ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೋತ ಬಳಿಕ ಕೇನ್ ವಿಲಿಯಮ್ಸನ್ ಅಲಭ್ಯತೆಗೆ ಕಾರಣ ಹೇಳಿದ ಡೇವಿಡ್ ವಾರ್ನರ್

Kane Williamson Missed Ipl 2020 Clash Vs Rcb Due To Injury: Srh Skipper David Warner

ಸನ್ ರೈಸರ್ಸ್ ಹೈದರಾಬಾದ್ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 10 ರನ್‌ಗಳಿಂದ ಶರಣಾಗಿದೆ. ಈ ಸೋಲಿನ ಬಗ್ಗೆ ಮಾತನಾಡಿದ ಎಸ್‌ರಾಹೆಚ್ ನಾಯಕ ಡೇವಿಡ್ ವಾರ್ನರ್ ಯುಜುವೇಂದ್ರ ಚಾಹಲ್ ಅವರು ತಮ್ಮ ಅಂತಿಮ ಓವರ್‌ನಲ್ಲಿ ಪಂದ್ಯದ ಗತಿಯನ್ನು ಬದಲಾಯಿಸಿಬಿಟ್ಟರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಸ್‌ಆರ್‌ಹೆಚ್ ಇನ್ನಿಂಗ್ಸ್‌ನ 16ನೇ ಓವರ್‌ ಎಸೆಯಲು ಬಂದ ಯುಜುವೇಂದ್ರ ಚಾಹಲ್ ಸೆಟ್ ಬ್ಯಾಟ್ಸ್‌ಮನ್ ಜಾನಿ ಬೈರ್‌ಸ್ಟೀವ್ ವಿಕೆಟ್ ಪಡೆದುದ್ದಲ್ಲದೆ ವಿಜಯ್ ಶಂಕರ್ ಅವರನ್ನು ಕೂಡ ಕೆಡವಿದರು. ಈ ಮೂಲಕ ಪಂದ್ಯಕ್ಕೆ ಟ್ವಿಸ್ಟ್ ನೀಡಿದರು. ಇದೇ ಆರ್‌ಸಿಬಿ ಗೆಲ್ಲಲು ಮುಖ್ಯ ಕಾರಣವಾಯಿತು.

ಐಪಿಎಲ್ 2020: ಸನ್ ರೈಸರ್ಸ್ ವಿರುದ್ಧ ಮೊದಲ ಪಂದ್ಯ ಗೆದ್ದು ಬೀಗಿದ ಆರ್‌ಸಿಬಿ: ಹೈಲೈಟ್ಸ್ಐಪಿಎಲ್ 2020: ಸನ್ ರೈಸರ್ಸ್ ವಿರುದ್ಧ ಮೊದಲ ಪಂದ್ಯ ಗೆದ್ದು ಬೀಗಿದ ಆರ್‌ಸಿಬಿ: ಹೈಲೈಟ್ಸ್

ಇದೇ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಕೇನ್ ವಿಲಿಯಮ್ಸನ್ ಪಂದ್ಯದಲ್ಲಿ ಆಡದಿರುವ ಕಾರಣವನ್ನು ಕೂಡ ಹೇಳಿದ್ದಾರೆ. ಕೇನ್ ವಿಲಿಯಮ್ಸನ್ ಆಡಲು ಫಿಟ್ ಇರಲಿಲ್ಲ. ಅಭ್ಯಾಸದ ಸಂದರ್ಭದಲ್ಲಿ ಆತ ಗಾಯಗೊಂಡಿದ್ದ ಕಾರಣ ಈ ಪಂದ್ಯಕ್ಕೆ ಲಭ್ಯರಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಪಂದ್ಯದ ಮಧ್ಯೆ ಗಾಯಗೊಂಡ ಮಿಚೆಲ್ ಮಾರ್ಸ್ ಬಗ್ಗೆಯೂ ವಾರ್ನರ್ ಪ್ರತಿಕ್ರಿಯಿಸಿದರು, ಮಿಚೆಲ್ ಮಾರ್ಶ್ ಸಾಕಷ್ಟು ಉತ್ಸಾಹವನ್ನು ಹೊಂದಿರುವ ಆಟಗಾರ. ಗಾಯದ ಮಧ್ಯೆಯೂ ತಂಡದ ಗೆಲುವಿಗಾಗಿ ಪ್ರಯತ್ನ ನಡೆಸಿದ. ಆದರೆ ಆತನಿಂದ ಅದು ಸಾಧ್ಯವಾಗಲಿಲ್ಲ. ಕಾಲಿನ ಮೇಲೆ ಭಾರ ಹಾಕುವುದು ಸಾಧ್ಯವಿರಲಿಲ್ಲ ಎಂದಿದ್ದಾರೆ.

ಪಡಿಕ್ಕಲ್ ಪದಾರ್ಪಣೆಗೆ ಅರ್ಧ ಶತಕದ ಮೆರುಗು: ಐಪಿಎಲ್‌ನಲ್ಲೂ ಸಂಪ್ರದಾಯ ಮುಂದುವರಿಸಿದ ಕನ್ನಡಿಗ!ಪಡಿಕ್ಕಲ್ ಪದಾರ್ಪಣೆಗೆ ಅರ್ಧ ಶತಕದ ಮೆರುಗು: ಐಪಿಎಲ್‌ನಲ್ಲೂ ಸಂಪ್ರದಾಯ ಮುಂದುವರಿಸಿದ ಕನ್ನಡಿಗ!

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಬಗ್ಗೆಯೂ ವಾರ್ನರ್ ಪ್ರತಿಕ್ರಿಯಿಸಿದರು. ಇಂದಿನ ಪಂದ್ಯದಲ್ಲಿ ನಡೆದಿರುವುದನ್ನು ನಾವು ಸರಿ ಮಾಡಿಕೊಳ್ಳಲು ಸಾಧ್ಯವಲ್ಲ. ಮುಂದಿನ ಪಂದ್ಯ ಅಬುದಾಭಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿದೆ. ಆ ಪಂದ್ಯದಲ್ಲಿ ಇನ್ನಷ್ಟು ಪರಿಶ್ರಮ ಹಾಕಿ ಗೆಲ್ಲುವ ವಿಶ್ವಾಸವಿದೆ ಎಂದು ವಾರ್ನರ್ ಹೇಳಿದ್ದಾರೆ.

Story first published: Wednesday, September 23, 2020, 8:00 [IST]
Other articles published on Sep 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X