ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020ರ ಆವೃತ್ತಿಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಆಡಲ್ಲ!

Jofra Archer ruled of IPL 2020 due to right elbow stress fracture

ಬೆಂಗಳೂರು, ಫೆಬ್ರವರಿ 6: ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್ ಈ ಬಾರಿ ಐಪಿಎಲ್ ಆವೃತ್ತಿಯಲ್ಲಿ ಆಡುತ್ತಿಲ್ಲ. ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಈ ವಿಚಾರವನ್ನು ಗುರುವಾರ (ಫೆಬ್ರವರಿ 6) ಖಾತರಿಪಡಿಸಿದೆ. ಗಾಯಕ್ಕೀಡಾಗಿರುವುದರಿಂದ ಜೋಫ್ರಾ ಆರ್ಚರ್‌ಗೆ 2020ರ ಐಪಿಎಲ್ ಸೀಸನ್‌ನಲ್ಲಿ ಆಡಲಾಗುತ್ತಿಲ್ಲ.

ರಣಜಿ ಕ್ರಿಕೆಟ್: ಮಧ್ಯಪ್ರದೇಶದ ವಿರುದ್ಧ ಮೇಲುಗೈ ಸಾಧಿಸಿದ ಕರ್ನಾಟಕರಣಜಿ ಕ್ರಿಕೆಟ್: ಮಧ್ಯಪ್ರದೇಶದ ವಿರುದ್ಧ ಮೇಲುಗೈ ಸಾಧಿಸಿದ ಕರ್ನಾಟಕ

ಕಳೆದ ಐಪಿಎಲ್ ಸೀಸನ್‌ನಲ್ಲಿ ಆಲ್ ರೌಂಡರ್ ಜೋಫ್ರಾ ಆರ್ಚರ್, ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಇಂಗ್ಲೆಂಡ್‌ ತಂಡದ ಪರ ಆರ್ಚರ್, ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು. ಅದಾಗಿ ಮೊಣಕೈ ಗಾಯಕ್ಕೀಡಾದ ಬಳಿಕ ಆರ್ಚರ್ ಇನ್ನೂ ಚೇತರಿಸಿಕೊಂಡಿಲ್ಲ.

ಭಾರತ ವಿರುದ್ಧ 14 ವರ್ಷಗಳ ಹಿಂದಿನ ದಾಖಲೆ ಮುರಿದ ರಾಸ್ ಟೇಲರ್ಭಾರತ ವಿರುದ್ಧ 14 ವರ್ಷಗಳ ಹಿಂದಿನ ದಾಖಲೆ ಮುರಿದ ರಾಸ್ ಟೇಲರ್

ಆರ್ಚರ್, ಮುಂಬರಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ಜೋಫ್ರಾ ಜಾಗಕ್ಕೆ ಸಕೀಬ್ ಮಹಮೂದ್ ಅವರನ್ನು ಇಂಗ್ಲೆಂಡ್ ತಂಡದಲ್ಲಿ ಹೆಸರಿಸಲಾಗಿದೆ. ಮಾಹಿತಿಯ ಪ್ರಕಾರ ಇನ್ನು ಕನಿಷ್ಠ ಮೂರು ತಿಂಗಳವರೆಗೆ ಜೋಫ್ರಾಗೆ ವಿಶ್ರಾಂತಿಯ ಅಗತ್ಯವಿದೆ ಎನ್ನಲಾಗುತ್ತಿದೆ.

'ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರು ಶ್ರೀಲಂಕಾಕ್ಕೆ ಇಂಗ್ಲೆಂಡ್ ಪ್ರವಾಸ ಸರಣಿ ಮತ್ತು 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊರ ಬಿದ್ದಿದ್ದಾರೆ. ಬಲ ಮೊಣಕೈ ಗಾಯಕ್ಕೀಡಾಗಿದ್ದ ಆರ್ಚರ್ ಸ್ಕ್ಯಾನಿಂಗ್‌ಗಾಗಿ ಯುಕೆಗೆ ಹೋಗಿದ್ದರು. ಅಲ್ಲಿ ಅವರ ಮೊಣಕೈ ಮೂಳೆ ಸಣ್ಣದಾಗಿ ಮುರಿತಕ್ಕೊಳಗಾಗಿರುವುದು ದೃಢಪಟ್ಟಿದೆ,' ಎಂದು ಇಸಿಬಿ ಅಧಿಕೃತ ಹೇಳಿಕೆ ತಿಳಿಸಿದೆ.

Story first published: Thursday, February 6, 2020, 16:50 [IST]
Other articles published on Feb 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X