ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ನಲ್ಲಿ ವಿಶ್ವ ದಾಖಲೆ ಬರೆದ ದಕ್ಷಿಣ ಆಫ್ರಿಕಾ ವೇಗಿ ಕಾಗಿಸೊ ರಬಾಡ

Kagiso Rabada is the third fastest bowler to complete 200 wickets in Test cricket

ಕರಾಚಿ: ಪಾಕಿಸ್ತಾನ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ಮೊದಲನೇ ಟೆಸ್ಟ್ ಪಂದ್ಯ ಆಡುತ್ತಿದೆ. ಈ ಪಂದ್ಯದಲ್ಲಿ ಆಫ್ರಿಕಾ ವೇಗಿ ಕಾಗಿಸೊ ರಬಾಡ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್‌ನಲ್ಲಿ ವೇಗವಾಗಿ 200 ವಿಕೆಟ್ ಪಡೆದ ವಿಶ್ವದ ಮೂರನೇ ಆಟಗಾರನಾಗಿ ರಬಾಡ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತ

ಪಾಕಿಸ್ತಾನದ ಮೊದಲನೇ ಇನ್ನಿಂಗ್ಸ್‌ನಲ್ಲಿ ಹಸನ್ ಅಲಿ ಅವರನ್ನು 21 ರನ್‌ಗೆ ಪೆವಿಲಿಯನ್‌ಗೆ ಅಟ್ಟುವ ಮೂಲಕ ರಬಾಡ 200 ವಿಕೆಟ್ ಗೆರೆ ದಾಟಿದರು. 78ನೇ ಟೆಸ್ಟ್ ಇನ್ನಿಂಗ್ಸ್‌ ಆಡುತ್ತಿರುವ ರಬಾಡ ಈ ಸಾಧನೆ ಮಾಡಿದ್ದಾರೆ. ಜೊತೆಗೆ 200+ ವಿಕೆಟ್ ಪಡೆದ ದಕ್ಷಿಣ ಆಫ್ರಿಕಾದ 8ನೇ ಬೌಲರ್ ಎಂಬ ದಾಖಲೆಗೂ ಕಾರಣರಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಎಸೆತಗಳನ್ನು ಪರಿಗಣಿಸಿದರೆ, ಪಾಕಿಸ್ತಾನದ ಮಾಜಿ ಮಧ್ಯಮ ವೇಗಿ ವಾಕರ್ ಯೂನಿಸ್ 7730 ಎಸೆತಗಳಲ್ಲಿ 200 ವಿಕೆಟ್ ಪಡೆದರೆ, ದಕ್ಷಿಣ ಆಫ್ರಿಕಾದ ಮಾರಕ ವೇಗಿ ಡೇಲ್ ಸ್ಟೇನ್ 7848 ಎಸೆತಗಳಲ್ಲಿ 200 ವಿಕೆಟ್ ಪಡೆದಿದ್ದರು. ರಬಾಡ 8154 ಎಸೆತಗಳಲ್ಲಿ 200 ವಿಕೆಟ್ ಪಡೆದಿರುವುದರಿಂದ ವೇಗವಾಗಿ 200 ವಿಕೆಟ್ ಪಡೆದವರಲ್ಲಿ 3ನೇ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.

ಭಾರತೀಯರ ಸಹಿಯಿರುವ ಜೆರ್ಸಿಯ ಫೋಟೋ ಶೇರ್ ಮಾಡಿದ ಲಿಯಾನ್ಭಾರತೀಯರ ಸಹಿಯಿರುವ ಜೆರ್ಸಿಯ ಫೋಟೋ ಶೇರ್ ಮಾಡಿದ ಲಿಯಾನ್

200+ ವಿಕೆಟ್ ಪಡೆದ ದಕ್ಷಿಣ ಆಫ್ರಿಕಾ ಬೌಲರ್‌ಗಳಲ್ಲಿ ಡೇಲ್ ಸ್ಟೇನ್ ಮುಂದಿದ್ದಾರೆ. ಸ್ಟೇನ್ 93 ಪಂದ್ಯಗಳಲ್ಲಿ 439 ವಿಕೆಟ್‌ ಪಡೆದಿದ್ದಾರೆ. ಇನ್ನು ಶಾನ್ ಪೊಲಕ್ 421, ಮಕಾಯ ಎನ್‌ಟಿನಿ 390, ಅಲನ್ ಡೊನಾಲ್ಡ್ 330, ಮಾರ್ನೆ ಮಾರ್ಕೆಲ್ 309, ಜಾಕ್ ಕ್ಯಾಲೀಸ್ 291, ವರ್ನಾನ್ ಫಿಲಾಂಡರ್ 224 ಮತ್ತು ರಬಾಡ 200 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Thursday, January 28, 2021, 13:50 [IST]
Other articles published on Jan 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X