ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ-ಧೋನಿ ನಾಯಕತ್ವದ ನಡುವಿನ ವ್ಯತ್ಯಾಸ ಬಿಚ್ಚಿಟ್ಟ ಜಾಂಟಿ ರೋಡ್ಸ್

ವಿರಾಟ್ ಕೊಹ್ಲಿ ಹಾಗು ಎಂಎಸ್ ಧೋನಿ ನಡುವಿನ ನಾಯಕತ್ವದ ವ್ಯತ್ಯಾಸ ಬಿಚ್ಚಿಟ್ಟ ಜಾಂಟಿ ರೋಡ್ಸ್ | Oneindia Kannada
Jonty Rhodes reveals difference between captaincy styles of Dhoni and Kohli

ನವದೆಹಲಿ, ಮೇ 16: ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರು ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಈಗಿನ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ನಡುವಿನ ವ್ಯತ್ಯಾಸವನನ್ನು ಹೇಳಿಕೊಂಡಿದ್ದಾರೆ. ಆಟದಲ್ಲಿ ಬರುವ ಮಾನಸಿಕ ವಿಚಾರದ ಎಲ್ಲಾ ಅಂಶಗಳಲ್ಲೂ ಧೋನಿ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ ಎಂದು ರೋಡ್ಸ್ ಅಭಿಪ್ರಾಯಪಟ್ಟಿದ್ದಾರೆ.

ಸ್ಟೀವ್ ಬಕ್ನರ್ ಚಿತ್ರದೊಂದಿಗೆ ಸಚಿನ್ ತೆಂಡೂಲ್ಕರ್ ಟ್ರೋಲ್ ಮಾಡಿದ ಐಸಿಸಿಸ್ಟೀವ್ ಬಕ್ನರ್ ಚಿತ್ರದೊಂದಿಗೆ ಸಚಿನ್ ತೆಂಡೂಲ್ಕರ್ ಟ್ರೋಲ್ ಮಾಡಿದ ಐಸಿಸಿ

ಧೋನಿ ಮತ್ತು ಕೊಹ್ಲಿ ನಡುವಿನ ಭಿನ್ನ ನಾಯಕತ್ವದ ಬಗ್ಗೆ ವಿವರಿಸುತ್ತ ಜಾಂಟಿ ರೋಡ್ಸ್, 'ಫಿಟ್ನೆಸ್ ಕಾಯ್ದಿರಿಸುಕೊಳ್ಳುವಿಕೆ ಮತ್ತು ಆಟದಲ್ಲಿನ ಮಾನಸಿಕ ವಿಚಾರಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕೆ ಧೋನಿ ಉತ್ತಮ ಉದಾಹರಣೆಯಾಗಿ ಕಾಣಿಸುತ್ತಾರೆ' ಎಂದಿದ್ದಾರೆ.

ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬಗ್ಗೆ ಸೆಹ್ವಾಗ್‌ ಏನಂತ್ತಾರೆ?!ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಬಗ್ಗೆ ಸೆಹ್ವಾಗ್‌ ಏನಂತ್ತಾರೆ?!

'ಅದೇ ವಿರಾಟ್ ಕೊಹ್ಲಿ ನಾಯಕತ್ವದ ವಿಚಾರಕ್ಕೆ ಬಂದರೆ, ಕೊಹ್ಲಿ ಗೆಲುವಿನ ಹೊರೆಯನ್ನು ತನ್ನ ಕುತ್ತಿಗೆಗೆ ತೆಗೆದುಕೊಳ್ಳುತ್ತಾರೆ. ಆತ ಆಟದಲ್ಲಿ ತಾನು ಪ್ರಭಾವ ಬೀರುವುದನ್ನು ಬಯಸುತ್ತಾರೆ' ಎಂದು ಇಂಡಿಯಾ ಟುಡೇ ಜೊತೆ ಮಾತನಾಡುತ್ತ ಜಾಂಟಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ವಿರಾಟ್ ಕೊಹ್ಲಿ ಅವರು ಎಂಎಸ್ ಧೋನಿಯನ್ನು ಶ್ಲಾಘಿಸಿದ್ದರು. ತಂಡದಲ್ಲಿ ದೋನಿ ಉಪಸ್ಥಿತಿ ಅನಿವಾರ್ಯ ಎಂಬಂತೆ ಮಾತನಾಡಿದ್ದರು. ಇತ್ತ ಧೋನಿಯೂ 2004ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದಲೂ ತಂಡದಲ್ಲಿ ಪ್ರಭಾವಶಾಲಿ ಆಟಗಾರ ಸಾಲಿನಲ್ಲೇ ಉಳಿದುಕೊಂಡಿದ್ದಾರೆ.

ವಿಶ್ವಕಪ್ ಫ್ಲ್ಯಾಷ್‌ಬ್ಯಾಕ್: ಭಾರತ ವಿಶ್ವಕಪ್ ತಂಡ ಮುನ್ನಡೆಸಿದ ನಾಯಕರುವಿಶ್ವಕಪ್ ಫ್ಲ್ಯಾಷ್‌ಬ್ಯಾಕ್: ಭಾರತ ವಿಶ್ವಕಪ್ ತಂಡ ಮುನ್ನಡೆಸಿದ ನಾಯಕರು

ಧೋನಿ ಉತ್ತಮ ನಾಯಕತ್ವಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಕಾರಣವಾಗಿದ್ದು ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು 50 ಓವರ್‌ಗಳ ವಿಶ್ವಕಪ್‌ನಲ್ಲಿ ಭಾರತ ತಂಡದ ಅಭೂತಪೂರ್ವ ಸಾಧನೆ. ಈ ಪ್ರತಿಷ್ಠಿತ ಟೂರ್ನಿಗಳಲ್ಲಿ ತಂಡ ಮುನ್ನಡೆಸಿದ್ದ ಧೋನಿ ಪಂದ್ಯದ ವೇಳೆಯ ಚಿರುಕು ಚಿಂತಕನಾಗಿ ಗುರುತಿಸಿಕೊಂಡಿದ್ದರು.

Story first published: Thursday, May 16, 2019, 11:04 [IST]
Other articles published on May 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X