ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲೂ ಜನಾಂಗೀಯ ನಿಂದನೆಯಾಗಿತ್ತು ಎಂದ ಡ್ಯಾರನ್ ಸಮಿ

Just Learnt What It Meant, Now I’m Angry: Darren Sammy

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಡ್ಯಾರೆನ್ ಸಮಿ ಇತ್ತೀಚೆಗಷ್ಟೇ ವರ್ಣಬೇಧ ಧೋರಣೆಗೆ ಒಳಗಾಗಿದ್ದೆ ಎಂದು ಹೇಳಿಕೊಂಡಿದ್ದರು. ಕ್ರಿಸ್ ಗೇಲ್ ಬಳಿಕ ಈ ರೀತಿ ಹೇಳಿಕೆಯನ್ನು ಕೊಟ್ಟು ಕ್ರಿಕೆಟ್ ವಲಯದಲ್ಲಿ ಸಂಚಲನಕ್ಕೆ ಕಾರಣರಾಗಿದ್ದರು ಸಮಿ. ಇದೀಗ ಐಪಿಎಲ್‌ನಲ್ಲೂ ಈ ರೀತಿಯ ಅನುಭವ ಆಗಿದೆ ಎಂದು ಹೇಳಿಕೊಂಡಿದ್ದಾರೆ.

 ಕೊರೊನಾ ನೆಪ ಹೇಳಿ ಉದ್ದೀಪನ ಪರೀಕ್ಷೆ ತಪ್ಪಿಸಿಕೊಂಡರೆ 4 ವರ್ಷ ನಿಷೇಧ ಕೊರೊನಾ ನೆಪ ಹೇಳಿ ಉದ್ದೀಪನ ಪರೀಕ್ಷೆ ತಪ್ಪಿಸಿಕೊಂಡರೆ 4 ವರ್ಷ ನಿಷೇಧ

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ ರೈಸರ್ಸ್ ತಂಡದಲ್ಲಿದ್ದಾಗ ಜನಾಂಗೀಯ ನಿಂದನೆಯ ಅನುಭವ ಆಗಿತ್ತು ಎಂದು ಹೇಳಿದ್ದಾರೆ. ಆದರೆ ಆಗ ನಾನು ಅದು ಒಂದು ಹೊಗಳಿಕೆಯ ಮಾತು ಎಂದು ಭಾವಿಸಿದ್ದೆ. ಆದರೆ ಅದರ ನಿಜ ಅರ್ಥ ಏನೆಂದು ನನಗೆ ಈಗಷ್ಟೇ ಗೊತ್ತಾಯಿತು ಎಂದು ಹೇಳಿದ್ದಾರೆ.

ಅದರ ಅರ್ಥ ಈಗಷ್ಟೇ ತಿಳಿಯಿತು

ಅದರ ಅರ್ಥ ಈಗಷ್ಟೇ ತಿಳಿಯಿತು

ಇನ್ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಆಕ್ರೋಶದಿಂದ ಪೋಸ್ಟ್ ಮಾಡಿದ್ದಾರೆ ಡ್ಯಾರೆನ್ ಸಮಿ. 'ಕಾಲು' ಎಂದರೆ ಏನು ಎಂದು ಈಗಷ್ಟೇ ನನಗೆ ಗೊತ್ತಾಯಿತು. ಅವರು ನನ್ನನ್ನು ಮತ್ತು ಶ್ರೀಲಂಕಾ ಕ್ರಿಕೆಟಿಗ ಪೆರೆರ ಅವರನ್ನು ಈ ರೀತಿಯಲ್ಲಿ ಕರೆಯುತ್ತಿದ್ದರು. ನಾನು ಅದನ್ನು ಬಲಶಾಲಿ ವ್ಯಕ್ತಿ ಎಂಬ ಅರ್ಥ ಎಂದುಕೊಂಡಿದ್ದೆ ಎಂದು ಆಕ್ರೋಶದಿಂದ ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಅರ್ಥ ಕಂಡುಕೊಂಡ ಸಮಿ

ವಿಡಿಯೋದಲ್ಲಿ ಅರ್ಥ ಕಂಡುಕೊಂಡ ಸಮಿ

ಆದರೆ ಡ್ಯಾರನ್ ಸಮಿ ಈ ರೀತಿ ಯಾರು ತನ್ನನ್ನು ಕರೆದಿದ್ದರು. ಯಾವ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು ಎಂಬುದರ ಬಗ್ಗೆ ಸಮಿ ಏನನ್ನೂ ಹೇಳಿಕೊಂಡಿಲ್ಲ. ಒಂದು ವಿಡಿಯೋವನ್ನು ಆಧಾರವಾಗಿಟ್ಟುಕೊಂಡು ತಮಗೆ ಉಪಯೋಗಿಸಿದ ಪದದ ಅರ್ಥ ಬೇರೆಯದನ್ನೆ ಧ್ವನಿಸುತ್ತದೆ ಎಂದು ಸಮಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್‌ನಲ್ಲೂ ವರ್ಣಬೇಧವಿದೆ ಎಂದ ವಿಂಡಿಸಿಗರು

ಕ್ರಿಕೆಟ್‌ನಲ್ಲೂ ವರ್ಣಬೇಧವಿದೆ ಎಂದ ವಿಂಡಿಸಿಗರು

ಅಮೆರಿಕಾದಲ್ಲಿ ಕಪ್ಪು ವರ್ಣೀಯ ವ್ಯಕ್ತಿನ್ನು ಪೊಲೀಸ್ ಅಧಿಕಾರಿ ಹತ್ಯೆ ಮಾಡಿದ ನಂತರ ವರ್ಣಬೇಧ ನೀತಿಯ ವಿರುದ್ಧ ಹೋರಾಟಗಳು ಆರಂಭವಾಗಿದೆ. ಕ್ರಿಕೆಟ್‌ನಲ್ಲೂ ಈ ಅನುಭವ ಉಂಟಾಗಿತ್ತು ಎಂದು ಮೊದಲಿಗೆ ಗೇಲ್ ಹೇಳಿಕೊಂಡಿದ್ದರು. ಬಳಿಕ ಡ್ಯಾರನ್ ಸಮಿ ಕೂಡ ಇದಕ್ಕೆ ಧ್ವನಿಗೂಡಿಸಿದ್ದರು.

Story first published: Sunday, June 7, 2020, 21:50 [IST]
Other articles published on Jun 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X