ಭಾರತ-ಆಸ್ಟ್ರೇಲಿಯಾ ಸಮ್ಮಿಶ್ರ ಟೆಸ್ಟ್ ತಂಡವನ್ನು ಹೆಸರಿಸಿದ ಆಸ್ಟ್ರೇಲಿಯಾ ವೇಗಿ

ಆಸ್ಟ್ರೇಲಿಯಾ ವಿರುದ್ಧ ಭಾರತದ ಟೆಸ್ಟ್ ಸರಣಿಗೆ ಇನ್ನೂ 5 ತಿಂಗಳು ಬಾಕಿಯಿದೆ. ಆದರೆ ಅದಾಗಲೇ ಈ ಟೆಸ್ಟ್ ಸರಣಿ ಸಾಕಷ್ಟು ಕುತೂಹಲ ಹಾಗೂ ಕಾತುರಕ್ಕೆ ಕಾರಣವಾಗಿದೆ. ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟ್ ಆಟಗಾರರು ಕೂಡ ಈ ಸರಣಿಗೆ ಉತ್ಸಾಹದಿಂದ ಎದುರು ನೋಡುತ್ತಿದ್ದಾರೆ.

ಕಳೆದ ಮಾರ್ಚ್‌ನಿಂದ ಯಾವುದೇ ಸರಣಿಯಲ್ಲಿ ಪಾಲ್ಗೊಳ್ಳದ ಭಾರತ ತಂಡಕ್ಕೂ ಈ ಸರಣಿಯೇ ಕೊರೊನಾ ವೈರಸ್‌ ಆರ್ಭಟದ ಬಳಿಕದ ಮೊದಲ ಸರಣಿಯಾಗುವ ಸಾಧ್ಯತೆ ಮತ್ತಷ್ಟು ವಿಶೇಷತೆಯನ್ನು ಮೂಡಿಸಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ವೇಗದ ಬೌಲಿಂಗ್ ದಾಳಿಯಲ್ಲಿ ಮುಖ್ಯ ಪಾತ್ರವಹಿಸುವ ಸಾಧ್ಯತೆಯಿರುವ ಜೋಶ್ ಹ್ಯಾಸಲ್‌ವುಡ್ ಈ ಸಂದರ್ಭದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳನ್ನು ಹೊಂದಿರುವ ಅತ್ಯುತ್ತಮ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಕಾಣಲಿರುವ ಪ್ರಮುಖ ಬದಲಾವಣೆಗಳಿವು

ಸಂಪ್ರದಾಯ ಮುರಿದು ತಂಡ ಹೆಸರಿಸಿದ ವೇಗಿ

ಸಂಪ್ರದಾಯ ಮುರಿದು ತಂಡ ಹೆಸರಿಸಿದ ವೇಗಿ

ಈ ಸಮ್ಮಿಶ್ರ ತಂಡವನ್ನು ಹೆಸರಿಸುವಾಗ ಹ್ಯಾಸಲ್‌ವುಡ್ ಆರಂಭಿಕ ಆಟಗಾರರಿಂದ ತಂಡವನ್ನು ಹೆಸರಿಸುವ ಸಂಪ್ರದಾಯವನ್ನು ಮುರಿದು ವೇಗಿಗಳಿಂದ ಅರಂಭಿಸಿದರು. ಮೊದಲಿಗೆ ತಮ್ಮನ್ನೇ ಹೆಸರಿಸಿದ ಜೋಸ್ ಹ್ಯಾಸಲ್‌ವುಡ್ ತಮ್ಮ ಜೊತೆಗೆ ವೇಗಿಗಳಾಗಿ ಪ್ಯಾಟ್ ಕಮ್ಮಿನ್ಸ್ ಹಾಗೂ ಜಸ್ಪ್ರಿತ್ ಬೂಮ್ರಾ ಅವರನ್ನು ಆಯ್ಕೆ ಮಾಡಿದ್ದಾರೆ.

ಇಬ್ಬರು ಸ್ಪಿನ್ನರ್‌ಗಳು

ಇಬ್ಬರು ಸ್ಪಿನ್ನರ್‌ಗಳು

ಆಸ್ಟ್ರೇಲಿಯಾ ಪರವಾಗಿ 51 ಟೆಸ್ಟ್ ಹಾಗೂ 48 ಏಕದಿನ ಪಂದ್ಯಗಳನ್ನಾಡಿರುವ ಹ್ಯಾಸಲ್‌ವುಡ್ ಕ್ರಮವಾಗಿ 195 ಹಾಗೂ 78 ವಿಕೆಟ್ ಪಡೆದಿದ್ದಾರೆ. ಸ್ಪಿನ್ನರ್‌ಗಳಾಗಿ ಪಂದ್ಯ ಆಸ್ಟ್ರೇಲಿಯಾದಲ್ಲಿ ನಡೆಯುವುದಾದರೆ ನಥನ್ ಲಿಯನ್ ಭಾರತದಲ್ಲಿ ನಡೆಯುವ ಪಂದ್ಯವಾದರೆ ರವಿಚಂದ್ರನ್ ಅಶ್ವಿನ್ ತಂಡದಲ್ಲಿರಲಿದ್ದಾರೆ ಎಂದು ತಿಳಿಸಿದ್ದಾರೆ. ಅಚ್ಚರಿಯೆಂದರೆ ಈ ತಂಡಕ್ಕೆ ವಿಕೆಟ್ ಕೀಪರನ್ನೇ ಹೆಸರಿಸಿಲ್ಲ ಹ್ಯಾಸಲ್‌ವುಡ್

ಬ್ಯಾಟಿಂಗ್ ವಿಭಾಗ

ಬ್ಯಾಟಿಂಗ್ ವಿಭಾಗ

ಆರಂಭಿಕರಾಗಿ ಮಯಾಂಕ್ ಅಗರ್ವಾಲ್ ಹಾಗೂ ಡೇವಿಡ್ ವಾರ್ನರ್, ಮಧ್ಯಮ ಕ್ರಮಾಂಕದಲ್ಲಿ ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಇರಲಿದ್ದಾರೆ. ಆರನೇ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಅಥವಾ ಆಸ್ಟ್ರೇಲಿಯಾದ ಮರ್ನಾಸ್ ಲ್ಯಾಬುಶೈನ್ ಅವರನ್ನು ಆಯ್ಕೆ ಮಾಡುವುದಾಗಿ ಜೋಶ್ ಹ್ಯಾಸಲ್‌ವುಡ್ ಹೇಳಿದ್ದಾರೆ.

ಒಟ್ಟಾರೆ ತಂಡ ಹೀಗಿದೆ

ಒಟ್ಟಾರೆ ತಂಡ ಹೀಗಿದೆ

ಮಯಾಂಕ್ ಅಗರ್ವಾಲ್, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಮಾರ್ನಸ್ ಲ್ಯಾಬುಶೈಗ್ನೆ / ರೋಹಿತ್ ಶರ್ಮಾ, ನಾಥನ್ ಲಿಯಾನ್ / ರವಿಚಂದ್ರನ್ ಅಶ್ವಿನ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹ್ಯಾಸಲ್‌ವುಡ್, ಜಸ್ಪ್ರಿತ್ ಬುಮ್ರಾ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, July 30, 2020, 18:10 [IST]
Other articles published on Jul 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X