ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ಗೆ ಬಲ ನೀಡಿದ ನಾಯಕನ ಆಗಮನ: ತಂಡಕ್ಕೆ ಮರಳಿದ ಜೋ ರೂಟ್

Joe Root’s Return Boosts Up England Ahead Of Second Test Against West Indies

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲನ್ನು ಕಂಡ ಇಂಗ್ಲೆಂಡ್ ತವರಿನಲ್ಲೇ ತೀವ್ರ ಮುಖಭಂಗಕ್ಕೀಡಾಗಿದೆ. ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಒಂದನ್ನು ಕಳೆದುಕೊಂಡರೂ ಕ್ರಿಕೆಟ್ ಜನಕರಿಗೆ ಅದು ಭಾರೀ ಹಿನ್ನೆಡೆ. ಯಾಕೆಂದರೆ ಒಂದು ಪಂದ್ಯವನ್ನು ಗೆದ್ದಿರುವ ವೆಸ್ಟ್ ಇಂಡೀಸ್ ತಂಡ ಸರಣಿಯನ್ನು ತನ್ನ ವಶಕ್ಕೆ ಪಡೆಯುವ ಉತ್ಸಾಹದಲ್ಲಿದೆ.

ಈ ಮಧ್ಯೆ ಮೊದಲ ಪಂದ್ಯದಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದ ನಾಯಕ ಜೋ ರೂಟ್ ಪಂದ್ಯದಿಂದ ಹೊರಗುಳಿದಿದ್ದರು. ಈಗ ಜೋರೂಟ್ ಮತ್ತೆ ತಂಡವನ್ನು ಕೂಡಿಕೊಂಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ.

ಈ ವರ್ಷದ ಅಂತ್ಯಕ್ಕೆ 10ನೇ ಆವೃತ್ತಿಯ ಬಿಗ್‌ ಬ್ಯಾಷ್ ಲೀಗ್ ಆರಂಭಈ ವರ್ಷದ ಅಂತ್ಯಕ್ಕೆ 10ನೇ ಆವೃತ್ತಿಯ ಬಿಗ್‌ ಬ್ಯಾಷ್ ಲೀಗ್ ಆರಂಭ

ಇಂಗ್ಲೆಂಡ್ ಕಳೆದ ಮೂರು ವರ್ಷಗಳಿಂದ ಸರಣಿಯ ಮೊದಲ ಪಂದ್ಯವನ್ನು ಸೋಲುವುದು ಅಭ್ಯಾಸವನ್ನಾಗಿ ಮಾಡಿಕೊಂಡಂತಿದೆ. 2017-18ರ ಆ್ಯಶಸ್ ಸರಣಿಯಿಂದ ಆರಂಭಿಕ ಕಳೆದ ಹತ್ತು ಟೆಸ್ಟ್ ಸರಣಿಯಲ್ಲಿ 8 ಬಾರಿ ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ಸೋಲನ್ನು ಕಂಡಿದೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಮೊದಲ ಪಂದ್ಯವನ್ನು ಇಂಗ್ಲೆಂಡ್ ಕಳೆದುಕೊಂಡಿತ್ತು. ಆದರೆ ಮುಂದಿನ ಮೂರು ಪಂದ್ಯಗಳಲ್ಲಿ ಭರ್ಜರಿಯಾಗಿ ಗೆದ್ದು ಸರಣಿಯನ್ನು 3-1 ಅಂತರದಿಂದ ವಶಪಡಡಿಸಿಕೊಂಡಿತ್ತು.

ನಾಯಕ ಜೋ ರೂಟ್ ಅವರಿಗಾಗಿ ಜೋ ಡೆನ್ಲಿ ಸ್ಥಾನವನ್ನು ಆಡುವ ಬಳಗದಿಂದ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ 76 ರನ್‌ಗಳ ಕೊಡುಗೆಯನ್ನು ನೀಡಿದ್ದ ಜ್ಯಾಕ್ ಕ್ರೆವ್ಲಿ ಅವರನ್ನು ಕೈಬಿಡುವುದು ಕಠಿಣ. ಹೀಗಾಗಿ ಗಮನಾರ್ಹ ಪ್ರದರ್ಶನ ನೀಡಲು ವಿಫಲರಾದ ಡೆನ್ಲಿ ಎರಡನೇ ಪಂದ್ಯದಲ್ಲಿ ಹೊರಗುಳಿಯುವುದು ಬಹುತೇಕ ನಿಶ್ಚಿತ.

ಟೆಸ್ಟ್ ರ‍್ಯಾಂಕಿಂಗ್: ವಿಂಡೀಸ್ ಪರ 20 ವರ್ಷಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ಜೇಸನ್ ಹೋಲ್ಡರ್ಟೆಸ್ಟ್ ರ‍್ಯಾಂಕಿಂಗ್: ವಿಂಡೀಸ್ ಪರ 20 ವರ್ಷಗಳಲ್ಲಿ ಶ್ರೇಷ್ಠ ಸಾಧನೆ ಮಾಡಿದ ಜೇಸನ್ ಹೋಲ್ಡರ್

ನಾಯಕ ಜೋ ರೂಟ್ ಉತ್ತಮವಾಗಿ ಮುನ್ನಡೆಸುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ. ಆದರೆ ಖಂಡಿತವಾಗಿಯೂ ಆತನ ಮೇಲೆ ಒತ್ತಡವಿದೆ ಎಂದು ಇಂಗ್ಲೆಂಡ್ ತಂಡದ ಕೋಚ್ ಕ್ರಿಸ್ ಸಿಲ್ವರ್‌ವುಡ್ ಹೇಳಿಕೆಯನ್ನು ನೀಡಿದ್ದಾರೆ.

Story first published: Thursday, July 16, 2020, 9:49 [IST]
Other articles published on Jul 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X