ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜೋಸ್ ಬಟ್ಲರ್, ಕ್ರಿಕೆಟ್ ಜಗತ್ತಿನ ಹೊಸ ಧೋನಿ ಎಂದ ಆಸ್ಟ್ರೇಲಿಯಾ ಕೋಚ್

Jos Butler New MS Dhoni of world cricket Australia justin langer

ಲಂಡನ್, ಜೂನ್ 24: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅದ್ಭುತ ಫಿನಿಶರ್ ಎಂದೇ ಖ್ಯಾತರಾದವರು. ಆದರೆ, ಇತ್ತೀಚಿನ ದಿನಗಳಲ್ಲಿ ಧೋನಿ ತಮ್ಮ ಹಳೆಯ ಸಾಮರ್ಥ್ಯ ಕಳೆದುಕೊಂಡಂತೆ ಕಾಣಿಸುತ್ತಿದೆ. ಅವರ ಆಟದಲ್ಲಿ ಹಿಂದಿನ ಮೊನಚು ಕಾಣಿಸುತ್ತಿಲ್ಲ. ಇನ್ನು ಪಂದ್ಯವನ್ನು ತಮ್ಮ 'ಸ್ಟೈಲ್'ನಂತೆ ಫಿನಿಶ್ ಮಾಡುವ ಶಕ್ತಿಯೂ ಅವರಲ್ಲಿ ಹಿಂದಿನಂತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಈಗ ಅವರಂತೆ ಆಡುತ್ತಿರುವ ಆಟಗಾರರನ್ನು ಧೋನಿ ಅವರಿಗೆ ಹೋಲಿಸುವ ಪರಿಪಾಠ ಆರಂಭವಾಗಿದೆ. ಆಸ್ಟ್ರೇಲಿಯಾದ ಮಾಜಿ ಎಡಗೈ ಬ್ಯಾಟ್ಸ್‌ಮನ್‌, ಹಾಲಿ ಕೋಚ್ ಜಸ್ಟಿನ್ ಲ್ಯಾಂಗರ್ ಅವರಿಗೆ ಇಂಗ್ಲೆಂಡ್‌ನ ಸಿಡಿಲಬ್ಬರದ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರಲ್ಲಿ ಧೋನಿ ಕಾಣಿಸಿದ್ದಾರೆ.

ಹ್ಯಾಟ್ರಿಕ್ ಪಡೆಯಲು ಧೋನಿ ಕೊಟ್ಟ ಸಲಹೆ ಕಾರಣವಾಯ್ತು : ಶಮಿಹ್ಯಾಟ್ರಿಕ್ ಪಡೆಯಲು ಧೋನಿ ಕೊಟ್ಟ ಸಲಹೆ ಕಾರಣವಾಯ್ತು : ಶಮಿ

ಜೋಸ್ ಬಟ್ಲರ್ ಅವರೊಬ್ಬ ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದು, ಕ್ರಿಕೆಟ್ ಜಗತ್ತಿನ ಹೊಸ ಧೋನಿ ಎಂದು ಲ್ಯಾಂಗರ್ ಬಣ್ಣಿಸಿದ್ದಾರೆ. ಆದರೆ, ಮಂಗಳವಾರ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಮಾತ್ರ ಅವರು ಶೂನ್ಯಕ್ಕೆ ಔಟ್ ಆಗಬೇಕೆಂದು ಬಯಸಿದ್ದಾರೆ.

Jos Butler New MS Dhoni of world cricket Australia justin langer

'ಜೋಸ್ ಒಬ್ಬ ನಂಬಲಸಾಧ್ಯವಾದ ಆಟಗಾರ. ಅವರು ಬ್ಯಾಟಿಂಗ್ ಮಾಡುವುದನ್ನು ನೋಡುವುದನ್ನು ಇಷ್ಟಪಡುತ್ತೇನೆ. ಅವರು ಕ್ರಿಕೆಟ್ ಜಗತ್ತಿನ ಹೊಸ ಧೋನಿ' ಎಂದು ಲ್ಯಾಂಗರ್ ಹೇಳಿದ್ದಾರೆ.

'ಮಂಗಳವಾರ ನಡೆಯುವ ಪಂದ್ಯದಲ್ಲಿ ಖಂಡಿತವಾಗಿಯೂ ಅವರು ಡಕ್ ಔಟ್ ಆಗುತ್ತಾರೆ ಎಂಬ ಭರವಸೆ ಇದೆ. ಆದರೆ, ನಾನು ಅವರನ್ನು ಸಮರ್‌ಸೆಟ್‌ನಲ್ಲಿ ನೋಡಿದ್ದೆ. ಅವರ ಅಮೋಘ ಅಥ್ಲೀಟ್ ಮತ್ತು ನಂಬಲಸಾಧ್ಯವಾದ ಫಿನಿಶರ್' ಎಂದು ಶ್ಲಾಘಿಸಿದ್ದಾರೆ.

ವಿಶ್ವಕಪ್ 2019: ಭಾರತ ಪರ ಇತಿಹಾಸ ನಿರ್ಮಿಸಿದ ವೇಗಿ ಮೊಹಮ್ಮದ್ ಶಮಿ!ವಿಶ್ವಕಪ್ 2019: ಭಾರತ ಪರ ಇತಿಹಾಸ ನಿರ್ಮಿಸಿದ ವೇಗಿ ಮೊಹಮ್ಮದ್ ಶಮಿ!

'ಇಂಗ್ಲೆಂಡ್ ಬಹಳ ಬಲವಾದ ಬ್ಯಾಟಿಂಗ್ ವಿಭಾಗ ಹೊಂದಿದೆ. ಅದಕ್ಕೆ ಅನುಗುಣವಾಗಿ ನಾವು ಸರಿಯಾಗಿ ಆಡಬೇಕಿದೆ' ಎಂದು ಹೇಳಿದ್ದಾರೆ.

ಶಮಿ ಮೂಲಕ ಜನರಿಗೆ ನಾನು ಯಾರೆಂದು ಗೊತ್ತಾಗ್ತಿದೆ: ಚೇತನ್ ಶರ್ಮಾಶಮಿ ಮೂಲಕ ಜನರಿಗೆ ನಾನು ಯಾರೆಂದು ಗೊತ್ತಾಗ್ತಿದೆ: ಚೇತನ್ ಶರ್ಮಾ

ಶ್ರೀಲಂಕಾದ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದರೂ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಅತ್ಯಂತ ಕಠಿಣವಾದ ತಂಡ ಎಂದಿದ್ದಾರೆ. 'ಮಂಗಳವಾರಕ್ಕಾಗಿ ನನಗೆ ಕಾಯಲು ಆಗುತ್ತಿಲ್ಲ. ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ವಿಶ್ವಕಪ್. ನಾವು ಇದರ ಕುರಿತೇ ಆಲೋಚಿಸುತ್ತಿದ್ದೆವು' ಎಂದು ಹೇಳಿದ್ದಾರೆ.

Story first published: Monday, June 24, 2019, 17:49 [IST]
Other articles published on Jun 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X