ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜಿಯೋ ಟಿವಿಯಲ್ಲಿ ಕನ್ನಡದಲ್ಲೂ ಕ್ರಿಕೆಟ್ ಕಾಮೆಂಟರಿ!

By Mahesh
JioTV offers Interactive sports experience, Users can choose Kannada commentary

ಮುಂಬೈ, ಮಾರ್ಚ್ 11: ಭಾರತದ ಜನಪ್ರಿಯ ಲೈವ್ ಟಿವಿ ಆಪ್ ಜಿಯೋ ಟಿವಿ, ಭಾರತದ ಪ್ರಥಮ ಸಂವಾದಿ(interactive) ಕ್ರೀಡಾ ಅನುಭವವನ್ನು ಕ್ರೀಡಾಭಿಮಾನಿಗಳಿಗೆ ನೀಡುತ್ತಿದೆ.

ಮೂರು ದೇಶಗಳ ನಿದಹಾಸ್ ಟ್ರೋಫಿಯನ್ನು ಜಿಯೋಟಿವಿ ನೋಡುತ್ತಿರುವ ತನ್ನ ಗ್ರಾಹಕರಿಗೆ, ಆಟವನ್ನು ನೋಡುತ್ತಿರುವಾಗ ಅದರೊಂದಿಗೆ ಸಂವಹನ ನಡೆಸಬಹುದಾಗಿದೆ- ಇದು ಲೈವ್ ಟಿವಿ ಕ್ಷೇತ್ರದಲ್ಲಿನ ಒಂದು ಕ್ರಾಂತಿಯಾಗಿದೆ.

ಜಿಯೋ ಟಿವಿಯಲ್ಲಿ ಮೂರು ರಾಷ್ಟ್ರಗಳ ಟಿ20 ಸರಣಿ ಪ್ರಸಾರ! ಜಿಯೋ ಟಿವಿಯಲ್ಲಿ ಮೂರು ರಾಷ್ಟ್ರಗಳ ಟಿ20 ಸರಣಿ ಪ್ರಸಾರ!

1. 5 ಭಿನ್ನ ಕ್ಯಾಮರಾ ಆಂಗಲ್‍ಗಳನ್ನು ಆಯ್ದುಕೊಂಡು ತಮ್ಮ ನೋಟದ ಅನುಭವವನ್ನು ಕಸ್ಟಮೈಝ್ ಮಾಡಿಕೊಳ್ಳಬಹುದು

2. ಸ್ಟಂಪ್ ಮೈಕ್ ಮತ್ತು ಸ್ಟೇಡಿಯಂ ಪರಿಸರದ ಆಡಿಯೋ ಅನುಭವ ಹೊಂದಬಹುದು, ಅದು ತಲ್ಲೀನ ಭಾವ ನೀಡುತ್ತದೆ

3. ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಮತ್ತು ಕನ್ನಡ- ಹೀಗೆ ತಮ್ಮ ಆಯ್ಕೆಯ ಭಾಷೆಯ ಕಮೆಂಟರಿಯನ್ನು ಆಯ್ಕೆ ಮಾಡಿಕೊಳ್ಳಬಹುದು

4. ಜಹೀರ್ ಖಾನ್, ಆಶಿಶ್ ನೆಹ್ರಾ ಮತ್ತು ಗೌರವ್ ಕಪೂರ್ ಸಹಿತ ಅಗ್ರಗಣ್ಯ ಕ್ರಿಕೆಟ್ ತಜ್ಞರು ಮತ್ತು ವೀಕ್ಷಕ ವಿವರಣೆಕಾರರ ಮಾತುಗಳನ್ನು ಕೇಳಬಹುದು

5. ಬೇಕಾದಾಗ, ಸಿಂಗಲ್ ಕ್ಲಿಕ್ ಮೂಲಕ ಸ್ಕೋರ್ ಮತ್ತು ಇತರೆ ವಿವರಗಳನ್ನು ನೋಡಬಹುದು

6. ಒಂದು ಬಾಲ್ ಅಥವಾ ಸಿಕ್ಸ್ ನಂತಹ ರೋಚಕ ಕ್ಷಣವನ್ನು ಏನಾದರೂ ತಪ್ಪಿಸಿಕೊಂಡಿದ್ದರೆ, ಕ್ಯಾಚ್ ಅಪ್ (ಹಿಂದಿನ ಕಂಟೆಂಟ್) ಮೂಲಕ ಮತ್ತೆ ನೋಡಬಹುದು

2ನೇ ಟಿ20: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ2ನೇ ಟಿ20: ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ

ಇನ್ನೊಮ್ಮೆ, ಜಿಯೋ ತಂತ್ರಜ್ಞಾನದ ಶಕ್ತಿಯನ್ನು ಗ್ರಾಹಕರ ಕೈಯಲ್ಲಿ ನೀಡುತ್ತಿದೆ, ಅವರಿಗೆ ಯಥಾಸ್ಥಿತಿಗೆ ಸವಾಲೊಡ್ಡಲು ಸಾಧ್ಯವಾಗಿಸಿದೆ. ಇಂದಿನ ತನಕ, ಬ್ರಾಡ್‍ಕ್ಯಾಸ್ಟರ್ ನಿಯಂತ್ರಿತ ವಿಡಿಯೋ, ವೀಕ್ಷಕ ವಿವರಣೆ ಮತ್ತು ಸ್ಕೋರ್ ಬೋರ್ಡಿಂಗ್ ಹೊಂದಿದನ ಸಿಂಗಲ್ ಫೀಡ್ ಅನ್ನು ಹೊಂದಬೇಕಾಗಿತ್ತು. ಡಿಜಿಟಲ್ ಸಂವಾದದ ಈ ನಾವೀನ್ಯತೆಯೊಂದಿಗೆ, ಆಟ ನೋಡುವ ಅನುಭವವೇ ಮರುವ್ಯಾಖ್ಯಾನಗೊಳ್ಳಲಿದೆ.

"ಕ್ರೀಡೆಯಲ್ಲಿ ಸಂವಾದವು ಭಾರತದಲ್ಲಿ ಕ್ರೀಡೆಯ ಆಸ್ವಾದನೆಯ ವಿಧಾನವನ್ನೇ ರೂಪಾಂತರಗೊಳಿಸಲಿದೆ. ಜಿಯೋ ಅತ್ಯುತ್ತಮ ಮತ್ತು ಅತ್ಯಂತ ಪ್ರೀಮಿಯಂ ಕಂಟೆಂಟ್ ಅನ್ನು ಎಕ್ಸ್ ಕ್ಲೂಸಿವ್ ಆಗಿ ಜಿಯೋ ಆಪ್‍ಗಳ ಮೂಲಕ ತನ್ನ ಬಳಕೆದಾರರಿಗೆ ಒದಗಿಸುವುದನ್ನು ಮುಂದುವರಿಸಲಿದೆ.

ಇದರೊಂದಿಗೆ, ನಾವು ಯಥಾಸ್ಥಿತಿಗೆ ಸವಾಲೊಡ್ಡಿದ್ದೇವೆ ಮತ್ತು ತಂತ್ರಜ್ಞಾನದ ನೆರವಿನೊಂದಿಗೆ ಪ್ರಸ್ತುತ ಇರುವ ಗ್ರಾಹಕ ಅನುಭವವನ್ನು ಮರುವ್ಯಾಖ್ಯಾನಿಸಿದ್ದೇವೆ. ಮುಂಬರುವ ದಿನಗಳಲ್ಲಿ ಜಿಯೋ, ಕ್ರೀಡಾ ಕ್ಷೇತ್ರದಲ್ಲಿ, ಎಆರ್, ವಿಆರ್, ತನ್ಮಯದ ವೀಕ್ಷಣೆಯಂತಹ ಅದ್ಭುತ ಗ್ರಾಹಕ ಅನುಭವವನ್ನು ತರಲಿದೆ'' ಎಂದು ಆಕಾಶ್ ಅಂಬಾನಿ, ನಿರ್ದೇಶಕರು, ಜಿಯೋ ಹೇಳಿದರು.

ಈ ಫೀಚರ್ ಅನ್ನು ಪಡೆಯಲು ಜಿಯೋ ಟಿವಿ ಬಳಕೆದಾರರು ಆಪ್ ಅನ್ನು ಸಂಬಂಧಿತ ಆಪ್ ಸ್ಟೋರ್‍ನಲ್ಲಿ ಇತ್ತೀಚಿನ ವರ್ಶನ್‍ಗೆ ಅಪ್ಡೇಟ್ ಮಾಡಬೇಕಾಗುತ್ತದೆ.

ಜಿಯೋಟಿವಿ, ಇತ್ತೀಚೆಗೆ ಪ್ರತಿಷ್ಠಿತ ಗ್ಲೋಬಲ್ ಮೊಬೈಲ್ (ಗ್ಲೋಮೋ) ಪ್ರಶಸ್ತಿ 2018 ಅನ್ನು ಅತ್ಯುತ್ತಮ ಮೊಬೈಲ್ ವಿಡಿಯೋ ಕಂಟೆಂಟ್‍ಗಾಗಿ ಗೆದ್ದುಕೊಂಡಿತ್ತು. ಇದು, ಕೊಲೊಂಬೋದಲ್ಲಿ 2018ರ ಮಾರ್ಚ್ 6 ರಿಂದ 18ರ ತನಕ ನಡೆಯುತ್ತಿರುವ ಶ್ರೀಲಂಕಾ, ಭಾರತ ಮತ್ತು ಬಾಂಗ್ಲಾದೇಶಗಳ ನಡುವಿನ ತ್ರಿಕೋನ ಸರಣಿ ನಿದಹಾಸ್ ಟ್ರೋಫಿ ಟಿ20 ಕ್ರಿಕೆಟ್ ಸರಣಿಯ ಭಾರತದ ಡಿಜಿಟಲ್ ಹಕ್ಕುಗಳನ್ನು ಎಕ್ಸ್ ಕ್ಲೂಸಿವ್ ಆಗಿ ಪಡೆದುಕೊಂಡಿದೆ.

ಜಿಯೋಟಿವಿ ಈ ತ್ರಿಕೋನ ಸರಣಿಯ ಸಮಗ್ರ ಕವರೇಜ್ ಅನ್ನು ಒದಗಿಸುತ್ತಿದ್ದು, ಕೋಟ್ಯಂತರ ಭಾರತೀಯರು ಲೈವ್ ಮತ್ತು ಕ್ಯಾಚ್ ಅಪ್ ಕಂಟೆಂಟ್ ಅನ್ನು ಮೊಬೈಲ್ ಡಿವೈಸ್‍ಗಳಲ್ಲೇ ಹೊಂದಬಹುದಾಗಿದೆ. ಪಂದ್ಯ ಇರುವ ದಿನದಂದು ಸಂಜೆ 6.25ಕ್ಕೆ ಕ್ರೀಡಾಕೂಟದ ಕವರೇಜ್ ಜಿಯೋಟಿವಿಯಲ್ಲಿ ಲಭಿಸಲಿದೆ. ಇದು ಪುನರಾವರ್ತಿತ ಟೆಲಿಕ್ಯಾಸ್ಟ್ ಮತ್ತು ಹೈಲೈಟ್ ಪ್ಯಾಕೇಜ್‍ಗಳನ್ನು ಒಳಗೊಂಡಿರಲಿದೆ.

Story first published: Sunday, March 11, 2018, 16:34 [IST]
Other articles published on Mar 11, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X