ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಈ ಆಟಗಾರ ಎಲ್ಲಾ ಕ್ರಮಾಂಕಕ್ಕೂ ಸಲ್ಲುವ ಕ್ರಿಕೆಟಿಗ ಎಂದ ಜಾಂಟಿ ರೋಡ್ಸ್

Jonty Rhodes praises Deepak Hooda said he can contribute anywhere in Indian batting line up in T20 World Cup

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಟೀಮ್ ಇಂಡಿಯಾದ ಮೂವರು ಯುವ ಆಟಗಾರರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಯುವ ಆಟಗಾರರಾದ ದೀಪಕ್ ಹೂಡಾ, ರವಿ ಬಿಷ್ಣೋಯ್ ಮತ್ತು ಅರ್ಷದೀಪ್ ಸಿಂಗ್ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿರುವ ಜಾಂಟಿ ರೋಡ್ಸ್ ದೀಪಕ್ ಹೂಡಾ ಬಗ್ಗೆ ಭಾರೀ ಭರವಸೆ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್‌ನ ತಂಡಕ್ಕೆ ಆಯ್ಕೆಯಾಗಿರುವ ದೀಪಕ್ ಹೂಡಾ ಯಾವಿದೇ ಕ್ರಮಾಂಕದಲ್ಲಿಯೂ ಆಡುವ ಸಾಮರ್ಥ್ಯವಿರುವ ಆಟಗಾರ ಎಂದಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವ ಭಾರತದ 15 ಸದಸ್ಯರ ಪಡೆಯನ್ನು ಸೋಮವಾರ ಘೋಷಿಸಲಾಗಿದೆ. 2022ರ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ದೀಪಕ್ ಹೂಡಾ ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬರೋಡಾದ ಬಲಗೈ ಬ್ಯಾಟರ್ ಟಿ20ಐ ಮಾದರಿಯಲ್ಲಿ ಶತಕ ಸಿಡಿಸಿದ ಭಾರತದ ಐದನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ.

ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾಟಿ20 ವಿಶ್ವಕಪ್ ಭಾರತ ತಂಡದಲ್ಲಿ ಈತನನ್ನು ಪರಿಗಣಿಸಬೇಕಿತ್ತು, ಅನ್ಯಾಯವಾಗಿದೆ; ದಾನೀಶ್ ಕನೇರಿಯಾ

ದೀಪಕ್ ಹೂಡಾ ಬ್ಯಾಟಿಂಗ್ ನೋಡಲು ಸೊಗಸು

ದೀಪಕ್ ಹೂಡಾ ಬ್ಯಾಟಿಂಗ್ ನೋಡಲು ಸೊಗಸು

ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನಲ್ಲಿ ದಕ್ಷಿಣ ಆಫ್ರಿಕಾ ಲೆಜೆಂಡ್ಸ್ ತಂಡವನ್ನು ಮುನ್ನಡೆಸುತ್ತಿರುವ ಜಾಂಟಿ ರೋಡ್ಸ್ ಮೈಖೇಲ್ ಜೊತೆಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾದ ಯುವ ಆಟಗಾರರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಯುವ ಆಟಗಾರ ದೀಪಕ್ ಹೂಡಾ ಬಗ್ಗೆ ಮಾತನಾಡಿದ ಜಾಂಟಿ ರೋಡ್ಸ್, "ದೀಪಕ್ ಹೂಡಾ ಬ್ಯಾಟಿಂಗ್ ಎಂದರೆ ನನಗೆ ಬಹಳ ಇಷ್ಟ. ಆತನ ಬ್ಯಾಟಿಂಗ್ ನೋಡುವುದು ಬಹಳ ಸೊಗಸು. ಆತ ಯಾವುದೇ ಕ್ರಮಾಂಕದಲ್ಲಿಯೂ ಆಡುವ ಸಾಮರ್ಥ್ಯವಿರುವ ಆಟಗಾರ ಎಂದಿದ್ದಾರೆ. ಭಾರತದ ಸಾಕಷ್ಟು ಯುವ ಪ್ರತಿಭೆಗಳನ್ನು ಹೊಂದಿದ್ದು ಇಂಥಾ ಪ್ರತಿಭಾವಂತರನ್ನು ಹೊಂದಿರುವುದು ನಿಜಕ್ಕೂ ಅದ್ಭುತ ಸಂಗತಿ ಎಂದಿದ್ದಾರೆ.

ರವಿ ಬಿಷ್ಣೋಯ್ ಭರವಸೆಯ ಆಟಗಾರ

ರವಿ ಬಿಷ್ಣೋಯ್ ಭರವಸೆಯ ಆಟಗಾರ

ಇನ್ನು ಯುವ ಆಟಗಾರ ರವಿ ಬಿಷ್ಣೋಯ್ ಬಗ್ಗೆಯೂ ಜಾಂಟಿ ರೋಡ್ಸ್ ಹೊಗಳಿಕೆಯ ಮಾತನಾಡಿದ್ದಾರೆ. "ನನ್ನ ಪ್ರಕಾರ ರವಿ ಬಿಷ್ಣೋಯ್ ಭಾರತದ ಭರವಸೆಯ ಆಟಗಾರ. ಲೆಗ್ ಸ್ಪಿನ್‌ನ ಕೌಶಲ್ಯದಲ್ಲಿ ಬದಲಾವಣೆಯಾಗಿದ್ದು ಈ ಹಿನ್ನೆಲೆಯಲ್ಲಿ ಭವಿಷ್ಯಕ್ಕೆ ರವಿ ಬಿಷ್ಣೋಯ್ ದೊಡ್ಡ ಅಸ್ತ್ರವಾಗಲಿದ್ದಾರೆ" ಎಂದಿದ್ದಾರೆ ಜಾಂಟಿ ರೋಡ್ಸ್. ಏಷ್ಯಾ ಕಪ್‌ನಲ್ಲಿ ರವಿ ಬಿಷ್ಣೋಯ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಆಸ್ಟ್ರೇಲಿಯಾದಲ್ಲಿ ನಡೆಯುವ ವಿಶ್ವಕಪ್‌ಗೆ ಆಯ್ಕೆ ಮಾಡಿರುವ ಪ್ರಾಥಮಿಕ ತಂಡದಲ್ಲಿ ಬಿಷ್ಣೋಯ್ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಆದರೆ ಮೀಸಲು ಆಟಗಾರನಾಗಿ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದ್ದಾರೆ.

ನಾಲ್ಕು ಸ್ಪೆಶಲಿಸ್ಟ್ ಬೌಲರ್‌ಗಳೊಂದಿಗೆ ಕಣಕ್ಕೆ

ನಾಲ್ಕು ಸ್ಪೆಶಲಿಸ್ಟ್ ಬೌಲರ್‌ಗಳೊಂದಿಗೆ ಕಣಕ್ಕೆ

ಈ ಬಾರಿಯ ವಿಶ್ವಕಪ್‌ಗೆ ಭಾರತ ತಂಡ ನಾಲ್ವರು ಸ್ಪೆಶಲಿಸ್ಟ್ ವೇಗಿಗಳೊಂದಿಗೆ ಕಣಕ್ಕಿಳಿಯುತ್ತಿದೆ. ಯುವ ವೇಗಿ ಅರ್ಷ್‌ದೀಪ್‌ಗೆ ಈ ತಂಡದಲ್ಲಿ ಅವಕಾಶ ದೊರೆತಿದ್ದು ಆವೇಶ್ ಖಾನ್ ಹೊರಗುಳಿದಿದ್ದಾರೆ. ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಕಮ್‌ಬ್ಯಾಕ್ ಮಾಡಿದ್ದು ಅನುಭವಿ ಮೊಹಮ್ಮದ್ ಶಮಿ, ಶ್ರೇಯಸ್ ಐಯ್ಯರ್, ರವಿ ಬಿಷ್ಣೋಯ್ ಹಾಗೂ ದೀಪಕ್ ಚಾಹರ್ ಮೀಸಲು ಆಟಗಾರರಾಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ.

ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡ

ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್
ಸ್ಟ್ಯಾಂಡ್‌ಬೈ ಆಟಗಾರರು: ಮೊಹಮ್ಮದ್. ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್

Story first published: Tuesday, September 13, 2022, 21:51 [IST]
Other articles published on Sep 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X