ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಾಯದ ಸಮಸ್ಯೆಗೆ ಐಪಿಎಲ್ ದೂರಿದ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್

Justin Langer suggests IPL to blame for injury-wracked Test series

ಬ್ರಿಸ್ಬೇನ್: ಪ್ರಮುಖ ಅಂತಾರಾಷ್ಟ್ರೀಯ ಸರಣಿಗಳ ವೇಳೆ ತಂಡದ ಪ್ರಭಾವಿ ಆಟಗಾರರು ಉತ್ತಮ ಪ್ರದರ್ಶನ ನೀಡದಿದ್ದಾಗ ಆ ತಂಡದ ಕೋಚ್‌ಗಳು ಮುಖ್ಯವಾಗಿ ವಿದೇಶಿ ತಂಡಗಳ ಕೋಚ್‌ಗಳು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಅನ್ನು ದೂರೋದು ಇತ್ತೀಚೆಗೆ ಸಾಮಾನ್ಯವಾಗುತ್ತಿದೆ.

ಭಾರತೀಯ ಆಟಗಾರರಿಗೆ ಗಾಯ, ತರ್ಲೆ ಮಾಡಿದ ವೀರೇಂದ್ರ ಸೆಹ್ವಾಗ್!ಭಾರತೀಯ ಆಟಗಾರರಿಗೆ ಗಾಯ, ತರ್ಲೆ ಮಾಡಿದ ವೀರೇಂದ್ರ ಸೆಹ್ವಾಗ್!

ಆಸ್ಟ್ರೇಲಿಯಾದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಕೂಡ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ತಂಡದ ಹಿನ್ನಡೆಗೆ, ಆಟಗಾರರ ಗಾಯದ ಸಮಸ್ಯೆಗೆ ಐಪಿಎಲ್ ಟೂರ್ನಿಯನ್ನು ದೂರಿದ್ದಾರೆ. ಐಪಿಎಲ್ ಅಂದರೆ ನನಗೆ ಇಷ್ಟಾನೆ. ಆದ್ರೆ ಕಳೆದ ಬಾರಿಯ ಸೀಸನ್‌ ಟೈಮಿಂಗ್ ಸರಿಯಿರಲಿಲ್ಲ ಎಂದು ಲ್ಯಾಂಗರ್ ಹೇಳಿದ್ದಾರೆ.

'ಈ ಬೇಸಿಗೆಯ ಉದ್ದಕ್ಕೂ ಎಷ್ಟು ಆಟಗಾರರು ಗಾಯಕ್ಕೀಡಾಗಿದ್ದಾರೆ ಅನ್ನೋದು ಕುತೂಹಲಕಾರಿಯಾಗಿದೆ. ಈ ವರ್ಷದ (2020ರ) ಐಪಿಎಲ್ ಟೂರ್ನಿ ನಡೆಸಿದ ಸಮಯ ಮಾದರಿ ಅನ್ನಿಸುವಂತಿತ್ತು ಎಂದು ನಾನು ಹೇಳಲಾರೆ. ಮುಖ್ಯವಾಗಿ ಇಂಥ ದೊಡ್ಡ ಸರಣಿಗಳಿರುವಾಗ 2020ರ ಐಪಿಎಲ್ ಟೈಮಿಂಗ್ ಸರಿಯಿರಲಿಲ್ಲ,' ಎಂದು ಲ್ಯಾಂಗರ್ ಅಭಿಪ್ರಾಯಿಸಿದ್ದಾರೆ.

Ind vs Aus: ಗಾಯಕ್ಕೀಡಾಗಿರುವ ಭಾರತದ ಆಟಗಾರರ ಸಂಪೂರ್ಣ ಪಟ್ಟಿInd vs Aus: ಗಾಯಕ್ಕೀಡಾಗಿರುವ ಭಾರತದ ಆಟಗಾರರ ಸಂಪೂರ್ಣ ಪಟ್ಟಿ

ಸಾಮಾನ್ಯವಾಗಿ ಮಾರ್ಚ್-ಏಪ್ರಿಲ್‌ನಲ್ಲಿ ಆರಂಭಗೊಳ್ಳುವ ಐಪಿಎಲ್, 2020ರಲ್ಲಿ ಕೊರೊನಾವೈರಸ್ ಕಾರಣದಿಂದಾಗಿ ಸೆಪ್ಟೆಂಬರ್‌ನಲ್ಲಿ ಅದೂ ಯುನೈಟೆಡ್ ಅರಬ್‌ನಲ್ಲಿ ನಡೆದಿತ್ತು. ಟೂರ್ನಿಯೇನೋ ಯಶಸ್ವಿಯಾಗಿತ್ತು. ಆದರೆ ಈಗ ಆಸ್ಟ್ರೇಲಿಯಾ-ಭಾರತ ಟೆಸ್ಟ್ ಸರಣಿಯ ವೇಳೆ ಡೇವಿಡ್ ವಾರ್ನರ್ ಸೇರಿ ಅನೇಕ ಭಾರತೀಯ ಆಟಗಾರರು ಗಾಯಕ್ಕೀಡಾಗಿದ್ದರಿಂದ ಐಪಿಎಲ್‌ ಅನ್ನು ದೂರುವಂತಾಗಿದೆ.

Story first published: Wednesday, January 13, 2021, 11:50 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X