ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟ್ವಿಟ್ಟರ್‌ನಲ್ಲಿ ವಿಶೇಷ ಮೈಲಿಗಲ್ಲು ದಾಟಿದ ಆಟಗಾರ ಕೆಎಲ್ ರಾಹುಲ್

K L Rahul crosses 5 million followers in Twitter

ಕೆಎಲ್ ರಾಹುಲ್ ಕ್ರಿಕೆಟ್ ಅಂಗಳದಲ್ಲಿ ಎಷ್ಟು ಖ್ಯಾತರೋ ಅಂಗಳದಾಚೆ ಸಾಮಾಜಿಕ ಜಾಲತಾಣದಲ್ಲೂ ಆ್ಯಕ್ಟೀವ್ ಇರುವ ವ್ಯಕ್ತಿ. ಇನ್ಸ್ಟಾಗ್ರಾಂ ಹಾಗೂ ಟ್ವಿಟ್ಟರ್‌ನಲ್ಲಿ ಕೆಎಲ್ ರಾಹುಲ್ ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ. ಈಗ ರಾಹುಲ್ ಟ್ವಿಟ್ಟರ್‌ನಲ್ಲಿ ಮಾಡಿದ ವಿಶೇಷ ಮೈಲಿಗಲ್ಲೊಂದನ್ನು ದಾಟಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮೂಲಕ ಧನ್ಯವಾದ ಹೇಳಿದ್ದಾರೆ.

ಕೆಎಲ್ ರಾಹುಲ್ ಟ್ವಿಟ್ಟರ್‌ನಲ್ಲಿ 5 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ 50 ಲಕ್ಷಕ್ಕೂ ಅಧಿಕ ಜನರು ರಾಹುಲ್ ಅವರನ್ನು ಟ್ವಿಟ್ಟರ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಈ ಮೂಲಕ ದೊಡ್ಡ ಮೊತ್ತದ ಅಭಿಮಾನಿ ವಲಯವನ್ನು ಸೃಷ್ಟಿಸಿಕೊಂಡಿದ್ದಾರೆ.

ನಾಯಕನಾಗಿ ರಿಕಿ ಪಾಂಟಿಂಗ್ ವಿಶ್ವದಾಖಲೆ ಮುರಿಯಲು ವಿರಾಟ್ ಕೊಹ್ಲಿ ಸಜ್ಜುನಾಯಕನಾಗಿ ರಿಕಿ ಪಾಂಟಿಂಗ್ ವಿಶ್ವದಾಖಲೆ ಮುರಿಯಲು ವಿರಾಟ್ ಕೊಹ್ಲಿ ಸಜ್ಜು

ಈ ಬಗ್ಗೆ ಟ್ವೀಟ್ ಮಾಡಿರುವ ಕೆಎಲ್ ರಾಹುಲ್ "ನಿಮ್ಮ ಬೆಂಬಲ ಈ ಪಯಣವನ್ನು ವಿಶೇಷವಾಗಿಸಿದೆ. ಎಲ್ಲಾ ಏರಿಳಿತಗಳಲ್ಲೂ ಜೊತೆಯಾಗಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ಕೃತಜ್ಞನಾಗಿದ್ದೇನೆ. #5 ಮಿಲಿಯನ್ ಫಾಲೋವರ್ಸ್" ಎಂದು ರಾಹುಲ್ ಬರೆದುಕೊಂಡಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ಕೆಎಲ್ ರಾಹುಲ್ ಮತ್ತಷ್ಟು ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ 8.4 ಮಿಲಿಯನ್ ಅಭಿಮಾನಿಗಳು ಕೆಎಲ್ ರಾಹುಲ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಕೆಎಲ್ ರಾಹುಲ್ ಕೂಡ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಚಟುವಟಿಕೆಯಿಂದ ಇದ್ದು ಅಭಿಮಾನಿಗಳೋಂದಿಗೆ ಸಂಪರ್ಕದಲ್ಲಿ ಇರುತ್ತಾರೆ.

ಪಂತ್ ಅಥವಾ ಸಾಹಾ? : ಟೆಸ್ಟ್‌ ಕ್ರಿಕೆಟ್‌ಗೆ ಉತ್ತಮ ಆಯ್ಕೆಯನ್ನು ಹೇಳಿದ ಸುನಿಲ್ ಗವಾಸ್ಕರ್ಪಂತ್ ಅಥವಾ ಸಾಹಾ? : ಟೆಸ್ಟ್‌ ಕ್ರಿಕೆಟ್‌ಗೆ ಉತ್ತಮ ಆಯ್ಕೆಯನ್ನು ಹೇಳಿದ ಸುನಿಲ್ ಗವಾಸ್ಕರ್

ಸದ್ಯ ಕೆಎಲ್ ರಾಹುಲ್ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದು ಟೆಸ್ಟ್ ಸರಣಿಗಾಗಿ ಅಭ್ಯಾಸವನ್ನು ನಡೆಸುತ್ತಿದ್ದಾರೆ. ಕಳೆದ ಹಲವು ಸಮಯಗಳ ಬಳಿಕ ಕೆಎಲ್ ರಾಹುಲ್ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸೀಮಿತ ಓವರ್‌ಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ರಾಹುಲ್ ಈ ಫಾರ್ಮ್‌ಅನ್ನು ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲೂ ಮುಂದುವರಿಸುವ ವಿಶ್ವಾಸವನ್ನು ಹೊಂದಿದ್ದಾರೆ.

Story first published: Wednesday, December 16, 2020, 10:23 [IST]
Other articles published on Dec 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X