ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಚಿನ್ ತೆಂಡೂಲ್ಕರ್, ಗವಾಸ್ಕರ್ ದಾಖಲೆ ಮುರಿದ ಜೋ ರೂಟ್: ಕ್ಯಾಲೆಂಡರ್ ಇಯರ್‌ನಲ್ಲಿ ಅತಿ ಹೆಚ್ಚು ರನ್

Joe root

ಇತ್ತೀಚೆಗಷ್ಟೇ ಕ್ಯಾಲೆಂಡರ್ ಇಯರ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ರನ್‌ಗಳಿಸಿದ ಇಂಗ್ಲೆಂಡ್ ಆಟಗಾರನಾಗಿ ಹೊರಹೊಮ್ಮಿದ್ದ ಜೋ ರೂಟ್ ಹೊಸ ದಾಖಲೆ ಸೃಷ್ಟಿಸಿದ್ದು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಮತ್ತು ಲಿಟ್ಲ್‌ ಮಾಸ್ಟರ್ ಸುನಿಲ್ ಗವಾಸ್ಕರ್ ದಾಖಲೆ ಮುರಿದಿದ್ದಾರೆ.

ಶನಿವಾರ ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ರೂಟ್, ಸಚಿನ್ ಮತ್ತು ಗವಾಸ್ಕರ್‌ರ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ರನ್ ದಾಖಲೆಯನ್ನು ಮುರಿದರು.

IPL ಪ್ರಸಾರ ಹಕ್ಕು: ಹರಾಜಿನ ಮೂಲಕ BCCIಗೆ 40,000 ಕೋಟಿ ರೂ. ಆದಾಯ?IPL ಪ್ರಸಾರ ಹಕ್ಕು: ಹರಾಜಿನ ಮೂಲಕ BCCIಗೆ 40,000 ಕೋಟಿ ರೂ. ಆದಾಯ?

ಗವಾಸ್ಕರ್ 1979 ರಲ್ಲಿ 1,555 ರನ್ ಗಳಿಸಿದ್ದರು ಮತ್ತು ಸಚಿನ್ ತೆಂಡೂಲ್ಕರ್ 2010ರ ಕ್ಯಾಲೆಂಡರ್ ವರ್ಷದಲ್ಲಿ 1,562 ರನ್ ಗಳಿಸಿದ್ದರು. ಜೋ ರೂಟ್, ಇಬ್ಬರ ದಾಖಲೆ ಮುರಿದು ಒಂದು ವರ್ಷದಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದ ಐದನೇ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ.

ಇತ್ತೀಚೆಗಷ್ಟೇ ಜೋ ರೂಟ್ ಮಾಜಿ ನಾಯಕ ಮೈಕಲ್ ವಾನ್ ಅವರನ್ನು ಹಿಂದಿಕ್ಕಿದ್ದರು. ವಾನ್ 2002 ರಲ್ಲಿ 61.14 ರ ಬ್ಯಾಟಿಂಗ್ ಸರಾಸರಿಯಲ್ಲಿ 1,481 ರನ್ ಗಳಿಸಿದರು, ಇದರಲ್ಲಿ ಆರು ಶತಕಗಳು ಮತ್ತು ಎರಡು ಅರ್ಧ ಶತಕಗಳು ಸೇರಿವೆ.

ಇದರ ಜೊತೆಗೆ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ, ಅವರು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಮಾಜಿ ಶ್ರೀಲಂಕಾ ನಾಯಕ ಕುಮಾರ ಸಂಗಕ್ಕಾರ ಮತ್ತು ಪ್ರಸ್ತುತ ಆಸ್ಟ್ರೇಲಿಯಾದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರ ಕ್ಯಾಲೆಂಡರ್ ವರ್ಷದ ಅತಿ ಹೆಚ್ಚು ರನ್ ದಾಖಲೆಯನ್ನು ಮುರಿದರು.

ಪಾಕಿಸ್ತಾನದ ಮೊಹಮ್ಮದ್ ಯೂಸುಫ್ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅವರು 2006 ರಲ್ಲಿ 11 ಪಂದ್ಯಗಳಲ್ಲಿ 1,788 ರನ್ ಗಳಿಸಿದ್ದರು. ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ವಿವಿಯನ್ ರಿಚರ್ಡ್ಸ್ 1976 ರಲ್ಲಿ 11 ಪಂದ್ಯಗಳಲ್ಲಿ 1,710 ರನ್ ಗಳಿಸಿದರು. ಯೂಸುಫ್ ಅವರ ದಾಖಲೆಯನ್ನು ಮುರಿಯಲು ಜೋ ರೂಟ್ ಇನ್ನೂ ಮೂರು ಇನ್ನಿಂಗ್ಸ್‌ಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಬೇಕಿದೆ.

ಈ ಹಿಂದೆ 2016 ರಲ್ಲಿ 1477 ರನ್ ಮತ್ತು 2015 ರಲ್ಲಿ 1385 ರನ್ ಗಳಿಸಿದ್ದ ರೂಟ್, ಟೆಸ್ಟ್ ಇತಿಹಾಸದಲ್ಲಿ ಎಲ್ಲಾ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಒಂದು ವರ್ಷದಲ್ಲಿ ದಾಖಲಿಸಿದ ಗರಿಷ್ಠ ರನ್‌ಗಳ ಪಟ್ಟಿಯ ಐದು ಸ್ಥಾನಗಳಲ್ಲಿ ಮೂರು ಸ್ಥಾನ ಇವರೊಬ್ಬರೇ ಪಡೆದಿದ್ದಾರೆ. ವಾನ್ ಅನ್ನು ಮೀರಿದ ನಂತರ ರೂಟ್ ಪ್ರಸ್ತುತ ಎಂಟನೇ ಸ್ಥಾನದಲ್ಲಿ ಕುಳಿತಿದ್ದಾರೆ.

Story first published: Saturday, December 18, 2021, 18:05 [IST]
Other articles published on Dec 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X