ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕನ್ನಡಿಗ ಸುನೀಲ್ ಜೋಶಿ ಅರ್ಜಿ

Joshi applies for India bowling coach job

ಬೆಂಗಳೂರು, ಆಗಸ್ಟ್ 07: ಐಸಿಸಿ ಕ್ರಿಕೆಟ್ ವಿಶ್ವಕಪ್ 2019ರಲ್ಲಿ ಬಾಂಗ್ಲಾದೇಶ ಕೋಚ್ ಆಗಿ ಕಾರ್ಯನಿರ್ವಹಿಸಿ ನಂತರ ಹುದ್ದೆ ಕಳೆದುಕೊಂಡಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಸುನೀಲ್ ಜೋಶಿ ಅವರು ಈಗ ಭಾರತ ತಂಡದ ಬೌಲಿಂಗ್ ಕೋಚ್ ಆಗಲು ಅರ್ಜಿ ಹಾಕಿದ್ದಾರೆ. ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಗೆ (ಸಿಎಸಿ) ವಿದೇಶಿ ಕೋಚ್ ಆಯ್ಕೆ ಮಾಡುವ ಬಗ್ಗೆ ಒಲವು ಹೊಂದಿಲ್ಲ ಎಂಬ ಸುದ್ದಿಯಿದೆ.

ವಿರಾಟ್ ಕೊಹ್ಲಿ ಸಾರಥ್ಯದ ತಂಡಕ್ಕೆ ಸ್ಪಿನ್ ತಜ್ಞರೊಬ್ಬರು ಅವಶ್ಯಕತೆ ಇದೆ ಎಂಬ ಸುದ್ದಿಯಿರುವುದರಿಂದ 49 ವರ್ಷದ ಗದಗಿನ ಜೋಶಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಟೀಂ ಇಂಡಿಯಾಕ್ಕೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮುಖ್ಯ ಕೋಚ್ ಆಗಿದ್ದರು. ಇದಾದ ಬಳಿಕ ಸ್ಪಿನ್ ಸಲಹೆಗಾರರನ್ನು ನೇಮಿಸಿಲ್ಲ.2017ರ ಚಾಂಪಿಯನ್ಸ್ ಟ್ರೋಫಿ ಫೈನಲ್​ಟೀಂ ಇಂಡಿಯಾ ಸೋಲಿನ ಬಳಿಕ ನಾಯಕ ಕೊಹ್ಲಿ ಹಾಗೂ ಕುಂಬ್ಳೆ ನಡುವಿನ ಮನಸ್ತಾಪ ಬಹಿರಂಗಗೊಂಡಿತು. ಕುಂಬ್ಳೆ ಕೋಚ್ ಹುದ್ದೆಯಿಂದ ನಿರ್ಗಮಿಸಿದರು.

"ಬೌಲಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಬಾಂಗ್ಲಾದೇಶ ತಂಡದೊಂದಿಗೆ ಎರಡೂವರೆ ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ. ಮುಂದಿನ ಸವಾಲಿಗೂ ಸಿದ್ಧನಿದ್ದೇನೆ. ಭಾರತ ತಂಡಕ್ಕೆ ತಜ್ಞ ಸ್ಪಿನ್ ಕೋಚ್ ಇಲ್ಲ. ನನ್ನ ಅರ್ಜಿಯನ್ನು ಪುರಸ್ಕರಿಸುವ ವಿಶ್ವಾಸವಿದೆ, ಎಲ್ಲ ಅಂತಾರಾಷ್ಟ್ರೀಯ ತಂಡಗಳಲ್ಲಿ ಸ್ಪಿನ್ ತಜ್ಞರಿದ್ದಾರೆ. ಭಾರತ ತಂಡಕ್ಕೂ ಅವಶ್ಯಕತೆ ಇದೆ"' ಎಂದು ಜೋಶಿ ಹೇಳಿದ್ದಾರೆ.

1996ರಿಂದ 2001ರವರೆಗೆ 15 ಟೆಸ್ಟ್, 69 ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಆಡಿರುವ ಜೋಶಿ ನಂತರ ಕೋಚ್ ಹುದ್ದೆ ನಿಭಾಯಿಸಿದ್ದಾರೆ. "ಕೊಹ್ಲಿ-ರವಿಶಾಸ್ತ್ರಿ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಿರುವ ಬದಲಾವಣೆಯ ಅಗತ್ಯ ಇರುವುದಿಲ್ಲ, ಬೌಲಿಂಗ್ ಕೋಚ್ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ" ಎಂದು ಬಿಸಿಸಿಐ ಮೂಲಗಳು ಹೇಳಿವೆ.

Story first published: Wednesday, August 7, 2019, 10:27 [IST]
Other articles published on Aug 7, 2019
Read in English: Joshi applies for India job
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X