ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC Final: ವಿರಾಟ್ ಕೊಹ್ಲಿಗಿಂತ ಕೇನ್ ವಿಲಿಯಮ್ಸನ್ ಉತ್ತಮ ನಾಯಕ ಎಂದ ಆಕಾಶ್ ಚೋಪ್ರ

Kane Williamson is better captain than Virat Kohli, according to Aakash Chopra.
ಆತ ಯಾವುದೇ ಸಂಧರ್ಭದಲ್ಲು ನಮಗೆ ಸೋಲಿನ ರುಚಿ ತೋರಿಸಬಲ್ಲ | Oneindia Kannada

ಮಾಜಿ ಆರಂಭಿಕ ಆಟಗಾರ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ ಅವರನ್ನು ಹೋಲಿಕೆ ಮಾಡಿದ್ದಾರೆ. ನಾಯಕತ್ವದ ವಿಚಾರವಾಗಿ ವಿರಾಟ್ ಕೊಹ್ಲಿಗಿಂತ ಕೇನ್ ವಿಲಿಯಮ್ಸನ್ ಉತ್ತಮ ಎಂಬ ಅಭಿಪ್ರಾಯವನ್ನು ಚೋಪ್ರಾ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಬ್ಯಾಟಿಂಗ್ ಸಾಮರ್ಥ್ಯದ ವಿಚಾರವಾಗಿ ಕೂಡ ಈ ಇಬ್ಬರು ದಿಗ್ಗಜ ಆಟಗಾರನ್ನು ಹೋಲಿಕೆ ಮಾಡಿದ್ದಾರೆ. ಬ್ಯಾಟಿಂಗ್ ಸಾಮರ್ಥ್ಯದಲ್ಲಿ ವಿರಾಟ್ ಕೊಹ್ಲಿ ಕೇನ್ ವಿಲಿಯಮ್ಸನ್ ಅವರಿಗಿಂತ ಮುಂದಿದ್ದಾರೆ ಎಂದು ಆಕಾಶ್ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ.

WTC Final: ಟೀಮ್ ಇಂಡಿಯಾ ಕಾಂಬಿನೇಶನ್ ಸಮಸ್ಯೆಗೆ ಸುನಿಲ್ ಗವಾಸ್ಕರ್ ನೀಡಿದ ಪರಿಹಾರವಿದುWTC Final: ಟೀಮ್ ಇಂಡಿಯಾ ಕಾಂಬಿನೇಶನ್ ಸಮಸ್ಯೆಗೆ ಸುನಿಲ್ ಗವಾಸ್ಕರ್ ನೀಡಿದ ಪರಿಹಾರವಿದು

WTC ಯಲ್ಲಿ ಉಭಯ ನಾಯಕರ ಸಾಧನೆ

WTC ಯಲ್ಲಿ ಉಭಯ ನಾಯಕರ ಸಾಧನೆ

ವಿಲಿಯಮ್ಸನ್ ಹಾಗೂ ವಿರಾಟ್ ಕೊಹ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ತಮ್ಮ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ. ವಿರಾಟ್ ಕೊಹ್ಲಿ WTCಯ 14 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು 10 ಗೆಲುವು ಹಾಗೂ 4 ಸೋಲು ಕಂಡಿದ್ದಾರೆ. ಮತ್ತೊಂದೆಡೆ ಕೇನ್ ವಿಲಿಯಮ್ಸನ್ 9 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದು 6 ಗೆಲುವು ಹಾಗೂ 3 ಸೋಲು ಕಂಡಿದ್ದಾರೆ.

ರಣತಂತ್ರದ ವಿಚಾರದಲ್ಲಿ ಕೇನ್ ಮುಂದೆ

ರಣತಂತ್ರದ ವಿಚಾರದಲ್ಲಿ ಕೇನ್ ಮುಂದೆ

ಪಾಕಿಸ್ತಾನದ ಕ್ರಿಕೆಟರ್ ಕಮ್ರಾನ್ ಅಕ್ಮಲ್ ಜೊತೆಗೆ ಯೂಟ್ಯೂಬ್ ಸಂವಾದದಲ್ಲಿ ಭಾಗಿಯಾಗಿದ್ದ ಆಕಾಶ್ ಚೋಪ್ರ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾಯಕನಾಗಿ ಉತ್ತಮ ರಣತಂತ್ರವನ್ನು ಹೆಣೆಯಬಲ್ಲ ಸಾಮರ್ಥ್ಯವನ್ನು ಕೇನ್ ಹೊಂದಿದ್ದಾರೆ ಎಂದು ಚೋಪ್ರ ಹೇಳಿದ್ದಾರೆ. ಆದರೆ ಒಟ್ಟಾರೆ ದೃಷ್ಟಿಕೋನದಿಂದ ನೋಡಿದರೆ ಕೋಹ್ಲಿ ಅತ್ಯುತ್ತಮ ಎಂದು ಆಕಾಶ್ ಚೋಪ್ರ ವಿವರಿಸಿದ್ದಾರೆ.

ಇಬ್ಬರು ತುಂಬಾ ಅನುಭವಿಗಳು

ಇಬ್ಬರು ತುಂಬಾ ಅನುಭವಿಗಳು

ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಇಬ್ಬರು ಕೂಡ ಅತ್ಯುತ್ತಮವಾದ ಅನುಭವವನ್ನು ಹೊಂದಿದ್ದಾರೆ. ಜೊತೆಗೆ ಇಬ್ಬರ ಬಳಿಯೂ ಅತ್ಯುತ್ತಮವಾದ ತಂಡ ಇದೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ತಮ್ಮ ತಮ್ಮ ತಂಡಗಳ ಪರವಾಗಿ ಅತ್ಯುತ್ತಮ ಪ್ರದರ್ಶನವನ್ನು ನೀಡಲಿದ್ದಾರೆ ಎಂಬ ಭರವಸೆಯನ್ನು ಆಕಾಶ್ ಚೋಪ್ರ ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್‌ನಲ್ಲಿ ಕೇನ್ ಹಿನ್ನೆಡೆ

ಭಾರತ ಹಾಗೂ ಇಂಗ್ಲೆಂಡ್‌ನಲ್ಲಿ ಕೇನ್ ಹಿನ್ನೆಡೆ

ಇನ್ನು ಇದೇ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಬ್ಯಾಟ್ಸ್‌ಮನ್ ಆಗಿ ಇಂಗ್ಲೆಂಡ್ ನೆಲದಲ್ಲಿ ಯಶಸ್ಸಿನ ರುಚಿಯನ್ನು ಕಂಡಿದ್ದಾರೆ. ಆದರೆ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಇಂಗ್ಲೆಂಡ್ ನೆಲದಲ್ಲಿ ಹಾಗೂ ಭಾರತದ ವಿರುದ್ಧ ಎರಡರಲ್ಲಿಯೂ ಹಿನ್ನೆಡೆ ಅನುಭವಿಸಿದ್ದಾರೆ ಎಂದು ಆಕಾಶ್ ಚೋಪ್ರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ

Story first published: Thursday, June 17, 2021, 15:15 [IST]
Other articles published on Jun 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X