ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊಯೀನ್ ಅಲಿ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದ ತಸ್ಲಿಮಾ ನಸ್ರೀನ್‌ಗೆ ಆರ್ಚರ್ ತಿರುಗೇಟು

Jofra Archer hits back at Taslima Nasreen after controversial tweet on Moeen Ali

ಗಾಯದ ಕಾರಣದಿಂದಾಗಿ ಐಪಿಎಲ್ 14ನೇ ಆವೃತ್ತಿಯಿಂದ ಮೊದಲಾರ್ಧದ ಪಂದ್ಯಗಳಿಂದ ಹೊರಗುಳಿದಿರುವ ಜೋಫ್ರಾ ಆರ್ಚರ್ ಟ್ವಿಟ್ಟರ್‌ನಲ್ಲಿ ಸುದ್ದಿಯಾಗಿದ್ದಾರೆ. ಸದಾ ಕ್ರಿಕೆಟ್ ವಿಚಾರವಾಗಿ ಟ್ವೀಟ್‌ಗಳನ್ನು ಮಾಡುವ ಆರ್ಚರ್ ಈ ಬಾರಿ ಸೂಕ್ಷ್ಮ ವಿಚಾರಕ್ಕೆ ಕಟು ಶಬ್ದಗಳ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ತನ್ನ ತಂಡದ ಸಹ ಆಟಗಾರನ ಬಗ್ಗೆ ವಿನಾಕಾರಣ ವಿವಾದಾತ್ಮಕ ಟ್ವೀಟ್ ಮಾಡಿದ ಬಾಂಗ್ಲಾ ಲೇಖಕಿಗೆ ಆರ್ಚರ್ ತಿರುಗೇಟು ನೀಡಿದ್ದಾರೆ.

ಬಾಂಗ್ಲಾದೇಶ ಮೂಲದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಟ್ವಿಟ್ಟರ್‌ನಲ್ಲಿ ಇಂಗ್ಲೆಂಡ್ ತಂಡದ ಸ್ಪಿನ್ನರ್ ಮೊಯೀನ್ ಅಲಿ ವಿರುದ್ಧ ಟ್ವೀಟ್ ಮಾಡಿದ್ದರು. ಕ್ರಿಕೆಟ್‌ನಲ್ಲಿ ಅವಕಾಶ ದೊರೆಯದೆ ಇರುತ್ತಿದ್ದರೆ ಮೊಯೀನ್ ಅಲಿ ಸಿರಿಯಾಗೆ ತೆರಳಿ ಐಸಿಸ್ ಸೇರಿಕೊಂಡಿರುತ್ತಿದ್ದರು ಎಂದು ಆಕ್ಷೇಪಾರ್ಹ ಟ್ವೀಟ್ ಮಾಡಿದ್ದರು ತಸ್ಲಿಮಾ ನಸ್ರೀನ್. ಈ ಟ್ವೀಟ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದು ಕ್ರಿಕೆಟ್ ಅಭಿಮಾನಿಗಳು ಇದನ್ನು ತೀವ್ರವಾಗಿ ಖಂಡಿಸಿದ್ದರು.

ಐಪಿಎಲ್ 2021: ಗೇಲ್ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುಳಿವು ನೀಡಿದ ಕೋಚ್ ಜಾಫರ್ಐಪಿಎಲ್ 2021: ಗೇಲ್ ಯಾವ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುಳಿವು ನೀಡಿದ ಕೋಚ್ ಜಾಫರ್

ಈ ವಿವಾದಾತ್ಮಕ ಟ್ವೀಟ್‌ಗೆ ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ಪ್ರತಿಕ್ರಿಯಿಸಿದ್ದಾರೆ. ಕಠಿಣ ಶಬ್ಧಗಳನ್ನು ಬಳಸಿ ಬಾಂಗ್ಲಾದೇಶ ಮೂಲದ ಲೇಖಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಇಂಗ್ಲೆಂಡ್ ಕ್ರಿಕೆಟರ್ ಜೋಫ್ರಾ ಆರ್ಚರ್. "ನೀವು ಸರಿಯಾಗಿದ್ದೀರಾ? ನೀವು ಸರಿಯಾಗಿದ್ದೀರಿ ಎಂದು ನನಗೆ ಅನಿಸುತ್ತಿಲ್ಲ" ಎಂದು ಜೋಫ್ರಾ ಆರ್ಚರ್ ಟ್ವೀಟ್ ಮಾಡಿದ್ದಾರೆ.

ತನ್ನ ಟ್ವೀಟ್ ವಿವಾದದ ರೂಪವನ್ನು ಪಡೆದುಕೊಂಡ ಬಳಿಕವೂ ತಸ್ಲಿಮಾ ನಸ್ರೀನ್ ಅದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. "ಮೊಯೀನ್ ಅಲಿ ಬಗೆಗಿನ ನನ್ನ ಟ್ವೀಟ್ ವ್ಯಂಗ್ಯವಾದದ್ದು ಎಂದು ನನ್ನ ವಿರೋಧಿಗಳಿಗೆ ತಿಳಿದಿದೆ. ಆದರೆ ಅವರು ಅದನ್ನು ತಿರುಚುತ್ತಿದ್ದಾರೆ ಯಾಕೆಂದರೆ ನಾನು ಮುಸ್ಲಿಂ ಸಮಾಜವನ್ನು ಜಾತ್ಯಾತೀತಗೊಳಿಸಲು ಪ್ರಯತ್ನಿಸುತ್ತೇನೆ ಮತ್ತು ನಾನು ಇಸ್ಲಾಮಿಕ್ ಮತಾಂಧತೆಯನ್ನು ವಿರೋಧಿಸುತ್ತೇನೆ. ಮಾನವಕುಲದ ಒಂದು ದೊಡ್ಡ ದುರಂತವೆಂದರೆ ಮಹಿಳಾ ಪರ ಎಡಪಂಥೀಯರು ಮಹಿಳಾ ವಿರೋಧಿ ಇಸ್ಲಾಮಿಸ್ಟ್‌ಗಳನ್ನು ಬೆಂಬಲಿಸುತ್ತಾರೆ" ಎಂದು ಟ್ವಿಟ್‌ ಮಾಡಿದ್ದಾರೆ.

2021ರ ಐಪಿಎಲ್‌ನಲ್ಲಿ ಎಂಎಸ್ ಧೋನಿ ನಿರ್ಮಿಸಲಿರುವ ದಾಖಲೆಗಳ ಸಂಪೂರ್ಣ ಪಟ್ಟಿ2021ರ ಐಪಿಎಲ್‌ನಲ್ಲಿ ಎಂಎಸ್ ಧೋನಿ ನಿರ್ಮಿಸಲಿರುವ ದಾಖಲೆಗಳ ಸಂಪೂರ್ಣ ಪಟ್ಟಿ

ತಸ್ಲಿಮಾ ನಸ್ರೀನ್ ಅವರ ಈ ಎರಡನೇ ಟ್ವೀಟ್‌ಗೂ ಜೋಫ್ರಾ ಆರ್ಚರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. "ವ್ಯಂಗ್ಯವಾದದ್ದಾ? ಯಾರೂ ನಗುತ್ತಿಲ್ಲ, ನೀವು ಕೂಡ, ಕನಿಷ್ಟ ಪಕ್ಷ ನೀವು ಟ್ವೀಟ್‌ಅನ್ನು ಡಿಲೀಟ್ ಮಾಡುವ ಕೆಲಸವನ್ನಾದರೂ ಮಾಡಬಹುದಿತ್ತು" ಎಂದು ತಿರುಗೇಟು ನೀಡಿದ್ದಾರೆ.

Story first published: Tuesday, April 6, 2021, 20:14 [IST]
Other articles published on Apr 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X