ವಿಲಿಯಮ್ಸನ್ ಬರ್ತ್‌ ಡೇ: ಎಸ್‌ಆರ್‌ಎಚ್ ನಾಯಕನ ಐಪಿಎಲ್ ಅಂಕಿ-ಅಂಶಗಳು

ಹೈದರಾಬಾದ್, ಆಗಸ್ಟ್ 8: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಆಗಸ್ಟ್ 8ರಂದು 30ರ ಹರೆಯಕ್ಕೆ ಕಾಲಿರಿಸುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 11 ಮತ್ತು 12ನೇ ಸೀಸನ್‌ನಿಂದ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿರುವ ವಿಲಿಯಮ್ಸನ್ ಆಧುನಿಕ ಕ್ರಿಕೆಟ್ ದಿನಗಳಲ್ಲಿ ವಿಶ್ವದ ಮಾದರಿ ಕ್ರಿಕೆಟಿಗರಲ್ಲಿ ಗುರುತಿಸಿಕೊಂಡಿದ್ದಾರೆ.

ಐಸಿಸಿಯಿಂದ ಮಹತ್ವದ ನಿರ್ಧಾರ: ಮುಂದಿನ ವರ್ಷ ಭಾರತದಲ್ಲೇ ಟಿ20 ವಿಶ್ವಕಪ್

ಕೇನ್ ವಿಲಿಯಮ್ಸನ್ ವಿಶ್ವದ ಮಾದರಿ ಕ್ರಿಕೆಟಿಗರಲ್ಲಿ ಗುರುತಿಸಿಕೊಳ್ಳುವುದಕ್ಕೆ ಕಾರಣ ಅವರ ಕ್ರಿಕೆಟ್ ಅಂಕಿ-ಅಂಶಗಳಷ್ಟೇ ಅಲ್ಲ, ಅವರ ಉತ್ತಮ ವ್ಯಕ್ತಿತ್ವ ಕೂಡ ಹೌದು. 2010ರಲ್ಲಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ವಿಲಿಯಮ್ಸನ್ ವೃತ್ತಿ ಬದುಕಿನಲ್ಲಿ ವಿಶೇಷ ಸಾಧನೆ ತೋರಿದ್ದಾರೆ. ಖ್ಯಾತ ಕ್ರಿಕೆಟಿಗನಿಗೆ ಕ್ರಿಕೆಟ್ ಲೋಕದ ಅನೇಕರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಐಪಿಎಲ್ 2020: ನೀವು ತಿಳಿದುಕೊಳ್ಳಲೇ ಬೇಕಿರುವ ಐಪಿಎಲ್‌ನ 5 ಬ್ಯಾಟಿಂಗ್ ದಾಖಲೆಗಳು

ಈವರೆಗೆ 80 ಟೆಸ್ಟ್ ಪಂದ್ಯಗಳನ್ನಾಡಿರುವ ಕೇನ್, 50.99ರ ಸರಾಸರಿಯಲ್ಲಿ, 51.63ರ ಸ್ಟ್ರೈಕ್ ರೇಟ್‌ನಂತೆ 6476 ರನ್ ಗಳಿಸಿದ್ದಾರೆ. ಇದರಲ್ಲಿ 21 ಶತಕ, 2 ದ್ವಿಶತಕ, 32 ಅರ್ಥ ಶತಕಗಳು ಸೇರಿವೆ. 151 ಏಕದಿನ ಪಂದ್ಯಗಳಲ್ಲಿ 47.49ರ ಸರಾಸರಿಯಂತೆ 81.76 ಸ್ಟ್ರೈಕ್ ರೇಟ್‌ನಂತೆ 6174 ರನ್ ಕಲೆ ಹಾಕಿದ್ದಾರೆ. 13 ಶತಕ, 39 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಈ 5 ಆಟಗಾರರ ಪಾಲಿಗೆ 2020ರ ಐಪಿಎಲ್ ಕೊನೇಯ ಸೀಸನ್ ಎನಿಸಲಿದೆ!

ಇನ್ನು 60 ಟಿ20ಐ ಪಂದ್ಯಗಳನ್ನಾಡಿರುವ ವಿಲಿಯಮ್ಸನ್ 32.65ರ ಸರಾಸರಿಯಂತೆ 1665 ಗಳಿಸಿದ್ದಾರೆ, 11 ಅರ್ಧ ಶತಕ ಬಾರಿಸಿದ್ದಾರೆ. 41 ಐಪಿಎಲ್ ಪಂದ್ಯಗಳಲ್ಲಿ 38.29ರ ಸರಾಸರಿಯಂತೆ 1302 ರನ್, 12 ಅರ್ಧ ಶತಕಗಳ ದಾಖಲೆ ಹೊಂದಿದ್ದಾರೆ. ಕೇನ್ ನಾಯಕತ್ವದ ನ್ಯೂಜಿಲೆಂಡ್ ತಂಡ 2019ರಲ್ಲಿ ವಿಶ್ವಕಪ್ ಫೈನಲ್ ಪ್ರವೇಶಿಸಿತ್ತು. 2018ರಲ್ಲಿ ವಿಲಿಯಮ್ಸನ್ ಕ್ಯಾಪ್ಟನ್ಸಿಯಲ್ಲಿ ಎಸ್‌ಆರ್‌ಎಚ್ ಪ್ರಶಸ್ತಿ ಸುತ್ತಿನಲ್ಲಿ ಕಾದಾಡಿತ್ತು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, August 8, 2020, 11:48 [IST]
Other articles published on Aug 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X