ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ವಿಂಡೀಸ್ ಟೆಸ್ಟ್: 2ನೇ ಪಂದ್ಯಕ್ಕೂ ಮೊದಲೇ ಇಂಗ್ಲೆಂಡ್‌ಗೆ ಆರ್ಚರ್ ಆಘಾತ

Jofra Archer Dropped From Second Test Squad After Breaching Bio-secure Bubble
Oxford Covid Vaccine ಮಾನವ ಪ್ರಯೋಗದ ಪಲಿತಾಂಶ ಇಂದು | Oneindia Kannada

ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್ ದೊಡ್ಡ ಎಡವಟ್ಟೊಂದನ್ನು ಮಾಡಿದ್ದಾರೆ. ಈ ಎಡವಟ್ಟಿನಿಂದಾಗಿ ಜೋಫ್ರಾ ಆರ್ಚರ್ ಮಾತ್ರವಲ್ಲ ಇಡೀ ಇಂಗ್ಲೆಂಡ್ ತಂಡ ಹಾಗೂ ಮ್ಯಾನೇಜ್‌ಮೆಂಟ್ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿತ್ತು. ಆದರೆ ಮಾಡಿದ ತಪ್ಪಿಗೆ ಆರ್ಚರ್ ಎರಡನೇ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ಪಂದ್ಯವನ್ನು ನಡೆಸಲು ಸಾಕಷ್ಟು ಮುನ್ನಚ್ಚರಿಕೆಯನ್ನು ತೆಗೆದುಕೊಳ್ಳಲಾಗುತ್ತಿದೆ. ಅದರಲ್ಲಿ ಪ್ರಮುಖವಾದದ್ದು ಜೈವಿಕ ಸುರಕ್ಷತಾ ವಲಯದಲ್ಲಿ ಪಂದ್ಯವನ್ನು ಏರ್ಪಡಿಸಿರುವುದು. ಹೀಗಾಗಿ ಕಠಿಣ ನಿಯಮಗಳನ್ನು ಮಾಡಲಾಗಿದೆ. ಆದರೆ ಜೋಫ್ರಾ ಆರ್ಚರ್ ಈ ವಲಯವನ್ನು ಬೇಧಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಎರಡನೇ ಟೆಸ್ಟ್‌ ಪಂದ್ಯದಿಂದ ಆರ್ಚರ್ ಹೊರಗುಳಿಯಲಿದ್ದಾರೆ.

ಕೊರೊನಾವೈರಸ್ ಭೀತಿ: ಹೋಮ್ ಕ್ವಾರಂಟೈನ್‌ನಲ್ಲಿ ಸೌರವ್ ಗಂಗೂಲಿಕೊರೊನಾವೈರಸ್ ಭೀತಿ: ಹೋಮ್ ಕ್ವಾರಂಟೈನ್‌ನಲ್ಲಿ ಸೌರವ್ ಗಂಗೂಲಿ

ತಮ್ಮ ತಪ್ಪಿಗೆ ಜೋಫ್ರಾ ಕ್ಷಮಾಪಣೆಯನ್ನೂ ಕೇಳಿದ್ದಾರೆ. "ನಾನು ಮಾಡಿರುವ ತಪ್ಪಿಗೆ ನಾನು ಕ್ಷಮಾಪಣೆಯನ್ನು ಕೇಳುತ್ತಿದ್ದೇನೆ. ನಾನು ನನ್ನನ್ನು ಮಾತ್ರವೇ ಅಪಾಯಕ್ಕೊಡ್ಡಿಲ್ಲ, ಜೊತೆಗೆ ಇಡೀ ತಂಡವನ್ನು ಹಾಗೂ ಮ್ಯಾನೇಜ್‌ಮೆಂಟನ್ನು ಅಪಾಯಕ್ಕೆ ದೂಡಿದ್ದೇನೆ. ಈ ಜೈವಿಕ ಸುರಕ್ಷತಾ ವಲಯದಲ್ಲಿರುವ ಪ್ರತೊಯೊಬ್ಬರಿಂದಗಲೂ ನಾನು ಪ್ರಾಮಾಣಿಕ ಕ್ಷಮೆಕೋರುತ್ತೇನೆ ಎಂದಿದ್ದಾರೆ.

ಎರಡನೇ ಟೆಸ್ಟ್ ಪಂದ್ಯವನ್ನು ಈ ಕಾರಣಕ್ಕೆ ಕಳೆದುಕೊಳ್ಳುತ್ತಿರುವುದಕ್ಕೆ ನಾನು ಬೇಸರವನ್ನು ಹೊಂದಿದ್ದೇನೆ. ನಿರ್ಣಾಯಕ ಸಂದರ್ಭದಲ್ಲಿ ಹೀಗಾಗಿದೆ. ಎರಡೂ ತಂಡಗಳನ್ನು ಕೆಳಕ್ಕೆ ತಳ್ಳಿದಂತೆ ಭಾಸವಾಗುತ್ತಿದೆ. ಮತ್ತೊಮ್ಮೆ ಪ್ರತಿಯೊಬ್ಬರ ಕ್ಷಮೆ ಕೋರುತ್ತೇನೆ ಎಂದು ಆರ್ಚರ್ ಹೇಳಿಕೆಯನ್ನು ನೀಡಿದ್ದಾರೆ.

ಮೊದಲ ಟೆಸ್ಟ್ ಪಂದ್ಯವನ್ನು ವೆಸ್ಟ್ ಇಂಡೀಸ್‌ಗೆ ಒಪ್ಪಿಸಿರುವ ಇಂಗ್ಲೆಂಡ್ ಎರಡನೇ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

Story first published: Thursday, July 16, 2020, 16:59 [IST]
Other articles published on Jul 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X