ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2019ರ ಐಪಿಎಲ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗಿ ರಬಾಡ ಔಟ್‌!

Kagiso Rabada out of IPL with back niggle

ಬೆಂಗಳೂರು, ಮೇ 03: ಪ್ರಸಕ್ತ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದವರ ಪೈಕಿ ಮುಂಚೂಣಿಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವೇಗದ ಬೌಲರ್‌ ಕಗಿಸೊ ರಬಾಡ, ಬೆನ್ನು ನೋವಿನ ಸಮಸ್ಯೆ ಕಾರಣ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಬೆನ್ನು ನೋವಿನ ಸಮಸ್ಯೆ ಕಾರಣ ಕಳೆದ ವರ್ಷವೂ ಸಂಪೂರ್ಣ ಐಪಿಎಲ್‌ನಿಂದಲೇ ಹೊರಗುಳಿದಿದ್ದ23 ವರ್ಷದ ದಕ್ಷಿಣ ಆಫ್ರಿಕಾ ಪಡೆಯ ವೇಗಿ ರಬಾಡ, ಈ ವರ್ಷ ಕ್ಯಾಪಿಟಲ್ಸ್‌ ತಂಡದ ಪರ 12 ಪಂದ್ಯಗಳನ್ನಾಡಿ 25 ವಿಕೆಟ್‌ಗಳನ್ನು ಉರುಳಿಸುವ ಮೂಲಕ ಪರ್ಪಲ್‌ ಕ್ಯಾಪ್‌ ಹೊಂದಿದ್ದಾರೆ.

 ಐಪಿಎಲ್‌ 2019: ಪ್ಲೇ ಆಫ್ಸ್‌ ಸನಿಹದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಎದುರಾಯ್ತು ಆತಂಕ ಐಪಿಎಲ್‌ 2019: ಪ್ಲೇ ಆಫ್ಸ್‌ ಸನಿಹದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಎದುರಾಯ್ತು ಆತಂಕ

ಬುಧವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ರಬಾಡಗೆ ವಿಶ್ರಾಂತಿ ನೀಡಲಾಗಿತ್ತು. ಇದಕ್ಕೂ ಮೊದಲು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ರಬಾಡ ಪ್ರಮುಖ ಪಾತ್ರ ವಹಿಸಿದ್ದರು.

ಐಪಿಎಲ್‌ನ ಉಳಿದ ಪಂದ್ಯಗಳಿಗೆ ಕ್ಯಾಪಿಟಲ್ಸ್‌ಗೆ ರಬಾಡ ರಬಸದ ಬೌಲಿಂಗ್‌ ಸೇವೆ ಇಲ್ಲವಾಗಿದೆ. ಕ್ಯಾಪಿಟಲ್ಸ್‌ ತಂಡ ರಾಜಸ್ಥಾನ ರಾಯಲ್ಸ್‌ ಎದುರು ತನ್ನ ಕೊನೆಯ ಲೀಗ್‌ ಪಂದ್ಯವನ್ನಾಡಲಿದೆ. ಆಡಿದ 13 ಪಂದ್ಯಗಳಿಂದ 16 ಅಂಕಗಳನ್ನು ಗಳಿಸಿ ಪ್ಲೇ ಆಫ್ಸ್‌ಗೆ ಅರ್ಹತೆ ಪಡೆದಿರುವ ಕ್ಯಾಪಿಟಲ್ಸ್‌ ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಡೆಲ್ಲಿ ತಂಡ 2012ರ ಬಳಿಕ ಇದೇ ಮೊದಲ ಬಾರಿ ಪ್ಲೇ ಆಫ್ಸ್‌ಗೆ ಕಾಲಿಟ್ಟಿರುವುದು ವಿಶೇಷ.

ಮೇ 30ರಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭವಾಗುತ್ತಿರುವುದರಿಂದ ವಿಶ್ರಾಂತಿ ತೆಗೆದುಕೊಳ್ಳಲು ತಾಯ್ನಾಡಿಗೆ ಹಿಂದಿರುಗುವಂತೆ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ರಬಾಡಾಗೆ ಸೂಚಿಸಿದೆ.

ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್‌ನಲ್ಲಿ ಮೇ 30ರಂದು ಆತಿಥೇಯ ಇಂಗ್ಲೆಂಡ್‌ ಎದುರು ತನ್ನ ಮೊದಲ ಪಂದ್ಯವನ್ನಾಡಲಿದೆ. ಬಳಿಕ ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪೈಪೋಟಿ ನಡೆಸಲಿದೆ. ದಕ್ಷಿಣ ಆಫ್ರಿಕಾ ತಂಡಕ್ಕೆ ಸತತ ಗಾಯದ ಸಮಸ್ಯೆಗಳು ಎದುರಾಗುತ್ತಿದ್ದು, ಈ ಮೊದಲು ಪ್ರಮುಖ ವೇಗಿಗಳಾದ ಡೇಲ್‌ ಸ್ಟೇನ್‌, ಲುಂಗಿ ಎನ್ಗಿಡಿ ಮತ್ತು ಎನ್ರಿಚ್‌ ನಾರ್ಜೆ ಕೂಡ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

Story first published: Friday, May 3, 2019, 12:46 [IST]
Other articles published on May 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X