ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೂಲನ್ ಗೋಸ್ವಾಮಿ ವಿದಾಯ ಪಂದ್ಯ: ಗಾರ್ಡ್ ಆಫ್ ಹಾನರ್ ನೀಡಿ ಗೌರವಿಸಿದ ಇಂಗ್ಲೆಂಡ್ ತಂಡ

Jhulan Goswami Gets A Guard Of Honour From England women team In final Match

ಭಾರತ ಹಾಗೂ ಇಂಗ್ಲೆಂಡ್ ವನಿತೆಯರ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೂಲಕ ಭಾರತದ ಹಿರಿಯ ಆಟಗಾರ್ತಿ ಜೂಲನ್ ಗೋಸ್ವಾಮಿ ವಿದಾಯ ಪಂದ್ಯವನ್ನು ಆಡಿದ್ದಾರೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರ ತಂಡ ಭಾರತೀಯ ಆಟಗಾರ್ತಿಗೆ ಗಾರ್ಡ್ ಆಫ್ ಹಾನರ್ ನೀಡುವ ಮೂಲಕ ಗೌರವಿಸಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ನೀರಸ ಪ್ರದರ್ಶನ ನೀಡಿದ್ದು ಸಾಧಾರಣ ಗುರಿಯನ್ನು ಇಂಗ್ಲೆಂಡ್‌ಗೆ ನೀಡಿದೆ. ಈ ಸಂದರ್ಭದಲ್ಲಿ 9ನೇ ಕ್ರಮಾಂಕದಲ್ಲಿ ಜೂಲನ್ ಗೋಸ್ವಾಮಿ ಬ್ಯಾಟಿಂಗ್‌ಗೆ ಇಳಿದರು. ಈ ವೇಳೆ ಇಂಗ್ಲೆಂಡ್ ತಂಡದ ಆಟಗಾರ್ತಿಯರು ಜೂಲನ್ ಗೋಸ್ವಾಮಿಗೆ ಗಾರ್ಡ್ ಆಫ್ ಹಾನರ್ ನೀಡಿದ್ದಾರೆ.

ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ಫೆಡರರ್: ಗೆಳೆಯನನ್ನು ಬೀಳ್ಕೊಟ್ಟ ರಾಫಾಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ಫೆಡರರ್: ಗೆಳೆಯನನ್ನು ಬೀಳ್ಕೊಟ್ಟ ರಾಫಾ

ಈ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡದಿಂದ ನೀರಸವಾಗಿ ಬ್ಯಾಟಿಂಗ್ ಪ್ರದರ್ಶಿಸಿದೆ. ಸ್ಮೃತಿ ಮಂಧಾನ ಹಾಗೂ ದೀಪ್ತಿ ಶರ್ಮಾ ಅರ್ಧ ಶತಕ ಸಿಡಿಸಿ ಮಿಂಚಿದ್ದರು ಕೂಡ ಭಾರತ ತಂಡ 169 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು. ಯುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ವೈಫಲ್ಯ ಈ ಪಂದ್ಯದಲ್ಲಿಯೂ ಮುಂದುವರಿದಿದ್ದು ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು.

ಯಸ್ತಿಕಾ ಭಾಟಿಯಾ ಕೂಡ ಶೂನ್ಯಕ್ಕೆ ಔಟಾದರು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ನಾಯಕಿ ಹರ್ಮನ್‌ಪ್ರೀತ ಕೌರ್ ನಾಲ್ಕು ರನ್‌ಗಳಿಗೆ ಔಟಾದರೆ ಹರ್ಲಿನ್ ಡಿಯೋಲ್ ಕೂಡ ಒಂದಂಕಿಗೆ ಔಟಾದರು. ಆದರೆ ಆರಂಭಿಕ ಆಟಗಾರ್ತಿ ಸ್ಮೃತಿ ಮಧಾನ ಈ ಪಂದ್ಯದಲ್ಲಿ 50 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪ್ತಿ ಶರ್ಮಾ ಅಮೋಘ ಹೋರಾಟ ಪ್ರದರ್ಶಿಸಿ ಅಜೇಯ 68 ರನ್‌ಗಳಿಸಿದರು. ಹೀಗಾಗಿ ಭಾರತ ತಂಡ 169 ರನ್‌ಗಳಿಸಲು ಸಾಧ್ಯವಾಯಿತು.

ಆಡುವ ಬಳಗ ಹೀಗಿದೆ
ಇಂಗ್ಲೆಂಡ್ ಆಡುವ ಬಳಗ: ಟಮ್ಮಿ ಬ್ಯೂಮಾಂಟ್, ಎಮ್ಮಾ ಲ್ಯಾಂಬ್, ಸೋಫಿಯಾ ಡಂಕ್ಲೆ, ಆಲಿಸ್ ಕ್ಯಾಪ್ಸೆ, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ನಾಯಕಿ & ವಿಕೆಟ್ ಕೀಪರ್), ಫ್ರೇಯಾ ಕೆಂಪ್, ಸೋಫಿ ಎಕ್ಲೆಸ್ಟೋನ್, ಷಾರ್ಲೆಟ್ ಡೀನ್, ಕೇಟ್ ಕ್ರಾಸ್, ಫ್ರೇಯಾ ಡೇವಿಸ್
ಬೆಂಚ್: ಲಾರೆನ್ ಬೆಲ್, ಇಸ್ಸಿ ವಾಂಗ್, ಮಾಯಾ ಬೌಚಿಯರ್, ಆಲಿಸ್ ಡೇವಿಡ್ಸನ್ ರಿಚರ್ಡ್ಸ್

ಭಾರತ ಆಡುವ ಬಳಗ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಹರ್ಮನ್‌ಪ್ರೀತ್ ಕೌರ್ (ನಾಯಕಿ), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ದಯಾಲನ್ ಹೇಮಲತಾ, ಜೂಲನ್ ಗೋಸ್ವಾಮಿ, ರೇಣುಕಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್
ಬೆಂಚ್: ಸ್ನೇಹ ರಾಣಾ, ಸಬ್ಬಿನೇನಿ ಮೇಘನಾ, ಮೇಘನಾ ಸಿಂಗ್, ಜೆಮಿಮಾ ರಾಡ್ರಿಗಸ್, ತಾನಿಯಾ ಭಾಟಿಯಾ, ಸಿಮ್ರಾನ್ ಬಹದ್ದೂರ್

Story first published: Saturday, September 24, 2022, 20:49 [IST]
Other articles published on Sep 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X