ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆ.ಎಲ್ ರಾಹುಲ್ ತಂಡದಲ್ಲಿರುವುದು ದೊಡ್ಡ ಬಲ: ಕೆ.ಗೌತಮ್

K. L. Rahuls Return a Big Boost To Karnataka :K. Gowtham
ಕರ್ನಾಟಕಕ್ಕೆ ಬಲ ತುಂಬಲಿದ್ದಾರೆ ಕೆ.ಎಲ್ ರಾಹುಲ್ | K L Rahul | Oneindia Kannada

2019-20ನೇ ಸಾಲಿನ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ ಪಶ್ಚಿಮ ಬಂಗಾಳ ತಂಡವನ್ನು ಎದುರಿಸಲಿದೆ. ಉತ್ತಮ ಪ್ರದರ್ಶನವನ್ನು ಸೀಡಿ ಸೆಮಿಫೈನಲ್‌ಗೇರಿರುವ ಕರ್ನಾಟಕ ತಂಡಕ್ಕೆ ಸೆಮಿ ಫೈನಲ್‌ನಲ್ಲಿ ಕೆ.ಎಲ್ ರಾಹುಲ್ ಸಾಥ್ ನೀಡುತ್ತಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ತಂಡಕ್ಕೆ ಕೆ.ಎಲ್ ರಾಹುಲ್ ಆಯ್ಕೆಯಾಗದೇ ಇರುವ ಕಾರಣ ಈಗಾಗಲೇ ವಾಪಾಸ್ಸಾಗಿದ್ದಾರೆ. ಹೀಗಾಗಿ ರಾಹುಲ್ ಅವರನ್ನು ಸೆಮಿ ಫೈನಲ್ ಪಂದ್ಯಕ್ಕೆ ಆಯ್ಕೆ ಮಾಡಲಾಗಿದೆ. ಇದು ಕರ್ನಾಟಕ ತಂಡಕ್ಕೆ ಇನ್ನಷ್ಟು ಬಲ ನೀಡಲಿದೆ.

ಜಮ್ಮು-ಕಾಶ್ಮೀರ ವಿರುದ್ಧ ಗೆದ್ದ ಕರ್ನಾಟಕ, ಸತತ 3ನೇ ಬಾರಿ ಸೆ.ಫೈನಲ್‌ಗೆ ಎಂಟ್ರಿಜಮ್ಮು-ಕಾಶ್ಮೀರ ವಿರುದ್ಧ ಗೆದ್ದ ಕರ್ನಾಟಕ, ಸತತ 3ನೇ ಬಾರಿ ಸೆ.ಫೈನಲ್‌ಗೆ ಎಂಟ್ರಿ

ಈ ಬಗ್ಗೆ ಕರ್ನಾಟಕ ತಂಡದ ಆಲ್‌ರೌಂಡರ್ ಕೆ.ಗೌತಮ್ ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಕರ್ನಾಟಕ ತಂಡಕ್ಕೆ ಸೇರ್ಪಡೆಗೊಂಡಿರುವುದು ತಂಡಕ್ಕೆ ದೊಡ್ಡ ಬಲ ಸಿಕ್ಕಂತಾಗಿದೆ, ನಾವು ಇದನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲಿದ್ದೇವೆ ಎಂಬ ಎಂಬ ಮಾತನ್ನು ಹೇಳಿದ್ದಾರೆ.

ರಾಹುಲ್ ಅವರಂತಾ ಆಟಗಾರ ತಂಡಕ್ಕೆ ಸೇರ್ಪಡೆಯಾಗುವುದು ಎದುರಾಳಿಗಳಿಗೆ ಒತ್ತಡವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ ನಮ್ಮ ತಂಡದ ಆಟಗಾರರಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ನೀಡುತ್ತದೆ ಎಂಬ ಮಾತನ್ನು ಹೇಳಿದ್ದಾರೆ ಕೆ.ಗೌತಮ್. ಕರ್ನಾಟಕ ತಂಡದಲ್ಲಿ ಮನೀಶ್ ಪಾಂಡೆ, ಕರುಣ್ ನಾಯರ್ ಮತ್ತು ದೇವ್‌ದತ್‌ ಪಡಿಕ್ಕಲ್‌ರಂತಾ ಆಟಗಾರರು ಇದ್ದು ರಾಹುಲ್ ಮತ್ತಷ್ಟು ಬಲವನ್ನು ತುಂಬಲಿದ್ದಾರೆ.

ರಣಜಿ: ಬೆಂಗಾಲ್ ವಿರುದ್ಧದ ಸೆ.ಫೈನಲ್‌ಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟರಣಜಿ: ಬೆಂಗಾಲ್ ವಿರುದ್ಧದ ಸೆ.ಫೈನಲ್‌ಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

ಕ್ವಾರ್ಟರ್ ಫೈನಲ್‌ನಲ್ಲಿ ತಂಡದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿರ್ಣಾಯಕ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಅಲ್ಪ ಮೊತ್ತಕ್ಕೆ ಕುಸಿದರೂ ಬೌಲಿಂಗ್‌ನಲ್ಲಿ ತಿರುಗಿ ಬೀಳಲು ಕಾರಣವಾಯಿತು. ಜೊತೆಗೆ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲಲು ಸಹಕಾರಿಯಾಯಿತು ಎಂದಿದ್ದಾರೆ.

Story first published: Thursday, February 27, 2020, 20:54 [IST]
Other articles published on Feb 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X