ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಖಾಲಿ ಮೈದಾನದಲ್ಲಿ ಕ್ರಿಕೆಟ್: ಕ್ರಿಕೆಟಿಗರನ್ನು ಹುರಿದುಂಬಿಸಲು ವಿಶೇಷ ಸಲಹೆ ನೀಡಿದ ಆರ್ಚರ್

Jofra Archer Calls For Crowd Noise Through Speakers At Behind-closed-doors Games

ಕೊರೊನ ವೈರಸ್ ಕಾರಣದಿಂದಾಗಿ ಕ್ರಿಕೆಟ್ ಸ್ಥಗಿತಗೊಂಡಿದೆ. ಆದರೆ ಕೊರೊನಾ ವೈರಸ್ ಹಾವಳಿ ಮುಂದಿವರಿಯುತ್ತಲೇ ಇರುವ ಕಾರಣ ಇದನ್ನು ಬಹಳ ಕಾಲ ಕ್ರಿಕೆಟ್ ಇಲ್ಲದೆ ಇರಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಬಿಸಿಸಿಐ, ಕ್ರಿಕೆಟ್ ಆಸ್ಟ್ರೇಲಿಯಾದಂತ ಸಂಸ್ಥೆಗಳೇ ಹಣಕಾಸಿನ ಮುಗ್ಗಟ್ಟಿಗೆ ಒಳಗಾಗಿರುವುದರಿಂದ ಆತಂಕಗೊಂಡಿದೆ.

ಹೀಗಾಗಿ ಮುಚ್ಚಿದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡುವ ಬಗ್ಗೆ ಚಿಂತನೆಗಳು ನಡೆಯುತ್ತಿದೆ. ಆದರೆ ಆಟಗಾರರು ಪ್ರೇಕ್ಷಕರಿಲ್ಲದೆ ಕ್ರಿಕೆಟ್ ಆಡುವ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಇಂಗ್ಲೆಂಡ್ ಯುವ ವೇಗಿ ಜೋಫ್ರಾ ಆರ್ಚರ್ ವಿಶೇಷ ಸಲಹೆಯೊಂದನ್ನು ನೀಡಿದ್ದಾರೆ.

ಭಾರತ ಕೈ ಬಿಟ್ಟರೆ ಟೆಸ್ಟ್ ಕ್ರಿಕೆಟ್ ಸತ್ತುಹೋಗಲಿದೆ: ಗ್ರೇಗ್ ಚಾಪೆಲ್ಭಾರತ ಕೈ ಬಿಟ್ಟರೆ ಟೆಸ್ಟ್ ಕ್ರಿಕೆಟ್ ಸತ್ತುಹೋಗಲಿದೆ: ಗ್ರೇಗ್ ಚಾಪೆಲ್

ಜೋಫ್ರಾ ಆರ್ಚರ್ ನೀಡಿದ ಸಲಹೆಯೇನೆಂದರೆ ಪ್ರೇಕ್ಷಕರ ಇಲ್ಲದಿದ್ದರೂ ಪ್ರೇಕ್ಷಕರ ಶಬ್ಧವನ್ನು ಸ್ಪೀಕರ್ ಮೂಲಕ ಕೇಳಿಸುವುದು. ಈ ಮೂಲಕ ಖಾಲಿ ಮೈದಾನದಲ್ಲಿ ಆಡುವಾಗಿನ ಪರಿಸ್ಥಿತಿಯಲ್ಲಿ ಆಟಗಾರರಿಗೆ ಪೂರಕ ಅನುಭವ ಸಿಗಲಿದೆ ಎಂದಿದ್ದಾರೆ. ಈ ಮೂಲಕ ಆಟಗಾರರನ್ನು ಉತ್ತೇಜಿಸಬಹುದು ಎಂದು ಆರ್ಚರ್ ಹೇಳಿದ್ದಾರೆ.

ಪ್ರೇಕ್ಷಕರ ಗದ್ದಲ ಗಲಾಟೆಯಿಲ್ಲದೆ ಈಗಾಗಲೆ ಪಂದ್ಯಗಳನ್ನು ಆಡಿಸಲಾಗಿದೆ, ಹೀಗಾಗಿ ಇಂತಾ ಸಂದರ್ಭದಲ್ಲಿ ಒಂದಷ್ಟು ಸಂಗೀತ, ಪ್ರೇಕ್ಷಕರ ಶಬ್ಧಗಳು ಅಸ್ವಾಭಾವಿಕವಾಗಿ ಉಂಟುಮಾಡುವುದರಿಂದ ಅಂಗಳದಲ್ಲಿ ಒಂದು ರೀತಿಯ ವಾತಾವರಣವನ್ನು ಸೃಷ್ಟಿಮಾಡಲು ಸಾಧ್ಯವಿದೆ ಎಂದು ಆರ್ಚರ್ ಅಭಿಪ್ರಾಯಪಟ್ಟಿದ್ದಾರೆ.

ಕೀಪಿಂಗ್ ಮಾಡಲು ಕಷ್ಟದ ಬೌಲರ್ ಯಾರೆಂದು ಹೇಳಿದ ಕೆಎಲ್ ರಾಹುಲ್ಕೀಪಿಂಗ್ ಮಾಡಲು ಕಷ್ಟದ ಬೌಲರ್ ಯಾರೆಂದು ಹೇಳಿದ ಕೆಎಲ್ ರಾಹುಲ್

ಬೌಲಿಂಗ್ ಮಾಡುವಾಗ ವಿಕೆಟ್ ಪತನವಾದರೆ ಅಥವಾ ಬ್ಯಾಟ್ಸ್‌ಮನ್ ಬೌಂಡರಿ ಸಿಕ್ಸರ್ ಬಾರಿಸಿದಾಗ ಧ್ವನಿವರ್ಧಕಗಳ ಮೂಲಕ ಚಪ್ಪಾಳೆ ಕರತಾಡಗಳ ಶಬ್ಧಗಳನ್ನು ಬಳಸಿಕೊಳ್ಳಬಹುದು. ಆ ಮೂಲಕ ಸಾಮಾನ್ಯ ಸಂದರ್ಭವಲ್ಲದಿದ್ದರೂ ಈ ಸಣ್ಣ ವಿಷಯಗಳ ಮೂಲಕ ಸಾಮಾನ್ಯವೆನಿಸುವ ರೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು ಎಂದು ಜೋಫ್ರಾ ಆರ್ಚರ್ ಹೇಳಿದ್ದಾರೆ.

Story first published: Wednesday, May 13, 2020, 16:42 [IST]
Other articles published on May 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X