ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿಶ್ವಕಪ್‌ ತಂಡದಲ್ಲಿನ ಜವಾಬ್ದಾರಿ ನಿರಾಕರಿಸಿದ ಜಯವರ್ಧನೆ!

Jayawardene declines role in Sri Lanka WC team

ಲಂಡನ್‌, ಮೇ 26: ಶ್ರೀಲಂಕಾ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ, ದ್ವೀಪ ರಾಷ್ಟ್ರದ ಈ ಬಾರಿಯ ವಿಶ್ವಕಪ್‌ ಅಭಿಯಾನದಲ್ಲಿ ತಾವು ಯಾವುದೇ ಜವಾಬ್ದಾರಿ ನಿಭಾಯಿಸುವುದಿಲ್ಲ ಎಂದು ಹೇಳಿದ್ದಾರೆ.

ವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದುವಿಶ್ವಕಪ್‌: ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕೊಹ್ಲಿ ಹೇಳಿದ್ದಿದು

"ವಿಶ್ವಕಪ್‌ ವೇಳೆ ಶ್ರೀಲಂಕಾ ತಂಡಕ್ಕೆ ನೆರವಾಗುವಂತೆ ಹಲವು ಬಾರಿ ಆಹ್ವಾನ ಸಿಕ್ಕಿದೆ. ಆದರೆ, ಬೇರೆ ಕೆಲಸಗಳಲ್ಲಿ ನಿರತನಾಗಿದ್ದೇನೆ. ಪ್ರಮುಖವಾಗಿ ಶ್ರೀಲಂಕಾ ತಂಡದಲ್ಲಿ ನಾನು ವಹಿಸಬೇಕಾಗಿರುವ ಪಾತ್ರವೇನು ಎಂಬುದರ ಸ್ಪಷ್ಟತೆ ಇಲ್ಲವಾಗಿದೆ,' ಎಂದು ಸಂದರ್ಶನವೊಂದರಲ್ಲಿ ಜಯವರ್ಧನೆ ಹೇಳಿಕೊಂಡಿದ್ದಾರೆ.

ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹರಿಸಿದ ರನ್‌ ಹೊಳೆಯ ದಾಖಲೆಗಳಿವುವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಹರಿಸಿದ ರನ್‌ ಹೊಳೆಯ ದಾಖಲೆಗಳಿವು

"ತಾಂತ್ರಿಕವಾಗಿ ತಂಡದಲ್ಲಿಗುರುತಿಸಿಕೊಳ್ಳುವುದರಲ್ಲಿ ಯಾವುದೇ ಅರ್ಧದವಿಲ್ಲ. ತಂಡದ ಆಯ್ಕೆ ಮತ್ತಿತ್ತರ ಎಲ್ಲಾ ಸಂಗತಿಗಳನ್ನು ನಡೆಸುವಾಗ ನನ್ನ ಅಭಿಪ್ರಾಯವನ್ನು ಕೇಳುವ ಗೋಜಿಗೂ ಹೋಗಿಲ್ಲ. ಹೀಗಿರುವಾಗ ತಂಡದ ಜೊತೆಗೆ ಕಾರ್ಯ ನಿರ್ವಹಿಸುವ ಮಾತೇ ಇಲ್ಲ,'' ಎಂದು ಜಯವರ್ಧನೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಫೇವರಿಟ್ಸ್‌ ಎಂದ ಮಾತ್ರಕ್ಕೆ ಭಾರತ ಪ್ರಶಸ್ತಿ ಗೆದ್ದಂತಲ್ಲ: ಶಾಕಿಬ್‌!ಫೇವರಿಟ್ಸ್‌ ಎಂದ ಮಾತ್ರಕ್ಕೆ ಭಾರತ ಪ್ರಶಸ್ತಿ ಗೆದ್ದಂತಲ್ಲ: ಶಾಕಿಬ್‌!

"ಆದರೂ ತಂಡದ ನಿರ್ವಹಣೆ ವಿಚಾರದಲ್ಲಿ ಅಲ್ಪ ಕೊಡುಗೆ ಸಲ್ಲಿಸಬಲ್ಲ. ಆದರೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಜೊತೆಗೆ ಯಾವುದೇ ಕೆಲಸ ಮಾಡಲು ಬಯಸುವುದಿಲ್ಲ. ಇದು ನನಗೆ ಸೂಕ್ತವಾದ ಜಾಗ ಅಲ್ಲ ಎಂಬುದು ಅರ್ಥವಾಗಿದೆ,'' ಎಂದು ಕ್ರಿಕೆಟ್‌ ಶ್ರೀಲಂಕಾ ವಿರುದ್ಧದ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡಕ್ಕೆ ಈ ಸೌಲಭ್ಯವಿಲ್ಲ!ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡಕ್ಕೆ ಈ ಸೌಲಭ್ಯವಿಲ್ಲ!

ಇದಕ್ಕೂ ಮೊದಲು ಶ್ರೀಲಂಕಾದ ದೇಶಿ ಕ್ರಿಕೆಟ್‌ ಟೂರ್ನಿಯ ಮಾದರಿಯಲ್ಲಿ ಬದಲಾವಣೆ ತರುವಂತೆ ಜಯವರ್ಧನ ಪ್ರಸ್ಥಾವನೆ ಇಟ್ಟಿದ್ದರು. ಆದರೆ, ಇದಕ್ಕೆ ಯಾರಿಂದಲೂ ಬೆಂಬಲ ಸಿಗಲಿಲ್ಲ. ಜಯವರ್ಧನೆ, ಕುಮಾರ ಸಂಗಕ್ಕಾರ ಮತ್ತು ಅರವಿಂದ ಡಿ'ಸಿಲ್ವಾ ಅವರನ್ನೊಳಗೊಂಡ ಸಮಿತಿ ಕಳೆದ ವರ್ಷ ಈ ಪ್ರಸ್ಥಾವನೆಯನ್ನು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಎದುರು ಇರಿಸಿತ್ತು. ಆದರೆ, ಇದನ್ನು ಕಡೆಗಣಿಸಲಾಗಿತ್ತು.

ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!ಸ್ಟೀವ್‌ ವಾ ಪ್ರಕಾರ ವಿಶ್ವಕಪ್‌ನಲ್ಲಿ ಮಿಂಚುವ ಬ್ಯಾಟ್ಸ್‌ಮನ್‌ಗಳಿವರು!

"ಎಂಟು ತಿಂಗಳ ಸಮಯ ತೆಗೆದುಕೊಂಡು ವೃತ್ತಿಪರ ಕ್ರಿಕೆಟ್‌ ವ್ಯವಸ್ಥೆಯನ್ನು ಸಿದ್ಧಪಡಿಸಿದ್ದೆವು. ಅವರಿಗಾಗಿ ಈ ಯೋಜನೆಯನ್ನು ಮುಂದಿಟ್ಟಿದ್ದೆವು. ಆದರೆ ಇದನ್ನು ತಿರಸ್ಕರಿಸಲಾಯಿತು. ನಮ್ಮ ಆಟಗಾರರು ಲೀಗ್‌ ಕ್ರಿಕೆಟ್‌ ಸಲುವಾಗಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗೆ ತೆರಳುವುದನ್ನು ತಪ್ಪಿಸುವುದು ನಮ್ಮ ಉದ್ದೇಶವಾಗಿತ್ತು. ಈ ಅನುಭವಿ ಆಟಗಾರರು ನಮ್ಮಲ್ಲಿಯೇ ಉಳಿಯಬೇಕು ಎಂಬುದು ನಮ್ಮ ನಿಲುವಾಗಿತ್ತು,'' ಎಂದು ಜಯವರ್ಧನೆ ಹೇಳಿದ್ದಾರೆ.

Story first published: Sunday, May 26, 2019, 16:33 [IST]
Other articles published on May 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X