ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮನೆ ಸದಸ್ಯನಿಗೆ ಅನಾರೋಗ್ಯ: ಅರ್ಚರ್‌ಗೆ ಎರಡನೇ ಬಾರಿ ಕೊರೊನಾ ಪರೀಕ್ಷೆ

Jofra Archer To Undergo Second Covid-19 Test, Delays Joining England Camp

ಇಂಗ್ಲೆಂಡ್‌ನ ಯುವ ವೇಗಿ ಜೋಫ್ರಾ ಆರ್ಚರ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ತರಬೇತಿ ಶಿಬಿರಕ್ಕೆ ಜೂನ್ 25ಕ್ಕೆ ಸೇರಿಕೊಳ್ಳಲಿದ್ದಾರೆ. ಆದರೆ ಅದಕ್ಕೂ ಮುನ್ನ ಅವರಿಗೆ ಎರಡನೇ ಬಾರಿಗೆ ಕೊರೊನಾ ವೈರಸ್ ಪರಿಕ್ಷೆ ನಡೆಯಲಿದೆ. ಅದು ಕೂಡ ನೆಗೆಟಿವ್ ಬಂದರೆ ಮಾತ್ರ ಆರ್ಚರ್ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜೋಫ್ರಾ ಆರ್ಚರ್ ಈಗಾಗಲೇ ಒಂದು ಬಾರಿ ಕೊರೊನಾ ವೈರಸ್ ಪರೀಕ್ಷೆಯನ್ನು ಮಾಡಿಸಿದ್ದು ಅದರಲ್ಲಿ ನೆಗೆಟಿವೆ ಬಂದಿದೆ. ಮನೆಯ ಸದಸ್ಯರೊಬ್ಬರು ಅನಾರೋಗ್ಯದಿಂದ ಪೀಡತರಾಗಿರುವ ಕಾರಣ ಮುನ್ನಚ್ಚರಿಕಾ ಕ್ರಮವಾಗಿ ಮತ್ತೊಂದು ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿದೆ.

ODI ಚೇಸಿಂಗ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ 4 ಬ್ಯಾಟ್ಸ್‌ಮನ್‌ಗಳು: ಭಾರತೀಯರದ್ದೇ ಪಾರಮ್ಯ!ODI ಚೇಸಿಂಗ್‌ನಲ್ಲಿ ಅತಿ ಹೆಚ್ಚು ಶತಕ ದಾಖಲಿಸಿದ 4 ಬ್ಯಾಟ್ಸ್‌ಮನ್‌ಗಳು: ಭಾರತೀಯರದ್ದೇ ಪಾರಮ್ಯ!

ಜೋಫ್ರಾ ಆರ್ಚರ್ ಮನೆಯ ಅನಾರೋಗ್ಯ ಪೀಡಿತ ಸದಸ್ಯನ ಕೊರೊನ ವೈರಸ್ ಪರೀಕ್ಷೆ ಕೂಡ ನಡೆಸಲಾಗಿದ್ದು ಅವರ ವರದಿಯೂ ನೆಗೆಟಿವ್ ಎಂದು ಬಂದಿದೆ. ಆದರೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಮುನ್ನೆಚ್ಚರಿಕೆಯನ್ನು ವಹಿಸಿಕೊಂಡಿದ್ದು ಮತ್ತೊಂದು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ.

ಇಂಗ್ಲೆಂಡ್ ಕ್ರಿಕೆಟ್ ತಂಡದ ಇತರೆ ಸದಸ್ಯರು ಈಗಾಗಲೇ ಸೌಥಾಂಪ್ಟನ್‌ನ ಏಜಿಯಸ್ ಬೌಲ್‌ಗೆ ಮಂಗಳವಾರ ಬಂದಿಳಿದಿದ್ದು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜುಲೈ 8ರಿಂದ ಏಜಿಯಸ್ ಬೌಲ್ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!ಓದುವಾಗ ನಿಮ್ಮನ್ನು ಅಚ್ಚರಿಗೊಳಿಸುವ ಕ್ರಿಕೆಟ್ ಜಗತ್ತಿನ 5 ಸತ್ಯ ಸಂಗತಿಗಳು!

ಕೊರೊನಾ ವೈರಸ್‌ನ ಕಾರಣದಿಂದಾಗಿ ಕಳೆದ ಮಾರ್ಚ್ ತಿಂಗಳಿನಿಂದ ಎಲ್ಲಾ ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಈಗ ಮತ್ತೆ ಕ್ರಿಕೆಟ್ ಆರಂಭಕ್ಕೆ ಸಿದ್ದವಾಗುತ್ತಿದ್ದು ಇದರ ಮೊದಲ ಸರಣಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿದೆ. ಜೈವಿಕ ಸಂರಕ್ಷಣಾ ವಾತಾವರಣದಲ್ಲಿ ಈ ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

Story first published: Wednesday, June 24, 2020, 18:53 [IST]
Other articles published on Jun 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X