ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಂಡು ಮಗುವಿಗೆ ತಂದೆಯಾದ ಖುಷಿ ಹಂಚಿಕೊಂಡ ಕೇನ್ ವಿಲಿಯಮ್ಸನ್

Kane Williamson and his wife Sarah blessed with a baby boy

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ಕೊನೆಯ ಪಂದ್ಯ ಆಡುವುದಕ್ಕೂ ಮುನ್ನ ತಂಡದ ನಾಯಕ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ಗೆ ಹಾರಿದ್ದರು. ಹೌದು, ತಮ್ಮ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡುವ ಕಾರಣದಿಂದಾಗಿ ಕೇನ್ ವಿಲಿಯಮ್ಸನ್ ಟೂರ್ನಿಯ ಅಂತಿಮ ಪಂದ್ಯಕ್ಕೂ ಮುನ್ನವೇ ನ್ಯೂಜಿಲೆಂಡ್‌ಗೆ ಹಾರಿದ್ದರು. ಇದೀಗ ಈ ವಿಷಯಕ್ಕೆ ಸಂಬಂಧಿಸಿದಂತೆ ಕೇನ್ ವಿಲಿಯಮ್ಸನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ತಮ್ಮ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಮುಂಬೈ ಮಾಡಿದ್ದು ಸಣ್ಣ ಸಹಾಯ, ಇನ್ನೇನಿದ್ದರೂ ನಮ್ಮದೇ ಆಟ ಎಂದ ಆರ್‌ಸಿಬಿ ಆಟಗಾರ!ಮುಂಬೈ ಮಾಡಿದ್ದು ಸಣ್ಣ ಸಹಾಯ, ಇನ್ನೇನಿದ್ದರೂ ನಮ್ಮದೇ ಆಟ ಎಂದ ಆರ್‌ಸಿಬಿ ಆಟಗಾರ!

ಕೇನ್ ವಿಲಿಯಮ್ಸನ್ ಮತ್ತು ಪತ್ನಿ ಸಾರಾ ಎರಡನೇ ಬಾರಿಗೆ ತಂದೆ - ತಾಯಿಯಾಗುತ್ತಿದ್ದು, ಈ ಹಿಂದೆ 2019ರಲ್ಲಿ ತಮ್ಮ ಮೊದಲ ಮಗು ಮ್ಯಾಗಿಗೆ ಜನ್ಮ ನೀಡಿದ್ದರು. ಇದೀಗ ತಮ್ಮ ಮಗಳು ಮ್ಯಾಗಿ ಮತ್ತು ನೂತನವಾಗಿ ಜನಿಸಿರುವ ಗಂಡು ಮಗು ಇಬ್ಬರ ಜೊತೆಗೂ ತಮ್ಮ ಪತ್ನಿ ಸಾರಾ ಇರುವ ಚಿತ್ರವನ್ನು ಕೇನ್ ವಿಲಿಯಮ್ಸನ್ ಹಂಚಿಕೊಂಡಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ನಮ್ಮ ಕುಟುಂಬಕ್ಕೆ ಸ್ವಾಗತ ಪುಟ್ಟ ಪುರುಷನಿಗೆ ಎಂದು ಕೇನ್ ವಿಲಿಯಮ್ಸನ್ ಬರೆದುಕೊಂಡಿದ್ದು, ರಶೀದ್ ಖಾನ್, ಸುರೇಶ್ ರೈನಾ ಮತ್ತು ಜೇಸನ್ ಹೋಲ್ಡರ್ ಸೇರಿದಂತೆ ಇನ್ನೂ ಹಲವಾರು ಕ್ರಿಕೆಟಿಗರು ಶುಭಾಶಯ ಕೋರಿದ್ದಾರೆ.

ನಾಯಕನಾಗಿ ಟೂರ್ನಿಯಲ್ಲಿ ಕೇನ್ ಫ್ಲಾಪ್

ನಾಯಕನಾಗಿ ಟೂರ್ನಿಯಲ್ಲಿ ಕೇನ್ ಫ್ಲಾಪ್

ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಂತೆ ಈ ಬಾರಿಯೂ ಸಹ ಕೇನ್ ವಿಲಿಯಮ್ಸನ್ ಫ್ಲಾಪ್ ಆಗಿದ್ದಾರೆ. ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ 13 ಪಂದ್ಯಗಳಲ್ಲಿ ಕಣಕ್ಕಿಳಿದ ಸನ್ ರೈಸರ್ಸ್ ಹೈದರಾಬಾದ್ 6 ಪಂದ್ಯಗಳಲ್ಲಿ ಮಾತ್ರ ಗೆದ್ದು, ಉಳಿದ 7 ಪಂದ್ಯಗಳಲ್ಲಿ ಹೀನಾಯ ಸೋಲನ್ನು ಕಂಡಿತ್ತು. ಮೊದಲಿಗೆ ಸತತ ಎರಡು ಪಂದ್ಯಗಳಲ್ಲಿ ಸೋತಿದ್ದ ಸನ್ ರೈಸರ್ಸ್ ಹೈದರಾಬಾದ್ ನಂತರ ನಡೆದ 5 ಪಂದ್ಯಗಳಲ್ಲಿ ಸತತವಾಗಿ ಜಯ ಸಾಧಿಸಿ ಕಮ್‌ಬ್ಯಾಕ್ ಮಾಡಿತು. ಆದರೆ ನಂತರ ನಡೆದ 6 ಪಂದ್ಯಗಳಲ್ಲಿ ಸತತ ಸೋಲುಂಡ ಸನ್ ರೈಸರ್ಸ್ ಹೈದರಾಬಾದ್ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಕೈತಪ್ಪಿಸಿಕೊಂಡಿತ್ತು. ಹಾಗೂ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ಗೆ ಹಾರುವ ಮುನ್ನ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಗೆಲುವನ್ನು ಕಂಡಿತ್ತು.

ಬ್ಯಾಟಿಂಗ್‌ನಲ್ಲೂ ವಿಲಿಯಮ್ಸನ್ ವಿಫಲ

ಬ್ಯಾಟಿಂಗ್‌ನಲ್ಲೂ ವಿಲಿಯಮ್ಸನ್ ವಿಫಲ

ಇನ್ನು ಕೇವಲ ನಾಯಕತ್ವದಲ್ಲಿ ಮಾತ್ರವಲ್ಲದೇ ಬ್ಯಾಟಿಂಗ್‌ನಲ್ಲೂ ಕೂಡ ಕೇನ್ ವಿಲಿಯಮ್ಸನ್ ವಿಫಲರಾಗಿದ್ದಾರೆ. ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳನ್ನಾಡಿದ ಕೇನ್ ವಿಲಿಯಮ್ಸನ್ 216 ರನ್ ಗಳಿಸುವಲ್ಲಿ ಮಾತ್ರ ಶಕ್ತರಾಗಿದ್ದಾರೆ. ಇನ್ನು ಟೂರ್ನಿಯಲ್ಲಿ ಕೇವಲ ಒಮ್ಮೆ ಮಾತ್ರ ಅರ್ಧಶತಕವನ್ನು ಬಾರಿಸಿರುವ ಕೇನ್ ವಿಲಿಯಮ್ಸನ್ ಬ್ಯಾಟಿಂಗ್‌ನಲ್ಲಿ ಮಕಾಡೆ ಮಲಗಿದ್ದಾರೆ.

ಕೇನ್ ಅನುಪಸ್ಥಿತಿಯಲ್ಲೂ ಸೋತ ಸನ್ ರೈಸರ್ಸ್

ಕೇನ್ ಅನುಪಸ್ಥಿತಿಯಲ್ಲೂ ಸೋತ ಸನ್ ರೈಸರ್ಸ್

ಇನ್ನು ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟೂರ್ನಿಯ ಅಂತಿಮ ಪಂದ್ಯದಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ಕಣಕ್ಕಿಳಿದ ಸನ್ ರೈಸರ್ಸ್ ಹೈದರಾಬಾದ್ ಈ ಪಂದ್ಯದಲ್ಲಿಯೂ ಸಹ ಸೋಲನ್ನು ಕಂಡಿದೆ. ಭುವನೇಶ್ವರ್ ಕುಮಾರ್ ನಾಯಕತ್ವದಲ್ಲಿ ಕಣಕ್ಕಿಳಿದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿ ಎದುರಾಳಿ ಪಂಜಾಬ್ ಕಿಂಗ್ಸ್ ತಂಡಕ್ಕೆ 158 ರನ್‌ಗಳ ಗುರಿಯನ್ನು ನೀಡಿತ್ತು. ಇನ್ನು ಈ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಲಿಯಾಮ್ ಲಿವಿಂಗ್‌ಸ್ಟನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 15.1 ಓವರ್‌ನಲ್ಲಿಯೇ 5 ವಿಕೆಟ್ ನಷ್ಟಕ್ಕೆ 160 ರನ್ ಕಲೆಹಾಕಿ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

Story first published: Tuesday, May 24, 2022, 9:22 [IST]
Other articles published on May 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X