ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಪಂದ್ಯ: ಬಟ್ಲರ್ ಸ್ಫೋಟಕ ಶತಕ, ವಿಶ್ವಕಪ್‌ಗೆ ಇಂಗ್ಲೆಂಡ್ ಫುಲ್‌ಫಿಟ್?!

Jos Buttler’s daddy hundred sets up dramatic win over Pakistan

ಸೌತಾಂಪ್ಟನ್, ಮೇ 12: ಕೇವಲ 50 ಎಸೆತಗಳಿಗೆ ಶತಕ ಚಚ್ಚಿದ ಜೋಸ್ ಬಟ್ಲರ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸೌತಾಂಪ್ಟನ್ ನಲ್ಲಿ ಶನಿವಾರ (ಮೇ 11) ನಡೆದ 2ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ರೋಚಕ ಗೆಲುವನ್ನಾಚರಿಸಿದೆ. ಈ ಗೆಲುವಿನೊಂದಿಗೆ ಆತಿಥೇಯ ಇಂಗ್ಲೆಂಡ್ 5 ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. ಜೊತೆಗೆ ಮುಂಬರಲಿರುವ ವಿಶ್ವಕಪ್‌ ಟೂರ್ನಿಗೆ ತಂಡ ಸಾಕಷ್ಟು ಬಲಿಷ್ಟಗೊಂಡಿರುವುದನ್ನು ಸಾರಿ ಹೇಳಿದೆ.

ಐಪಿಎಲ್ ಫೈನಲ್‌: ಚೆನ್ನೈ vs ಮುಂಬೈ, ಕುತೂಹಲಕಾರಿ ಅಂಕಿ-ಅಂಶಗಳು!ಐಪಿಎಲ್ ಫೈನಲ್‌: ಚೆನ್ನೈ vs ಮುಂಬೈ, ಕುತೂಹಲಕಾರಿ ಅಂಕಿ-ಅಂಶಗಳು!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ಗೆ ಆರಂಭಿಕ ಆಟಗಾರರಾದ ಜೇಸನ್ ರಾಯ್ 87, ಜಾನಿ ಬೇರ್ಸ್ಟೋವ್ 51 ರನ್ ಸೇರಿಸಿ ಬಲ ತುಂಬಿದರು. ಇನ್ನು ಜೋ ರೂಟ್ 40, ನಾಯಕ ಇಯಾನ್ ಮಾರ್ಗನ್ ಅಜೇಯ 71, ಜಾಸ್ ಬಟ್ಲರ್ ಅಜೇಯ 110 ರನ್ ಬಾರಿಸಿದ್ದರಿಂದ ತಂಡ 50 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ ಭರ್ಜರಿ 373 ರನ್ ಕಲೆ ಹಾಕಿತು.

ಗುರಿ ಬೆನ್ನತ್ತಿದ ಪಾಕಿಸ್ತಾನ ಕೂಡ ಉತ್ತಮ ಆಟ ಪ್ರದರ್ಶಿಸಿತು. ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ 35, ಫಕರ್ ಝಮಾನ್ ಸ್ಫೋಟಕ 138 ರನ್ (106 ಎಸೆತ) ಬಾರಿಸಿದ್ದರಿಂದ ಇಂಗ್ಲೆಂಡ್ ಸೋಲಿನ ಭೀತಿ ಅನುಭವಿಸಿತು. ಆದರೆ ಗೆಲುವಿನಂಚಿನಲ್ಲಿ ಪಾಕಿಸ್ತಾನ ಎಡವಿತು.

ವಿಶ್ವಕಪ್ ಫ್ಲ್ಯಾಷ್‌ಬ್ಯಾಕ್: ಇಂಗ್ಲೆಂಡ್-ಪಾಕಿಸ್ಥಾನ ರೋಚಕ ಕದನಗಳುವಿಶ್ವಕಪ್ ಫ್ಲ್ಯಾಷ್‌ಬ್ಯಾಕ್: ಇಂಗ್ಲೆಂಡ್-ಪಾಕಿಸ್ಥಾನ ರೋಚಕ ಕದನಗಳು

ಬಾಬರ್ ಅಝಾಮ್ 51, ಆಸಿಫ್ ಅಲಿ 51, ಹ್ಯಾರಿಸ್ ಸೊಹೇಲ್ 14, ನಾಯಕ ಸರ್ಫರಾಜ್ ಅಹ್ಮದ್ ಅಜೇಯ 41 ರನ್ ಕೊಡುಗೆಯೊಂದಿಗೆ ಪಾಕ್ 50 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 361 ರನ್ ಪೇರಿಸಲಷ್ಟೇ ಶಕ್ತವಾಯ್ತು. ಪಾಕಿಸ್ತಾನ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಡೇವಿಡ್ ವಿಲ್ಲೆ ಮತ್ತು ಲಿಯಾಮ್ ಪ್ಲಂಕೆಟ್ ತಲಾ 2 ವಿಕೆಟ್‌ಗಳೊಂದಿಗೆ ಬೌಲಿಂಗ್‌ನಲ್ಲಿ ಪಾರಮ್ಯ ಮೆರೆದರು.

Story first published: Sunday, May 12, 2019, 15:58 [IST]
Other articles published on May 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X