ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಲಿಯಮ್ಸನ್, ಅಖಿಲ ಧನಂಜಯ ಮೇಲೆ ಸಂಶಯಾಸ್ಪದ ಬೌಲಿಂಗ್ ದೂರು

Kane Williamson, Akila Dananjaya reported for suspect bowling action during first Test

ದುಬೈ, ಆಗಸ್ಟ್ 20: ಗ್ಯಾಲೆ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಆಗಸ್ಟ್ 14-18ರ ವರೆಗೆ ನಡೆದಿದ್ದ ಕೇನ್ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಮತ್ತು ಲಂಕಾ ಬೌಲರ್ ಅಖಿಲ ಧನಂಜಯ ಅನುಮಾನಾಸ್ಪದ ಬೌಲಿಂಗ್ ಶೈಲಿ ಪ್ರದರ್ಶಿಸಿದ್ದಾರೆ ಎಂದು ದೂರಲಾಗಿದೆ ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಹೇಳಿದೆ.

ಪೂಜಾರ, ರಹಾನೆ, ವಿಹಾರಿ ಆಟದ ಸೊಬಗು: ವಿಂಡೀಸ್ ಅಭ್ಯಾಸ ಪಂದ್ಯ ಡ್ರಾಪೂಜಾರ, ರಹಾನೆ, ವಿಹಾರಿ ಆಟದ ಸೊಬಗು: ವಿಂಡೀಸ್ ಅಭ್ಯಾಸ ಪಂದ್ಯ ಡ್ರಾ

ಭಾನುವಾರ (ಆಗಸ್ಟ್ 18) ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬಲ ಗೈ ಆಫ್‌ ಬ್ರೇಕ್‌ ಸ್ಪಿನ್ನರ್‌ಗಳಾದ ವಿಲಿಯಮ್ಸನ್ ಮತ್ತು ಧನಂಜಯ ಇಬ್ಬರ ಬೌಲಿಂಗ್ ಶೈಲಿಯೂ ಪರಿಶೀಲನೆಗೆ ಒಳಪಡುವಂತಿತ್ತು ಎಂಬ ದೂರು ಕೇಳಿಬಂದಿದೆ ಎಂದು ಐಸಿಸಿ ಮಂಗಳವಾರ (ಆಗಸ್ಟ್ 20) ತಿಳಿಸಿದೆ.

ವಿಝ್ಝಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಿಂದ ಹಿಂದೆ ಸರಿದ ಜಮ್ಮು & ಕಾಶ್ಮೀರವಿಝ್ಝಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಿಂದ ಹಿಂದೆ ಸರಿದ ಜಮ್ಮು & ಕಾಶ್ಮೀರ

ಪಂದ್ಯದ ಅಧಿಕಾರಿಗಳು ನೀಡಿರುವ ಆಟಗಾರರ ಬೌಲಿಂಗ್ ಶೈಲಿಯ ಬಗೆಗಿನ ದೂರನ್ನು ಎರಡೂ ತಂಡಗಳ ನಿರ್ವಹಣಾ ಸಮಿತಿಗೆ ನೀಡಲಾಗಿದೆ. ದೂರಿನಲ್ಲಿ ಇಬ್ಬರೂ ಆಟಗಾರರ ಕಾನೂನು ಬದ್ಧ ಬೌಲಿಂಗ್ ಶೈಲಿಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ ಎಂದು ಐಸಿಸಿ ನೀಡಿರುವ ಹೇಳಿಕೆಯಲ್ಲಿ ವಿವರಿಸಿದೆ.

'ಕಾಫೀ ವಿತ್ ಕರಣ್' ವಿವಾದದ ಬಗ್ಗೆ ಮತ್ತೆ ತುಟಿ ಬಿಚ್ಚಿದ ಕೆಎಲ್ ರಾಹುಲ್'ಕಾಫೀ ವಿತ್ ಕರಣ್' ವಿವಾದದ ಬಗ್ಗೆ ಮತ್ತೆ ತುಟಿ ಬಿಚ್ಚಿದ ಕೆಎಲ್ ರಾಹುಲ್

ವಿಲಿಯಮ್ಸನ್ ಮತ್ತು ಧನಂಜಯ, ದೂರು ದಾಖಲಾದ ಆಗಸ್ಟ್ 18ರಿಂದ 14 ದಿನಗಳ ಒಳಗಾಗಿ ಬೌಲಿಂಗ್ ಶೈಲಿ ಪರಿಶೀಲನೆಗೆ ಒಳಗಾಗಬೇಕಿದೆ. ಪರಿಶೀಲನೆಯ ಬಳಿಕ ಇಬ್ಬರ ಬೌಲಿಂಗ್ ಶೈಲಿಯೂ ಅನುಮತಿ ನೀಡಿರುವಂತದ್ದೇ ಎಂದು ಐಸಿಸಿ ಹೇಳುವವರೆಗೂ ಇಬ್ಬರೂ ಬೌಲಿಂಗ್ ಮಾಡಲು ಅನುಮತಿ ನೀಡಲಾಗಿದೆ.

ಸ್ಫೋಟಕ ಬ್ಯಾಟ್ಸ್ಮನ್ ಶಹಝಾದ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತು!ಸ್ಫೋಟಕ ಬ್ಯಾಟ್ಸ್ಮನ್ ಶಹಝಾದ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತು!

ಮೊದಲ ಟೆಸ್ಟ್ ಪಂದ್ಯದಲ್ಲಿ 29ರ ಹರೆಯದ ವಿಲಿಯಮ್ಸನ್ ವಿಕೆಟ್ ಪಡೆಯದೆ ಒಟ್ಟು 3 ಓವರ್‌ಗಳನ್ನು ಎಸೆದಿದ್ದರು. 25ರ ಹರೆಯದ ಧನಂಜಯ ಒಟ್ಟು 62 ಓವರ್‌ ಎಸೆದು 6 ವಿಕೆಟ್ ಪಡೆದಿದ್ದರು. ಪಂದ್ಯದಲ್ಲಿ ಶ್ರೀಲಂಕಾ 6 ವಿಕೆಟ್ ಜಯ ಗಳಿಸಿತ್ತು. ಸಂಕ್ಷಿಪ್ತ ಸ್ಕೋರ್: ಕಿವೀಸ್-249-10 (83.2), 285-10 (106), ಲಂಕಾ-267-10 (93.2), 268-4 (86.1).

Story first published: Tuesday, August 20, 2019, 15:19 [IST]
Other articles published on Aug 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X