ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನೊ ಡೌಟ್, ಈತನೇ ವಿಶ್ವಶ್ರೇಷ್ಟ ಆಟಗಾರ: ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದ ಕೇನ್ ವಿಲಿಯಮ್ಸನ್

Kane Williamson names world’s best all-format batsman ‘without a doubt’ | Kane Williamson | Cricket
Kane Williamson Names World’s Best All-Format Batsman

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅದ್ಭುತ ಆಟಗಾರ ಅನ್ನುವುದರಲ್ಲಿ ಅನುಮಾನವಿಲ್ಲ. ಕೇವಲ ಆಟಗಾರನಾಗಿ ಮಾತ್ರವಲ್ಲ ತನ್ನ ನಡತೆಯಿಂದಲೂ ನ್ಯೂಜಿಲೆಂಡ್‌ನ ನಾಯಕ ವಿಶ್ವ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದಾರೆ. ಇಂತಾ ಕೇನ್ ತನ್ನ ಪ್ರಕಾರ ಎಲ್ಲಾ ಮಾದರಿಯಲ್ಲೂ ವಿಶ್ವ ಶ್ರೇಷ್ಟ ಆಟಗಾರ ಯಾರು ಅನ್ನುವುದನ್ನು ತಿಳಿಸಿದ್ದಾರೆ.

ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ಗೆ ಪತ್ರಕರ್ತರಿಂದ ಪ್ರಶ್ನೆಯೊಂದು ಎದುರಾಯಿತು. ಅದಕ್ಕೆ ಕೇನ್ ನೀಡಿದ ಉತ್ತರ ಅಷ್ಟೇ ಸೊಗಸಾಗಿದೆ. ಈ ಮೂಲಕ ಕೇನ್ ಭಾರತೀಯರ ಹೃದಯವನ್ನು ಮತ್ತೊಮ್ಮೆ ಗೆದ್ದಿದ್ದಾರೆ.

ಹಾಗಾದರೆ ಕೇನ್ ವಿಲಿಯಮ್ಸನ್ ಹೇಳಿದ ವಿಶ್ವಶ್ರೇಷ್ಟ ಆಟಗಾರ ಯಾರು ಗೊತ್ತಾ!

ಕೇನ್ ಹೊಗಳಿದ್ದು ಬೇರೆ ಯಾರನ್ನೂ ಅಲ್ಲ!

ಕೇನ್ ಹೊಗಳಿದ್ದು ಬೇರೆ ಯಾರನ್ನೂ ಅಲ್ಲ!

ನಿಮ್ಮ ಊಹೆ ನಿಜ. ಕೇಮ್ ಹೊಗಳಿದ್ದು ಬೇರೆ ಯಾರನ್ನೂ ಅಲ್ಲ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು. ಪತ್ರಕರ್ತರು ಕೇಳಿದ ಪ್ರಶ್ನೆಗೆ ಕೇನ್ ವಿಲಿಯಮ್ಸನ್ ' ಈ ವಿಚಾರದಲ್ಲಿ ಯಾವುದೇ ಅನುಮಾನಗಳಿಲ್ಲ. ಪ್ರಸಕ್ತ ಎಲ್ಲಾ ಮಾದರಿಗಳಲ್ಲೂ ಶ್ರೇಷ್ಟ ಆಟಗಾರ ವಿರಾಟ್ ಕೊಹ್ಲಿ' ಎಂದು ಟೀಮ್ ಇಂಡಿಯಾ ನಾಯಕನನ್ನು ಹೆಸರಿಸಿದ್ದಾರೆ.

ಕೇನ್ ಮತ್ತು ಕೊಹ್ಲಿ ಆಪ್ತ ಗೆಳೆಯರು:

ಕೇನ್ ಮತ್ತು ಕೊಹ್ಲಿ ಆಪ್ತ ಗೆಳೆಯರು:

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಕೇಮ್ ವಿಲಿಯಮ್ಸನ್ ಇಬ್ಬರೂ ಆಪ್ತ ಗೆಳೆಯರು. ಇಬ್ಬರೂ ಆಟಗಾರರು ಅಂಡರ್‌ 19 ಸಮಯದಿಂದಲೂ ತಮ್ಮ ತಮ್ಮ ದೇಶಗಳನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. 2008ರ ಅಂಡರ್‌19 ವಿಶ್ವಕಪ್‌ನಲ್ಲಿ ತಮ್ಮ ತಂಡಗಳ ನಾಯಕರಾಗಿದ್ದವರು.ಇಬ್ಬರ ನಡುವೆ ಉತ್ತಮ ಬಾಂಧವ್ಯವಿದೆ.

ಕೇನ್‌ಗೆ ಸಂಕಷ್ಟದಲ್ಲಿ ಬೆಂಬಲವಾಗಿದ್ದ ಕೊಹ್ಲಿ

ಕೇನ್‌ಗೆ ಸಂಕಷ್ಟದಲ್ಲಿ ಬೆಂಬಲವಾಗಿದ್ದ ಕೊಹ್ಲಿ

ಆಸ್ಟ್ರೆಲಿಯಾ ವಿರುದ್ಧದ ಸರಣಿಯನ್ನು ನ್ಯೂಜಿಲೆಂಡ್ ತಂಡ ಹೀನಾಯವಾಗಿ 3-0 ಅಂತರದಿಂದ ಕಳೆದುಕೊಂಡಾಗ ಕೇನ್ ವಿಲಿಯಮ್ಸನ್ ನಾಯಕತ್ವದ ಬಗ್ಗೆ ಅಪಸ್ವರಗಳು ಕೇಳಿ ಬಂದಿತ್ತು. ಕೀವಿಸ್‌ನ ಕೆಲ ಮಾಜಿ ಆಟಗಾರರೇ ಕೇನ್ ಮೂರು ಫಾರ್ಮೆಟ್‌ಗಳಲ್ಲಿ ನಾಯಕನಾಗಿ ಮುಂದುವರಿಯುವುದು ಸರಿ ಅಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೇನ್ ಪರ ವಹಿಸಿ ಮೆಚ್ಚುಗೆಯ ಮಾತುಗಳನ್ನಾಡಿ ಧೈರ್ಯ ತುಂಬಿದ್ದರು.

ಬೌಂಡರಿ ಲೈನ್‌ನಲ್ಲಿ ಕುಳಿತು ವಿರಾಟ್ ವಿಲಿಯಮ್ಸನ್ ಮಾತು:

ಬೌಂಡರಿ ಲೈನ್‌ನಲ್ಲಿ ಕುಳಿತು ವಿರಾಟ್ ವಿಲಿಯಮ್ಸನ್ ಮಾತು:

ಅದು ಟೀಮ್ ಇಂಡಿಯಾ ಮತ್ತು ನ್ಯೂಜಿಕೆಂಡ್ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯ. ಕೀವಿಸ್ ನಾಯಕ ಕೇನ್ ಗಾಯಗೊಂಡು ವಿಶ್ರಾಂತಿಯಲ್ಲಿದ್ದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರಾಮವನ್ನು ಪಡೆದುಕೊಂಡಿದ್ದರು. ಎಲ್ಲರೂ ಪಂದ್ಯದ ಮೇಲೆ ಗಮನ ಹರಿಸಿದ್ದರೆ ವಿಶ್ರಾಂತಿಯಲ್ಲಿದ್ದ ಇತ್ತಂಡಗಳ ನಾಯಕರು ಬೌಂಡರಿ ಲೈನ್‌ ಬಳಿ ನೆಲದ ಮೇಲೆ ಕುಳಿತು ಹರಟುತ್ತಿದ್ದರು. ಸುದೀರ್ಘ ಕಾಲದವರೆಗೆ ಈ ಮಾತುಕತೆ ಮುಂದುವರೆದಿತ್ತು.

'ಅವರಲ್ಲಿ ದ್ವೇಷವಿಲ್ಲ' ಕೊಹ್ಲಿ ಹೇಳಿಕೆ

'ಅವರಲ್ಲಿ ದ್ವೇಷವಿಲ್ಲ' ಕೊಹ್ಲಿ ಹೇಳಿಕೆ

ಕೇನ್ ವಿಲಿಯಮ್ಸನ್ ಜೊತೆ ಬೌಂಡರಿ ಲೈನ್‌ನಲ್ಲಿ ನಡೆಸಿದ ಚರ್ಚೆಯ ಕುರಿತು ವಿರಾಟ್ ಕೊಹ್ಲಿ ವಿಲ್ಲಿಂಗ್ಟನ್‌ನಲ್ಲಿರುವ ಇಂಡಿಯಾ ಹೌಸ್‌ಗೆ ಟೀಮ್ ಇಂಡಿಯಾ ಆಟಗಾರರು ಭೇಟಿ ನೀಡಿದ ಸಂದರ್ಭದಲ್ಲಿ ಕೊಹ್ಲಿ ಹೇಳಿಕೆ ನೀಡಿದ್ದರು. ಕಳೆದೆರಡು ವರ್ಷಗಳಲ್ಲಿ ಟೀಮ್ ಇಂಡಿಯಾ ಪ್ರದರ್ಶನದ ಹಿನ್ನೆಲೆಯಲ್ಲಿ ಎಲ್ಲಾ ಎದುರಾಳಿಗಳು ಟೀಮ್ ಇಂಡಿಯಾವನ್ನು ಸೋಲಿಸಲು ಬಯಸುತ್ತವೆ. ನ್ಯೂಜಿಲೆಂಡ್ ತಂಡವೂ ಅದರಿಂದ ಹೊರತಾಗಿಲ್ಲ. ಆದರೆ ನ್ಯೂಜಿಲೆಂಡ್ ತಂಡದಲ್ಲಿ ಯಾವುದೇ ದ್ವೇಶವಿಲ್ಲ. ಅದೇ ಕಾರಣಕ್ಕೆ ಕೇನ್ ವಿಲಿಯಮ್ಸನ್ ಜೊತೆಗೆ ಬೌಂಡರಿ ಲೈನ್ ಬಳಿ ಕುಳಿತು ಜೀವನದ ಬಗ್ಗೆ ಮಾತುಕತೆ ನಡೆಸಲು ಸಾಧ್ಯವಾಯಿತು. ಕ್ರಿಕೆಟ್ ಬಗ್ಗೆ ಮಾತನಾಡಿಲ್ಲ ಎಂದು ಕೊಹ್ಲಿ ಹೇಳಿದ್ದರು.

Story first published: Saturday, February 22, 2020, 9:32 [IST]
Other articles published on Feb 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X