಒಲ್ಲೆ ಎಂದಿದ್ದರು. ಆದರೆ ಜಯ್ ಶಾ ರಾಹುಲ್ ದ್ರಾವಿಡ್ ಅವರ ಮನವೊಲಿಸುವವರೆಗೂ ಹೆಜ್ಜೆಯನ್ನು ಹಿಂದಿಡಲಿಲ್ಲ, ಅದೇ ರೀತಿ ಈ ಬಾರಿಯೂ ಕೂಡ ಜಯ್ ಶಾ ಸಚಿನ್ ತೆಂಡೂಲ್ಕರ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ನೆಟ್ಟಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Tuesday, January 11, 2022, 18:24 [IST]
Other articles published on Jan 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X