ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವೇಗಿ ಕಾಗಿಸೋ ರಬಾಡಗೆ ಟೆಸ್ಟ್‌ನಿಂದ ನಿಷೇಧ!

Kagiso Rabada fined for ICC code breach, to miss next Test

ಪೋರ್ಟ್ ಎಲಿಝಬೆತ್, ಜನವರಿ 17: ದಕ್ಷಿಣ ಆಫ್ರಿಕಾ ವೇಗಿ ಕಾಗಿಸೋ ರಬಾಡಾಗೆ ಐಸಿಸಿ ಒಂದು ಟೆಸ್ಟ್ ಪಂದ್ಯದಿಂದ ನಿಷೇಧ ಹೇರಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ vs ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ಅನುಚಿತವಾಗಿ ವರ್ತಿಸಿ ಐಸಿಸಿ ನಿಯಮ ಮೀರಿರುವುದರಿಂದ ರಬಾಡ ನಿಷೇಧಕ್ಕೀಡಾಗಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!ಭಾರತ vs ಆಸ್ಟ್ರೇಲಿಯಾ: ಕೆಟ್ಟ ದಾಖಲೆಗೆ ಕಾರಣರಾದ ವಿರಾಟ್ ಕೊಹ್ಲಿ!

ಪೋರ್ಟ್ ಎಲಿಝಬೆತ್‌ನ ಸೇಂಟ್ ಜಾರ್ಜ್ಸ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಇಂಗ್ಲೆಂಡ್, ಆತಿಥೇಯರ ವಿರುದ್ಧ 3ನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಗುರುವಾರ (ಜನವರಿ 16) ನಡೆದ ಪಂದ್ಯದ ವೇಳೆ ರಬಾಡ ಎದುರಾಳಿಯನ್ನು ಔಟ್ ಮಾಡಿದ ಬಳಿಕ ಎಲ್ಲೆ ಮೀರಿ ವರ್ತಿಸಿದ್ದರು.

1
46038

ಇಂಗ್ಲೆಂಡ್ ನಾಯಕ ಜೋ ರೂಟ್‌ ಅವರನ್ನು ಆಫ್ರಿಕಾ ವೇಗಿ ರಬಾಡ 64.5ನೇ ಓವರ್‌ನಲ್ಲಿ ಔಟ್ ಮಾಡಿದ್ದರು. ರೂಟ್ ಕೇವಲ 27 ರನ್‌ಗೆ ನಿರ್ಗಮಿಸಿದ್ದರು. ಈ ವೇಳೆ ರೂಟ್ ವಿಕೆಟ್ ದೊರೆಯುತ್ತಲೇ ರಬಾಡ ಜೋರಾಗಿ ಕಿರುಚಿ, ಎದುರಾಳಿಯನ್ನು ಅಣಕಿಸುವಂತೆ ವಿಕೆಟ್‌ ದೊರೆತಿದ್ದನ್ನು ಸಂಭ್ರಮಾಚರಿಸಿದ್ದರು.

ಸಚಿನ್, ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!ಸಚಿನ್, ಆಮ್ಲಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

ರಬಾಡ ಅವರ ಈ ವರ್ತನೆ ಐಸಿಸಿ ನಿಯಮ ಮೀರಿಸಿದೆ. ಐಸಿಸಿ ಆರ್ಟಿಕಲ್ 2.5ರ ಪ್ರಕಾರ ಅಂತಾರಾಷ್ಟ್ರೀಯ ಪಂದ್ಯಗಳ ವೇಳೆ ಎದುರಾಳಿ ಬ್ಯಾಟ್ಸ್‌ಮನ್ ಔಟ್ ಆದಾಗ ಬೌಲರ್, ಆತನನ್ನು ಕೆಣಕುವ ರೀತಿಯಲ್ಲಿ ಪ್ರತಿಕ್ರಿಯಿಸುವಂತಿಲ್ಲ. ಹೀಗಾಗಿ ರಬಾಡ ಮುಂದಿನ ಪಂದ್ಯದಲ್ಲಿ ಆಡುವಂತಿಲ್ಲ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಸದ್ಯ 1-1ರಿಂದ ಸಮಬಲಗೊಂಡಿದೆ.

Story first published: Friday, January 17, 2020, 21:03 [IST]
Other articles published on Jan 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X