ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೋ ರೂಟ್‌ಗೆ ಬೆಳ್ಳಿ ಬ್ಯಾಟ್‌ ಗಿಫ್ಟ್‌ ನೀಡಿದ ECB: ಕಾರಣ ಏನು ಗೊತ್ತಾ?

Joe root

ಭಾರತ-ಇಂಗ್ಲೆಂಡ್ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭಾರೀ ಆಘಾತ ಅನುಭವಿಸಿದೆ. ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಟಾಪ್ ಆರ್ಡರ್‌ ಬ್ಯಾಟರ್‌ಗಳನ್ನ ಕಳೆದುಕೊಂಡಿದ್ದು, 100 ರನ್‌ಗಳೊಳಗೆ 5 ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡಿದೆ.

ಶುಭಮನ್ ಗಿಲ್ 17, ಚೇತೇಶ್ವರ ಪೂಜಾರ 13, ಹನುಮ ವಿಹಾರಿ 20, ವಿರಾಟ್ ಕೊಹ್ಲಿ 11, ಶ್ರೇಯಸ್ ಅಯ್ಯರ್ 15ರನ್‌ಗಳಿಸಿ ಬಹುಬೇಗನೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಊಟದ ವಿರಾಟವನ್ನ ಬೇಗನೆ ಪಡೆಯಲಾಯ್ತು. ಆದ್ರೆ ನಂತರದಲ್ಲಿ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯವು ತಡವಾಗಿ ಪುನರ್ ಆರಂಭಗೊಂಡಿತು.

ಊಟದ ವಿರಾಮದ ಬಳಿಕ ಟೀಂ ಇಂಡಿಯಾ ಮೂರು ವಿಕೆಟ್ ಕಳೆದುಕೊಂಡಿದ್ದು, ಜೇಮ್ಸ್ ಆ್ಯಂಡರ್ಸನ್ 3, ಮ್ಯಾಟಿ ಪಾಟ್ಸ್ 2 ವಿಕೆಟ್ ಪಡೆದಿದ್ದಾರೆ. ರಿಷಭ್ ಪಂತ್ ಮತ್ತು ಜಡೇಜಾ ಕ್ರೀಸ್‌ನಲ್ಲಿದ್ದಾರೆ.

ಪಂದ್ಯಕ್ಕೂ ಮೊದಲು ಬೆಳ್ಳಿ ಬ್ಯಾಟ್ ಪಡೆದ ಜೋ ರೂಟ್

ಇನ್ನು ಈ ಪಂದ್ಯ ಆರಂಭಕ್ಕೂ ಮೊದಲು ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್‌ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ಬೆಳ್ಳಿ ಬ್ಯಾಟ್‌ ಅನ್ನು ಉಡುಗೊರೆಯಾಗಿ ನೀಡಿದೆ. ಇಸಿಬಿ ಹಂಗಾಮಿ ಅಧ್ಯಕ್ಷ ಮತ್ತು ಕ್ರಿಕೆಟ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕ ಮಾರ್ಟಿನ್ ಬಾರ್ಲೋ ರೂಟ್‌ಗೆ ಸಿಲ್ವರ್ ಬ್ಯಾಟ್ ನೀಡಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಹತ್ತು ಸಾವಿರ ಪೂರೈಸಿದ್ದಕ್ಕಾಗಿ ರೂಟ್‌ಗೆ ಈ ಗೌರವವನ್ನು ನೀಡಲಾಯಿತು.

IND vs ENG: ಕಳೆದ ಪ್ರವಾಸದಲ್ಲಿ ಕೋಚ್ ಆಗಿದ್ದ ರವಿಶಾಸ್ತ್ರಿ, ಈಗ ವೀಕ್ಷಕ ವಿವರಣೆಗಾರ!

ಇತ್ತೀಚೆಗಷ್ಟೇ 10,000 ರನ್ ಗಡಿ ದಾಟಿದ ಜೋ ರೂಟ್

ಇತ್ತೀಚೆಗಷ್ಟೇ 10,000 ರನ್ ಗಡಿ ದಾಟಿದ ಜೋ ರೂಟ್

ನ್ಯೂಜಿಲೆಂಡ್ ವಿರುದ್ಧದ ಕಳೆದ ಟೆಸ್ಟ್ ಸರಣಿ ವೇಳೆಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಜೋ ರೂಟ್‌ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಡಿದಾಟಿ ಸಂಭ್ರಮಿಸಿದರು. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಈ ಅದ್ಭುತ ದಾಖಲೆಯನ್ನ ಮಾಡಿದ ರೂಟ್ ಈ ಸಾಧನೆ ಮಾಡಿದ ಇಂಗ್ಲೆಂಡ್‌ ಎರಡನೇ ಬ್ಯಾಟರ್ ಆಗಿ ಹೊರಹೊಮ್ಮಿದರು.

ಇಂಗ್ಲೆಂಡ್ ಪರ ಮಾಜಿ ನಾಯಕ ಅಲೆಸ್ಟರ್ ಕುಕ್ ಬಳಿಕ ಈ ಸಾಧನೆಯನ್ನ ರೂಟ್ ಮಾಡಿದ್ದಾರೆ. ಕಾಕತಾಳೀಯ ಅಂದ್ರೆ ಇಬ್ಬರೂ 31 ವರ್ಷ 157 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಭಾರತ ವರ್ಸಸ್ ಡರ್ಬಿಶೈರ್ ಟಿ20 ಅಭ್ಯಾಸ ಪಂದ್ಯ: ಪಂದ್ಯದ ಪ್ರಿವ್ಯೂ, ಸ್ಕ್ವಾಡ್‌

England ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವಿಶೇಷ ಪ್ರಯೋಗ | *Cricket | OneIndia Kannada
ಭಾರತ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳಿಗೆ ನಾಯಕನಾಗಿದ್ದ ರೂಟ್

ಭಾರತ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳಿಗೆ ನಾಯಕನಾಗಿದ್ದ ರೂಟ್

ಟೀಂ ಇಂಡಿಯಾ ಪರ ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಹೇಗೆ ನಾಯಕರಾಗಿದ್ದರೋ, ಅದೇ ರೀತಿಯಲ್ಲಿ ಇಂಗ್ಲೆಂಡ್ ತಂಡದಲ್ಲೂ ಮೂರು ಮಾದರಿಯ ಕ್ರಿಕೆಟ್‌ ತಂಡದ ನಾಯಕ ಬದಲಾಗಿದ್ದಾರೆ. ಕೊಹ್ಲಿ ಟೀಂ ಇಂಡಿಯಾ ನಾಯಕನಾಗಿದ್ದ ಸರಣಿಯಲ್ಲಿ, ಜೋ ರೂಟ್‌ ಇಂಗ್ಲೆಂಡ್ ತಂಡದ ನಾಯಕನಾಗಿದ್ದರು. ಆದ್ರೀಗ ಇಬ್ಬರು ನಾಯಕರು ಒಂದೇ ಟೆಸ್ಟ್‌ ಸರಣಿ ಮುಕ್ತಾಯಕ್ಕೂ ಮೊದಲೇ ನಾಯಕತ್ವವನ್ನ ಕಳೆದುಕೊಂಡಿದ್ದಾರೆ.

ಜೋ ರೂಟ್ 10,000 ಗಡಿ ದಾಟುವ ಮೊದಲು 13 ಕ್ರಿಕೆಟಿಗರು ಈ ಸಾಧನೆಯನ್ನ ಮಾಡಿದ್ದಾರೆ. ಮೊದಲನೆಯದಾಗಿ, ಈ ಸಾಧನೆಯನ್ನು ಭಾರತದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಸಾಧಿಸಿದ್ದಾರೆ. ಅಲ್ಲಿಂದೀಚೆಗೆ ಅಲನ್ ಬಾರ್ಡರ್, ಸ್ಟೀವ್ ವಾ, ಬ್ರಿಯಾನ್ ಲಾರಾ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಜಾಕ್ವೆಸ್ ಕಾಲಿಸ್, ಮಹೇಲಾ ಜಯವರ್ಧನೆ, ಶಿವನಾರಾಯಣ ಚಂದ್ರಪಾಲ್, ಕುಮಾರ್ ಸಂಗಕ್ಕಾರ, ಅಲಿಸ್ಟೈರ್ ಕುಕ್, ಯೂನಿಸ್ ಖಾನ್ ಮತ್ತು ಈಗ ಜೋ ರೂಟ್ ತಲುಪಿದ್ದಾರೆ.

Story first published: Saturday, July 2, 2022, 10:13 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X