ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಚ್‌ ಲ್ಯಾಂಗರ್‌, ಸ್ಟೀವ್‌ ಸ್ಮಿತ್‌ ಅವರನ್ನು ಹೋಲಿಸಿದ್ದು ಯಾರಿಗೆ ಗೊತ್ತಾ?

ಸ್ಟೀವನ್ ಸ್ಮಿತ್ ಅಂತಿಂತಾ ಆಟಗಾರಾ ಅಲ್ಲ..! | Oneindia Kannada
Justin Langer compares Steve Smith to Sachin Tendulkar

ಮೆಲ್ಬೋರ್ನ್‌, ಮೇ 19: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಜಸ್ಟಿನ್‌ ಲ್ಯಾಂಗರ್‌, ತಂಡ ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಅವರನನ್ನು ಭಾರತದ ಬ್ಯಾಟಿಂಗ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ಗೆ ಹೋಲಿಸಿದ್ದಾರೆ.

ವಿಶ್ವಕಪ್‌: ವಾರ್ನರ್‌, ಸ್ಮಿತ್‌ಗೆ ಮಾಜಿ ಕೋಚ್ ಲೆಹ್ಮನ್‌ ಹೇಳಿದ್ದೇನು?ವಿಶ್ವಕಪ್‌: ವಾರ್ನರ್‌, ಸ್ಮಿತ್‌ಗೆ ಮಾಜಿ ಕೋಚ್ ಲೆಹ್ಮನ್‌ ಹೇಳಿದ್ದೇನು?

"ಕಳೆದ ವಾರ ಬ್ರಿಸ್ಬೇನ್‌ನಲ್ಲಿ ಸ್ಮಿತ್‌ ಅದ್ಭುತವಾಗಿ ಆಡಿದರು. ನೇಥನ್‌ ಕೌಲ್ಟರ್‌ ನೈಲ್‌ ಅವರ ಬೌಲಿಂಗ್‌ ಎದುರು ಸ್ಮಿತ್‌ ಅದ್ಭುತವಾದ ಹೊಡೆತಗಳನ್ನು ಆಡಿದರು. ಅದು ಒಂದು ರೀತಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಬ್ಯಾಟಿಂಗ್‌ ನೋಡಿದಂತಾಯಿತು. ಸ್ಮಿತ್‌, ಅದ್ಭುತ ಲಯದಲ್ಲಿದ್ದಾರೆ,'' ಎಂದು ಜಸ್ಟಿನ್‌ ಲ್ಯಾಂಗರ್‌ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!

"ನ್ಯೂಜಿಲೆಂಡ್‌ ವಿರುದ್ಧದ ಮೂರು ಅಭ್ಯಾಸ ಪಂದ್ಯಗಳಲ್ಲಿ ಸ್ಮಿತ್‌ ಅವರ ಬ್ಯಾಟಿಂಗ್‌ ವೀಕ್ಷಿಸಿದೆ. ಕ್ರಿಕೆಟ್‌ ಆಟದ ನಿಜವಾದ ಮಾಸ್ಟರ್‌ ಅವರು. ಅವರು ತಂಡಕ್ಕೆ ಮರಳಿರುವುದು ಉತ್ತಮ ಸಂಗತಿ. ಬ್ಯಾಟಿಂಗ್‌ ಎಂದರೆ ಆತನಿಗೆ ಬಲು ಪ್ರೀತಿ,'' ಎಂದು ಸ್ಮಿತ್‌ ಬ್ಯಾಟಿಂಗ್‌ ಕುರಿತಾಗಿ ಕೋಚ್‌ ಲ್ಯಾಂಗರ್‌ ಗುಣಗಾನ ಮಾಡಿದ್ದಾರೆ.

ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!ವಿಶ್ವಕಪ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ನಿದ್ರೆ ಕೆಡಿಸಬಲ್ಲ ಬೌಲರ್‌ಗಳಿವರು!

29 ವರ್ಷದ ಅನುಭವಿ ಬ್ಯಾಟ್ಸ್‌ಮನ್‌ ಸ್ಮಿತ್‌, ಕಿವೀಸ್‌ ವಿರುದ್ಧದ ಮೂರು ಅಭ್ಯಾಸ ಪಂದ್ಯಗಳಲ್ಲಿ ಕ್ರಮವಾಗಿ 22, 89* ಮತ್ತು 91* ರನ್‌ಗಳನ್ನು ಗಳಿಸಿದ್ದರು. ಇದೀಗ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್‌ಗೂ ಮುನ್ನ ಸ್ಟೀವ್‌ ಸ್ಮಿತ್‌ ಲಯ ಕಂಡುಕೊಂಡಿರುವುದು ಆಸೀಸ್‌ ತಂಡಕ್ಕೆ ಆನೆ ಬಲ ಬಂದಂತಾಗಿದೆ.

World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

ಆಸ್ಟ್ರೇಲಿಯಾ ತಂಡ ವಿಶ್ವಕಪ್‌ಗೂ ಮುನ್ನ ಇಂಗ್ಲೆಂಡ್‌ ಮತ್ತು ಶ್ರೀಲಂಕಾ ವಿರುದ್ಧ ಕ್ರಮಾವಗಿ ಮೇ 25 ಮತ್ತು 27ರಂದು ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಜೂನ್‌ 1ರಂದು ಕ್ರಿಕೆಟ್‌ ಕೂಸು ಅಫಘಾನಿಸ್ತಾನ ಎದುರು ವಿಶ್ವಕಪ್‌ ಅಭಿಯಾನ ಆರಂಭಿಸಲಿದೆ. ಕಳೆದ ಆವೃತ್ತಿಯ ವಿಶ್ವ ಚಾಂಪಿಯನ್ಸ್‌ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಮುಂಚೂಣಿಯಲ್ಲಿದೆ.

Story first published: Sunday, May 19, 2019, 18:09 [IST]
Other articles published on May 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X