ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾರ್ಗನ್-ರೂಟ್ ದಾಖಲೆಯನ್ನು ಸರಿಗಟ್ಟಿದ ಬೈರ್‌ಸ್ಟೋವ್- ಜೇಸನ್ ರಾಯ್ ಜೋಡಿ

Jonny Bairstow, Jason Roy equal Morgan-Root for most century stands for England in ODIs

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯ ಪುಣೆಯಲ್ಲಿ ನಡೆದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 317 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಭಾರತ ನೀಡಿದ ಈ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಅದ್ಭುತವಾದ ಆರಂಭವನ್ನು ಪಡೆಯಿತು.

ಆರಂಭಿಕರಾದ ಜಾನಿ ಬೈರ್‌ಸ್ಟೋವ್ ಹಾಗೂ ಜೇಸನ್ ರಾಯ್ ಜೋಡಿ ಮೊದಲ ವಿಕೆಟ್‌ಗೆ 135 ರನ್‌ಗಳ ಬೃಹತ್ ಜೊತೆಯಾಟವನ್ನು ನೀಡಿದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ 86 ಎಸೆತಗಳಿಗೆ ಈ ಮೊತ್ತವನ್ನು ಪೇರಿಸಲು ಶಕ್ತರಾದರು.

ಭಾರತ vs ಇಂಗ್ಲೆಂಡ್ 1st ODI: ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗೂ ಕೃನಾಲ್ ಪಾಂಡ್ಯ ಪದಾರ್ಪಣೆಭಾರತ vs ಇಂಗ್ಲೆಂಡ್ 1st ODI: ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗೂ ಕೃನಾಲ್ ಪಾಂಡ್ಯ ಪದಾರ್ಪಣೆ

ಈ ಮೂಲಕ ಈ ಜೋಡಿ ಇಂಗ್ಲೆಂಡ್ ತಂಡದ ಪರವಾಗಿ ಈ ಜೋಡಿ 12ನೇ ಬಾರಿಗೆ 100+ ರನ್‌ಗಳ ಜೊತೆಯಾಟವನ್ನು ನೀಡಿದೆ. ಇದು ಇಂಗ್ಲೆಂಡ್ ಪರವಾಗಿ ಯಾವುದೇ ವಿಕೆಟ್‌ಗೆ ಅತಿ ಹೆಚ್ಚು ಶತಕದ ಜೊತೆಯಾಟವನ್ನು ನೀಡಿದ ಪಟ್ಟಿಯಲ್ಲಿ ಜೋ ರೀಟ್ ಹಾಗೂ ಇಯಾನ್ ಮಾರ್ಗನ್ ಸಾಧನೆಯನ್ನು ಸರಿಗಟ್ಟಿದ್ದಾರೆ.

ಇನ್ನು ಆರಂಭಿಕರಾಗಿಯೂ ಈ ಜೋಡಿ ಶತಕದ ಜೊತೆಯಾಟದಲ್ಲಿ ಸಾಧನೆಯನ್ನು ಮಾಡಿದ್ದು ಭಾರತದ ಸಚಿನ್ ತೆಂಡೂಲ್ಕರ್-ವೀರೇಂದ್ರ ಸೆಹ್ವಾಗ್, ಆಸ್ಟ್ರೇಲಿಯಾದ ಆರೋನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಜೊತೆಗೆ ಐದನೇ ಅತಿ ಹೆಚ್ಚು ಶತಕದ ಜೊತೆಯಾಟವನ್ನು ನೀಡಿದ ಆರಂಭಿಕ ಜೋಡಿ ಎಂಬ ಸಾಧನೆ ಮಾಡಿದ್ದಾರೆ.

ಭಾರತದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಈ ಜೋಡಿ ಬೇರ್ಪಟ್ಟ ಬಳಿಕ ಇಂಗ್ಲೆಂಡ್ ತಂಡದ ಕುಸಿತ ಆರಂಭವಾಯಿತು. ಚೊಚ್ಚಲ ಪಂದ್ಯದಲ್ಲಿ ಕಣಕ್ಕಿಳಿದ ಕನ್ನಡಿಗ ಯುವ ವೇಗಿ ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್ ಹಾಗೂ ಭುವನೇಶ್ವರ್ ಕುಮಾರ್ ದಾಳಿಗೆ ಇಂಗ್ಲೆಂಡ್ ನಿರುತ್ತರವಾಗಿ ಶರಣಾಗಿದೆ

Story first published: Tuesday, March 23, 2021, 21:42 [IST]
Other articles published on Mar 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X