ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ 2019: ಪ್ಲೇ ಆಫ್ಸ್‌ ಸನಿಹದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಎದುರಾಯ್ತು ಆತಂಕ

ಡೆಲ್ಲಿ ತಂಡದ ನಿದ್ದೆ ಕೆಡಿಸುತ್ತಿದೆ ಪ್ಲೆ ಆಪ್ಸ್..!?
Kagiso Rabada deals with stiff back ahead of World Cup

ಹೊಸದಿಲ್ಲಿ, ಮೇ 02: ಆರು ವರ್ಷಗಳ ಬಳಿಕ ಇದೇ ಮೊದಲ ಬಾರಿ ಪ್ಲೇ ಆಫ್ಸ್‌ ಮೆಟ್ಟಿಲೇರಿರುವ ಡೆಲ್ಲಿ ಕ್ಯಾಪಿಟಲ್ಸ್‌ (ಈ ಮೊದಲು ಡೆಲ್ಲಿ ಡೇರ್‌ಡೆವಿಲ್ಸ್‌) ತಂಡಕ್ಕೆ ಇದೀಗ ಆತಂಕ ಶುರುವಾಗಿದೆ.

 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡದ ವಿಶೇಷ ದಾಖಲೆ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡದ ವಿಶೇಷ ದಾಖಲೆ

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಆಡಿದ 12 ಪಂದ್ಯಗಳಿಂದ 25 ವಿಕೆಟ್‌ಗಳನ್ನು ಉರುಳಿಸಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಯಶಸ್ಸಿಗೆ ಕಾರಣರಾಗಿರುವ ವೇಗದ ಬೌಲರ್‌ ಕಗಿಸೊ ರಬಾಡ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕಿಂತಲೂ ಮುಂಬರುವ ವಿಶ್ವಕಪ್‌ ನಿಟ್ಟಿನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ದುಪ್ಪಟ್ಟು ಆತಂಕವನ್ನು ತಂದೊಡ್ಡಿದೆ.

 ಸುರೇಶ್ ರೈನಾಗೆ ಮಾಡಿದ್ದನ್ನು ಧೋನಿಗೆ ಮಾಡಬೇಡ: ಪಂತ್‌ಗೆ ಎಚ್ಚರಿಕೆ! ಸುರೇಶ್ ರೈನಾಗೆ ಮಾಡಿದ್ದನ್ನು ಧೋನಿಗೆ ಮಾಡಬೇಡ: ಪಂತ್‌ಗೆ ಎಚ್ಚರಿಕೆ!

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಬುಧವಾರ ನಡೆದ ಪಂದ್ಯದಲ್ಲಿ ರಬಾಡಗೆ ವಿಶ್ರಾಂತಿ ನೀಡಲಾಗಿತ್ತು. ತಂಡದ ಪ್ರಮುಖ ಸ್ಟ್ರೈಕ್‌ ಬೌಲರ್‌ನ ಅನುಪಸ್ಥಿತಿಯಲ್ಲಿ ಡೆಲ್ಲಿ ಪಡೆ ಬರೋಬ್ಬರಿ 80 ರನ್‌ಗಳ ಹೀನಾಯ ಸೋಲಿನ ಹೊಡೆತ ತಿಂದಿತ್ತು. ಇದು ರಬಾಡ ಅವರ ಅನುಪಸ್ಥಿತಿಯಲ್ಲಿತಂಡ ಎದುರಿಸಬಹುದಾದ ದುಃಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ. ಪ್ರಸಕ್ತ ಐಪಿಎಲ್‌ನಲ್ಲಿ ರಬಾಡ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ವಿಶ್ರಾಂತಿ ತೆಗೆದುಕೊಂಡಿದ್ದು, ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದವರ ಪೈಕಿ ಮುಂಚೂಣಿಯಲ್ಲಿದ್ದು ಪರ್ಪಲ್‌ ಕ್ಯಾಪ್‌ ಹೊಂದಿದ್ದಾರೆ.

 ICC Rankings: ಲಾಂಗೆಸ್ಟ್‌ನಲ್ಲಿ ಭಾರತ, ಶಾರ್ಟೆಸ್ಟ್‌ನಲ್ಲಿ ಪಾಕ್‌ ನಂ.1 ICC Rankings: ಲಾಂಗೆಸ್ಟ್‌ನಲ್ಲಿ ಭಾರತ, ಶಾರ್ಟೆಸ್ಟ್‌ನಲ್ಲಿ ಪಾಕ್‌ ನಂ.1

ತನ್ನ ಪ್ರಮುಖ ವೇಗಿ ಡೇಲ್‌ ಸ್ಟೇನ್‌ ಐಪಿಎಲ್‌ನಲ್ಲಿ ಕೇವಲ 2 ಪಂದ್ಯಗಳನ್ನಾಡಿ ಭುಜದ ಗಾಯದ ಸಮಸ್ಯೆಗೆ ತುತ್ತಾಗಿರುವುದರಿಂದ ದಕ್ಷಿಣ ಆಫ್ರಿಕಾ ತಂಡ ಈಗಾಗಲೇ ಕಂಗಾಲಾಗಿದ್ದು, ಇದೀಗ ರಬಾಡ ಅವರ ಸ್ಥಿತಿ ಕುರಿತಾಗಿಯೂ ಚಿಂತೆಯಲ್ಲಿ ಮುಳುಗಿದೆ.

 ಐಪಿಎಲ್: ಮಿಂಚಿನ ವೇಗದ ಸ್ಟಂಪಿಂಗ್‌ ಸೀಕ್ರೆಟ್ ಬಿಚ್ಚಿಟ್ಟ ಎಂಎಸ್ ಧೋನಿ ಐಪಿಎಲ್: ಮಿಂಚಿನ ವೇಗದ ಸ್ಟಂಪಿಂಗ್‌ ಸೀಕ್ರೆಟ್ ಬಿಚ್ಚಿಟ್ಟ ಎಂಎಸ್ ಧೋನಿ

"ಅವರ ಸಾಮರ್ಥ್ಯ ಏನೆಂಬುದು ನಮಗೆ ತಿಳಿದಿದೆ. ಇನಿಂಗ್ಸ್‌ನ ಅಂತ್ಯದ ಓವರ್‌ಗಳಲ್ಲಿ ಅವರು ಅಧ್ಭುತ ಬೌಲರ್‌. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅವರ ಸೇವೆ ಅಗತ್ಯವಿತ್ತು. ಆದರೆ, ಅವರಿಗೆ ವಿಶ್ರಾಂತಿ ನೀಡಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ,'' ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಮಡದ ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ.

 ಐಪಿಎಲ್ ದಾಖಲೆ: ಕೊಹ್ಲಿ, ಗೌತಮ್ ಗಂಭೀರ್ ಹಿಂದಿಕ್ಕಿದ ಸುರೇಶ್ ರೈನಾ ಐಪಿಎಲ್ ದಾಖಲೆ: ಕೊಹ್ಲಿ, ಗೌತಮ್ ಗಂಭೀರ್ ಹಿಂದಿಕ್ಕಿದ ಸುರೇಶ್ ರೈನಾ

ರಬಾಡಗೆ ಬೆನ್ನು ನೋವಿನ ಸಮಸ್ಯೆ ಇದೀಗ ಬಂದಿರುವುದಲ್ಲ. ಕಳೆದ ವರ್ಷವೂ ಬೆನ್ನು ನೋವಿನಿಂದಾಗಿ 3 ತಿಂಗಳ ಸುದೀರ್ಘಾವಧಿಯ ವಿಶ್ರಾಂತಿ ತೆಗೆದುಕೊಂಡಿದ್ದರು. ಇದರಿಂದಾಗಿಯೇ ಕಳೆದ ವರ್ಷ ಐಪಿಎಲ್‌ನಲ್ಲೂ ಅವರು ಪಾಲ್ಗೊಂಡಿರಲಿಲ್ಲ.

Story first published: Thursday, May 2, 2019, 20:18 [IST]
Other articles published on May 2, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X